Wednesday, 15 August 2018

Diddrence place celebrated 72 independence day

9.#DARUL_IRSHAD_MANI
#KGN ಕ್ಯಾಂಪಸ್ ಮಿತ್ತೂರು'ನಲ್ಲಿ ನಡೆದ #72ನೇ_ಸ್ವಾತಂತ್ರೋತ್ಸವ ಸಂಭ್ರಮ.
Independence Day
 🌹



ggggg

























                                                                                                                                                                                                                                                                                                                                                                                                          

                                           
10.ಎಸ್‌ ಎಸ್ ಎಫ್ ಆಲಡ್ಕ ಶಾಖೆಸ್ವಾತಂತ್ರ್ಯ ದಿನಾಚರಣೆಯ 
ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಾಳೆ ಬೆಳಿಗ್ಗೆ 7:30ಕ್ಕೆ ನಡೆಯುತ್ತದೆ ತಾವು ತಪ್ಪದೇ ಬಂದು ಸಹಕರಿಸಿ

DIFFERENCE PLACE CELEBRATED 72 INDEPENDENCE DAY

1.MARKAZ KOZIKODE KERALA



2.JAMIA SAADIYA KASARAGOD




3.ಉಳ್ಳಾಲ ಕಲ್ಲಾಪು ಪಟ್ಲ ಮದ್ರಸ, ಮಸೀದಿ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ




5.Asas educational centre,mallur.
Independence Day.


6.72nd Independence Day at MAJLIS GANEMAR






7.Al madeena islamic complex manjanady . naringana , mangaluru. Independence Day.





8.72 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ SSF ಆಝಾದಿರಾೃಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ದಲ್ಲಿ



9.#DARUL_IRSHAD_MANI
#KGN ಕ್ಯಾಂಪಸ್ ಮಿತ್ತೂರು'ನಲ್ಲಿ ನಡೆದ #72ನೇ_ಸ್ವಾತಂತ್ರೋತ್ಸವ ಸಂಭ್ರಮ.
Independence Day 


🌹

Wednesday, 6 June 2018

SSFಇಹ್ಸಾನ್ ಕರ್ನಾಟಕ ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು.

SSFಇಹ್ಸಾನ್ ಕರ್ನಾಟಕ ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ ಒಂದಿಷ್ಟು.

ಕರ್ನಾಟಕ ಕಲ್ಚರಲ್ ಫೌಂಡೇಶನ್(KCF)ನ ಸಂಪೂರ್ಣ ಸಹಕಾರದೊಂದಿಗೆ

ಕಾರ್ಯಾಚರಿಸುತ್ತಿರುವ   SSFಇಹ್ಸಾನ್ ಕರ್ನಾಟಕ


ಬೂದುಗುಪ್ಪ ಎಂಬ ಹಳ್ಳಿಯಲ್ಲಿರುವ ದಾರುಲ್ ಇಹ್ಸಾನ್ ಸೆಂಟರ್ ಬಗ್ಗೆ  ಒಂದಿಷ್ಟು.


✍🏻ಹಾರಿಸ್ ಪೆರಿಯಪಾದೆ


            ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೂದುಗುಪ್ಪ ಎಂಬ ಪ್ರದೇಶದಲ್ಲಿರುವ ಬಗ್ಗೆ ದಾರುಲ್ ಇಹ್ಸಾನ್ ಸೆಂಟರ್ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಈ ವರ್ಷದ ರಮಳಾನಿನಲ್ಲಿ ಇಹ್ಸಾನ್ ದಾಇಯಾಗಿ ಆಗಮಿಸಿದ ಸಿನಾನ್ ಅಗ್ರಹಾರ ಇವರನ್ನು ನಾನು ಮತ್ತು ಜುನೈದ್ ಉಸ್ತಾದ್ ಅರಬಿಗುಡ್ಡೆ ಭೇಟಿಯಾದಾಗ ಅಲ್ಲಿನ ಬಗ್ಗೆ ತಿಳಿದ ಕೆಲವೊಂದು ವಿಷಯಗಳನ್ನು

ಬರೆದಿರುತ್ತೇನೆ. ಓದಿ ಇಹ್ಸಾನ್ ದಾಯಿಗಳಿಗೆ ಮತ್ತು ಸಂಪೂರ್ಣ ಸಹಕಾರ ನೀಡುವ ಕೆ.ಸಿ.ಎಫ್ ಕಾರ್ಯಕರ್ತರಿಗೆ ತಪ್ಪದೆ ದುವಾ ಮಾಡಿ. 






2014 ರಲ್ಲಿ ಇಹ್ಸಾನ್ ಕರ್ನಾಟಕ ಸಮಿತಿಯ ವತಿಯಿಂದ ಉತ್ತರ ಕರ್ನಾಟಕದ ವಿವಿದ ಭಾಗಗಳಿಗೆ 15 ದಾಇಗಳನ್ನು ಕಳಿಸಲಾಯಿತು. 

ಅದರಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೂದುಗುಪ್ಪ ಎಂಬ ಪ್ರದೇಶಕ್ಕೆ ಫಾರೂಕ್ ಹಿಮಮಿ ಆತೂರು ಇವರನ್ನು ಆಯ್ಕೆ ಮಾಡಲಾಯಿತು.

ಆರಂಭದಲ್ಲಿ ಇಲ್ಲಿನ ಪರಿಸ್ಥಿತಿ ಹೇಗಿತ್ತೆಂದರೆ ಇಲ್ಲಿರುವ ಮುಸ್ಲಿಮರು ಅನ್ಯ ಧರ್ಮದ ಸಂಪ್ರದಾಯಗಳನ್ನು ಜೀವನದಲ್ಲಿ ಅಳವಡಿಸುತ್ತಿದ್ದರು.

ಅನ್ಯ ಧರ್ಮೀಯರ ಹಬ್ಬಗಳನ್ನು ಆಚರಿಸುತ್ತಾ, ದೇವತೆಗಳನ್ನು ಪೂಜಿಸುತ್ತಾ, ಪ್ರತೀ ಮನೆಯಲ್ಲಿಯೂ ದೇವತೆಗಳ ಪೋಟೋ ಇಡುತ್ತಿದ್ದರು. ಇದಕ್ಕೆಲ್ಲ ಕಾರಣವೂ ಇದೆ. ಇಲ್ಲಿನ ಜನರಿಗೆ ಇಸ್ಲಾಮಿನ ತತ್ವ ಸಿದ್ಧಾಂತಗಳೇ ತಿಳಿದಿಲ್ಲ. ಮಸೀದಿ ಮದ್ರಸಗಳಿಲ್ಲ. ಸೃಷ್ಟಿಕರ್ತನಿದ್ದಾನೆ ಎಂಬ ನಂಬಿಕೆಯಿಂದ ಸಿಕ್ಕ ಸಿಕ್ಕ ಮೂರ್ತಿಗಳನ್ನು ಪೂಜಿಸುತ್ತಾ ಜೀವಿಸುತ್ತಿದ್ದರು. ಬೆಳಿಗ್ಗೆ ಎದ್ದು ಮದ್ಯಾಹ್ನದ ಊಟದ ಬುತ್ತಿ ಹಿಡಿದು ಹೊಲಕ್ಕೆ ಹೋದರೆ ಸಾಯಂಕಾಲ ಮನೆಗೆ ಬರುವುದು ಇವರ ವಾಡಿಕೆ. ಪರಿಶುದ್ಧ ಇಸ್ಲಾಮಿನ ಆದರ್ಶಗಳನ್ನು ತಿಳಿಯದ ಇವರಿಗೆ ಮದ್ಯಪಾನ ದೈನಂದಿನ ಜೀವನದ ಹವ್ಯಾಸವಾಗಿತ್ತು. ಬ್ಯಾಂಡ್, ಡ್ಯಾನ್ಸ್, ಶರಾಬು ಕುಡಿಯುವುದು, ಮದುವೆಯ ಒಂದು ಭಾಗವೆಂದೇ ಮನಗಂಡಿರುವ ಇವರು ಮುಂಜಿನ ಮದುವೆಗೆ, ಮರಣಹೊಂದಿದ ಮೂರನೇ ದುವಾಕ್ಕೆ ಶರಾಬುಗಳೇ ಇವರ ವೆಲ್ಕಂ ಡ್ರಿಂಕ್. ಇವರನ್ನು ನಾಮಾದಾರಿ ಮುಸ್ಲಿಂ ಅಂತನೂ ಹೇಳೋಕ್ಕಾಗಲ್ಲ. ಯಾಕೆಂದರೆ ಇವರ ಹೆಸರಿಗೂ ಮುಸ್ಲಿಮರ ಹೆಸರಿಗೂ ಯಾವುದೇ ಸಂಬಂಧವಿರೋದಿಲ್ಲ. ಇಷ್ಟೊಂದು ಇಸ್ಲಾಮಿನ ಗಂಧಗಾಳಿ ಇಲ್ಲದ ಊರಾಗಿತ್ತು ಈ ಬೂದಿಗುಪ್ಪ.

ಇಂತಹ ಸಂದರ್ಭದಲ್ಲಿ ಕಳೆದ 4 ವರುಷಗಳ ಹಿಂದೆ ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಸಮಿತಿಯ ನಿರ್ದೇಶನದಂತೆ ಉಪ್ಪಿನಂಗಡಿ ಸಮೀಪದ ಆತೂರಿನ ಫಾರೂಕ್ ಹಿಮಮಿ ಉಸ್ತಾದ್ ಇವರು ಧರ್ಮ ಭೋದಕರಾಗಿ ಆಗಮಿಸುತ್ತಾರೆ. ಅಲ್ಲಿಂದ ಬದಲಾವಣೆಯ ಗಾಳಿ ಬೀಸಿತು. ಇವರು ತನ್ನ ಮುತಅಲ್ಲಿಂ ಜೀವನದಲ್ಲೇ ಉತ್ತರ ಕ ಕರ್ನಾಟಕ ಭಾಗಕ್ಕೆ ಬಂದು ದಅ್ವಾ ನಡೆಸುತ್ತಿದ್ದರು. ಹಿಮಮಿ ಬಿರುದುದಾರಿಯಾದ ನಂತರ

ಸತತ ನಾಲ್ಕು ವರುಷಗಳ ಕಾಲ ಇಹ್ಸಾನ್ ರಾಜ್ಯ ಸಮಿತಿಯ ನಿರ್ದೇಶನದಂತೆ ಪಾರತ್ರಿಕ ವಿಜಯದ ಗುರಿಯಾಗಿಟ್ಟುಕೊಂಡು







ಸುನ್ನತ್ ಜಮಾಅತಿನ ಪ್ರಚಾರ ಮಾಡಿದ ಫಲವಾಗಿ ಇಂದು ಬೂದಿಗುಪ್ಪದಲ್ಲಿ ದಾರುಲ್ ಇಹ್ಸಾನ್ ಸೆಂಟರ್ ತಲೆಯೆತ್ತಿ ನಿಂತಿದೆ. ಮಾಶಾ ಅಲ್ಲಾಹ್.

ಆರಂಭದ ದಿನಗಳಲ್ಲಿ ಸಣ್ಣ ಕೊಠಡಿಯಲ್ಲಿ ಹೊಟ್ಟೆಗೆ ಸರಿಯಾದ ಆಹಾರವೂ ಇಲ್ಲದೆ, ತ್ಯಾಗದ ಜೀವನ ನಡೆಸಿದರು.

ಮದ್ರಸ ಎಂದರೆ ಏನೆಂದೂ ತಿಳಿಯದ ಆಸುಪಾಸಿನ ಪಾಸಿನ ಮನೆಗೆ ಭೇಟಿ ನೀಡಿ ದೀನ್ ಬೋದಿಸಿದರು. ಆ ಸಂದರ್ಭದಲ್ಲಿ ಮನೆಯಲ್ಲಿದ್ದ ದೇವತೆಗಳ ಪೋಟೋ ಕಂಡು ಆಶ್ಚರ್ಯಗೊಂಡ ಉಸ್ತಾದ್ ಪ್ರತಿ ಮನೆಗೂ ಬದ್ರಿಯತ್, ಮಕ್ಕಾ ಮದೀನಾದ ಪೋಟೋ, ಶಹರೇ ಮುಬಾರಕ್ ಮಸೀದಿಯ ಪೋಟೋ, ನಹಲೇ ಮುಬಾರಕ್ ಪೋಟೋ ತಂದು ಕೊಟ್ಟು ಅದನ್ನು ಮನೆಯಲ್ಲಿ ಇಡಲು ಹೇಳಿ ಆ ದೇವತೆಗಳ ಪೋಟೋ ತೆಗೆಸಿದರು.

ನಂತರ ಕಠಿಣ ಪರಿಶ್ರಮದ ಫಲವಾಗಿ ಅಲ್ಲಾಹನ ಅನುಗ್ರಹದಿಂದ ರಫೀಕ್ ಸಖಾಫಿ ಕುಂಬ್ರ ಇವರ ನೇತೃತ್ವದಲ್ಲಿ ಮಸೀದಿ ಮದ್ರಸ ನಿರ್ಮಿಸಲು ಸಾದ್ಯವಾಯಿತು. ಇದರ ನಡುವೆ ಮುಸ್ತಫಾ ಹಿಮಮಿ ಸಾಲೆತ್ತೂರು ಒಂದು ವರುಷಗಳ ಕಾಲ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು.


ಫಾರೂಕ್ ಹಿಮಮಿ ಉಸ್ತಾದರ ಬಗ್ಗೆ ಶಿಷ್ಯರ ಮಾತು.

       ಮದರಸಕ್ಕೆ ಬಂದ ವಿದ್ಯಾರ್ಥಿಗಳಿಗೆ  ಮೊದಲಿಗೆ ಶಿಸ್ತು ಮತ್ತು ಸ್ವಚ್ಚತೆಯ ಬಗ್ಗೆ ತಿಳಿಸುತ್ತಾ  ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಜೀವನ ಚರಿತ್ರೆ, ಉಲೂಹ್, ನಮಾಝ್, ಪ್ರವಾದಿ ಕೀರ್ತನೆಗಳು, ಮುಸ್ಲಿಮರನ್ನು ಪರಸ್ಪರರ ಭೇಟಿಯಾದಾಗ ಅಸ್ಸಲಾಂ ಅಲೈಕುಂ ಹೇಳಬೇಕೆಂದು ತಿಳಿಸಿದರು. ಅದಲ್ಲದೆ ನೀವು ಕಲಿತ ವಿಷಯಗಳನ್ನು  ನಿಮ್ಮ ಮನೆಯವರಿಗೂ, ಮದ್ರಸಕ್ಕೆ ಹೋಗುವಾಗ ಬರುವಾಗ ಸಿಗುವ ಸ್ನೇಹಿತರಿಗೂ ತಿಳಿಸುವಂತೆ ತಿಳಿಸಿದರು. ಸಿನಿಮಾ ಹಾಡು ಹಾಡುತ್ತಾ ನಡೆಯುತ್ತಿದ್ದ ಮಕ್ಕಳ ಬಾಯಲ್ಲಿ ನಅತ್,ಪ್ರವಾದಿ ಕೀರ್ತನೆಗಳು ಬರತೊಡಗಿದವು.

ಅಲ್ಲಾಹನು ನಮಗೆ ನೀಡಿದ ಅನುಗ್ರಹಗಳ ಬಗ್ಗೆ ವಿವರಿಸುತ್ತಾ ಸ್ವರ್ಗ- ನರಕದ ಬಗ್ಗೆ ತಿಳಿಸಿದರು. ನರಕದ ಭಯಾನಕತೆಯ ಬಗ್ಗೆ ತಿಳಿಸುತ್ತಾ ಮೋಸ, ವಂಚನೆ, ಕಳ್ಳತನ,ವ್ಯಭಿಚಾರ, ಮದ್ಯಪಾನ,ಸುಳ್ಳು ಹೇಳುವುದು ಇವೆಲ್ಲವೂ ನರಕದ ಹಾದಿಯಾಗಿದೆ. ತಂದೆ ತಾಯಿಯನ್ನು ಗೌರವಿಸುವುದು, ದಾನದರ್ಮ ಮಾಡುವುದು ಹೀಗೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಪ್ರೀತಿಸುತ್ತಾ ಅಲ್ಲಾಹನ ಆಜ್ಞೆಯನ್ನು ಪಾಲಿಸುತ್ತಾ ಜೀವಿಸಿದರೆ ಸ್ವರ್ಗದ ಸುಖ ಸಂತೋಷಗಳನ್ನು ಪಡೆಯಬಹುದೆಂದು ತಿಳಿಸಿದರು. ಹೀಗೆ ಮಕ್ಕಳಿಗೆ ದಾರ್ಮಿಕ ವಿಷಯಗಳನ್ನು ಮನದಟ್ಟು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. SSF ಇಹ್ಸಾನ್ ಕರ್ನಾಟಕ ಇದರ ಅಧೀನದಲ್ಲಿ ನಿರ್ಮಿಸಲ್ಪಟ್ಟ ದಾರುಲ್ ಇಹ್ಸಾನ್ ಅಹ್ದಲಿಯಾ ಮದ್ರಸ ಎಂಬ ನಾಮದಿಂದ ಇರುವ ಈ ಮದ್ರಸದಲ್ಲಿ ಇಸ್ಲಾಮಿ  ವಸ್ತ್ರದಾರಣೆಯಲ್ಲಿ ಸಮವಸ್ತ್ರ ಧರಿಸಿದ ಅರುವತ್ತರಷ್ಟು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.



ಈ ಮದ್ರಸದಲ್ಲಿ ಕಲಿತ ಆರು ವಿದ್ಯಾರ್ಥಿಗಳು ದಾರುಲ್ ಇಹ್ಸಾನ್ ಎಜುಕೇಶನ್ ಸೆಂಟರ್ ಹರಿಹರದಲ್ಲಿ ಧಾರ್ಮಿಕ ಲೌಕಿಕ ವಿಧ್ಯಾಭ್ಯಾಸ ಪಡೆಯತ್ತಿದ್ದಾರೆ.


ಬದಲಾವಣೆ

          ಮದುವೆಯ ಮನೆಗಳಲ್ಲಿ ನಡೆಯತ್ತಿದ್ದ ಬ್ಯಾಂಡ್ ವಾದ್ಯಗಳು ದಫ್ ಆಗಿ ಬದಲಾಯಿತು. ಮರಣದ ಮನೆಯಲ್ಲಿ ನಡೆಯತ್ತಿದ್ದ ಭಜನೆಗಳು ಮದ್ರಸ ವಿದ್ಯಾರ್ಥಿಗಳಿಂದ ಕುರ್ಆನ್ ತಹ್ಲೀಲ್'ಗಳಾಗಿ ಪರಿವರ್ತನೆಯಾಯಿತು. ರಬಿವುಲ್ ಅವ್ವಳ್ 1ರಿಂದ 11ರ ತನಕ ಮದ್ರಸಕ್ಕೆ ಬರುವ ವಿದ್ಯಾರ್ಥಿಗಳ ಮನೆಯಲ್ಲಿ ಮೌಲಿದ್ ಪಾರಾಯಣ ನಡೆಯಿತು. ಮತ್ತು 12 ರಂದು ಬೃಹತ್  ರಾಲಿಯೊಂದಿಗೆ ಮಕ್ಕಳ ಮೀಲಾದ್ ಕಾರ್ಯಕ್ರಮಗಳು ಬಹಳಷ್ಟು ವಿಜ್ರಂಭನೆಯಿಂದ ನಡೆಯಿತು. ಪ್ರತೀ ದಿನ ಬೆಳಿಗ್ಗೆ ಮದ್ರಸ ವಿದ್ಯಾರ್ಥಿಗಳು ಅಸ್ಮಾಉಲ್ ಬದರ್ ಮತ್ತು ಯಾಸೀನ್ ಓದಿ ಬದ್ರಿಂಙಳ ಹೆಸರಿನಲ್ಲಿ ಹದಿಯಾ ಮಾಡುತ್ತಾರೆ. ವಾರಂ ಪ್ರತಿ ಸ್ವಲಾತ್ ಮಜ್ಲಿಸ್ ಕೂಡ ನಡೆಯುತ್ತಿದೆ. ಬಹಳಷ್ಟು ಪರಿವರ್ತನೆ ಆದರೂ ಕೂಡಾ ಕಡುಬಡವರಾದ ಕೆಲವರು ಸುಡುಬಿಸಿಲಿನಲ್ಲೂ ಹೊಲದ ಕೆಲಸದ ಕಾರಣದಿಂದ ರಮಳಾನಿನಲ್ಲಿ ಉಪವಾಸ ಆಚರಿಸಲು ಹಿಂಜರಿಯುತ್ತಿದ್ದಾರೆ.


ಕೊನೇಯದಾಗಿ

        ಇದು ಕೇವಲ ಒಂದು ಹಳ್ಳಿಯ ಚರಿತ್ರೆ ಮಾತ್ರವಾಗಿದೆ. ಇದೇ ರೀತಿ ಉತ್ತರ ಕರ್ನಾಟಕದ ವಿವಿಧ ಭಾಗದಲ್ಲಿ ಹಲವಾರು ಇಹ್ಸಾನ್ ದಾಇಗಳು ತ್ಯಾಗಮಯ ಜೀವನ ನಡೆಸುತ್ತಿದ್ದಾರೆ. ಅಲ್ಲಾಹನು ಆ ದಾಇಗಳಿಗೆ ಮತ್ತು ದಾಇಗಳ ಬೆನ್ನೆಲುಬಾಗಿ ಸಂಪೂರ್ಣ ಸಹಕಾರ  ನೀಡುತ್ತಿರುವ ಕೆ.ಸಿ.ಎಫ್ ಕಾರ್ಯಕರ್ತರಿಗೆ ಸ್ವರ್ಗವನ್ನು ನೀಡಿ ಅನುಗ್ರಹಿಸಲಿ  ಆಮೀನ್.

ಅಲ್ಹಂದುಲಿಲ್ಲಾಹ್ 

ಪವಿತ್ರ ರಮಳಾನಿನ ಉಪವಾಸಿಗರಾಗಿ ದೀರ್ಘ ಯಾತ್ರೆ ಬಂದ ನಮಗೆ ಸುಸ್ತಾಗಿದ್ದಾರೂ ಬೂದಿಗುಪ್ಪ ಎಂಬ ಹಳ್ಳಿ ಪ್ರದೇಶದ ಮುಗ್ಧ ಜನರ ಮನಸ್ಸಿನ ಮುಂದೆ ನಮ್ಮ ಎಲ್ಲಾ ಸಂಕಷ್ಟಗಳು ಇಲ್ಲವಾಯಿತು. ಮಂಗಳೂರಿನ ಹಝ್ರತ್ ಬಂದಿದ್ದಾರೆ ಎಂದರೆ ಊರಿಗೇ ಹಬ್ಬದ ವಾತಾವರಣ. ಕೆಲವು ಮನೆಗೆ ಭೇಟಿ ನೀಡಿ ಇಸ್ಲಾಮಿನ ತತ್ವಗಳನ್ನು ತಿಳಿಸಿದೆವು. ನಮ್ಮೊಂದಿಗೆ ಪ್ರೀತಿಯಿಂದ ಮಾತನಾಡುತ್ತಾ ನಮ್ಮನ್ನು ಮುಸಾಫಾತ್ ಮಾಡಿ ದುವಾ ವಸೀಯತ್ ಮಾಡಿದರು.


✍🏻ಹಾರಿಸ್ ಪೆರಿಯಪಾದೆ

Sunday, 22 April 2018

ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಬಟರ' ಫ್ಲೈ ಕ್ಯಾಂಪ್



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್   ವತಿಯಿಂದ ಎಸ್.ಬಿ.ಎಸ್ ವಿಧ್ಯಾರ್ಥಿಗಳಿಗೆ ಬಟರ್ ಫ್ಲೈ ಕ್ಯಾಂಪ್ ಪೆರಾಳದಲ್ಲಿ ನಡೆಯಿತು. ಸೆಕ್ಟರ್ ಉಪಾಧ್ಯಕ್ಷರಾದ ಜುನೈದ್ ಮುಸ್ಲಿಯಾರ್ ಅರಬಿಗುಡ್ಡೆ  ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪೆರಾಲ ಮಸೀದಿ ಖತೀಬರಾದ ಉಸ್ಮಾನ್ ಸಖಾಫಿ ಉಸ್ತಾದರು ದುವಾಗೈದು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಪೆರಾಳ ಸ್ವಾಗತಿಸಿದರು. ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ  "ಜಲ ಅಮೂಲ್ಯ ಸಂಪತ್ತು"*ಲ ಎಂಬ ವಿಷಯದಲ್ಲಿ ತರಗತಿ ನಡೆಸಿದರು.





ಇಸ್ಲಾಮಿನಲ್ಲಿ ಮಹತ್ವ ಕಲ್ಪಿಸಿದ ಐದು ವಿಧದ ನೀರುಗಳಾದ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರ ಕೈ ಬೆರಳಿನಿಂದ ಬಂದ ನೀರು, ಝಂ ಝಂ ನೀರು, ಹೌಳುಲ್ ಕೌಸರ್, ನೈಲ್ ನದಿಯ ನೀರು, ಸಾಮಾನ್ಯ ನೀರು ಹೀಗೆ ಐದು ಪ್ರಮುಖ ನೀರಿನ ಬಗ್ಗೆ ವಿವರಿಸಿದರು. ಭೂಮಿಯಲ್ಲಿರುವ ಒಟ್ಟು ನೀರಿನಲ್ಲಿ ಕೇವಲ ಒಂದು ಶತಮಾನ ಮಾತ್ರ ಶುದ್ಧ ನೀರಾಗಿರುತ್ತದೆ ಉಳಿದ ತೊಂಬತ್ತೊಂಬತ್ತು ಶತಮಾನ  ಉಪ್ಪು, ಮಂಜು, ಹಿಮ ಗಳಾಗಿರುತ್ತದೆ ಆದುದರಿಂದ ನೀರನ್ನು ಮಿತವಾಗಿ ಬಳಸಬೇಕೆಂದು ಕರೆ ನೀಡಿದರು.
ನಂತರ "ಒಳಿತಿಗಾಗಿ ಒಗ್ಗೂಡಿ" ಎಂಬ ವಿಷಯದಲ್ಲಿ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ಉಪಾಧ್ಯಕ್ಷರಾದ ಜುನೈದ್ ಮುಸ್ಲಿಯಾರ್ ಅರಬಿಗುಡ್ಡೆ ತರಗತಿ ನಡೆಸಿದರು. ಅಲ್ಲಾಹನ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ತಮ್ಮ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸಬೇಕು, ಪ್ರತಿ ದಿನವೂ ಸ್ವಲಾತ್ ಹೇಳಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕ್ಯಾಂಪಸ್ ಕಾರ್ಯದರ್ಶಿ ಆಶಿಕ್ ಪೆರಾಲ,ಪದಾಧಿಕಾರಿಗಳಾದ ಅಶ್ರಫ್ ಸಖಾಫಿ ಪೆರಾಲ, ಸುಹೈಲ್ ಕುಳಾಲ್, ಸಂಶುದ್ದೀನ್ ಪೆರಾಳ ಉಪಸ್ಥಿತರಿದ್ದರು.

Thursday, 29 March 2018

We have achieved one more milestone by foundation stone laying ceremony of Ihsan Center sponsored by KCF Saudi Arabia in Hubli Town Today .

‎الحمد لله 
We have achieved one more milestone by foundation stone laying ceremony of Ihsan Center sponsored by KCF Saudi Arabia  in Hubli Town Today .




The foundation was laid by Assayyid Abu Backer Siddiq Thanhal Theerthahalli, followed by his precious blessing .
On this occasion IHSAN Chairman Shafi Saadi , IHSAN Vice chaiman BA Ibrahim Saquafi Davanagere , Uwais Manzari Hubli, IHSAN Supervisor Shahul Hameed Musliyar , KM Musthafa Naeemi , Althaf Thokkottu , Mueenuddeen Khan Sab and other Leaders of Ihsan witnessed the event .

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ವತಿಯಿಂದ ಮತದಾನ ನಮ್ಮ ಹಕ್ಕು ಕಾರ್ಯಕ್ರಮ



ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಡಿವಿಷನ್  ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "ಮತದಾನ ನಮ್ಮ ಹಕ್ಕು  ಕಾರ್ಯಕ್ರಮ "  ಇತ್ತೀಚೆಗೆ ದಾರುಲ್ ಇಝ್ಝಾ ಕೌಡೇಲಿನಲ್ಲಿ ನಡೆಯಿತು. ಡಿವಿಷನ್  ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ  ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಮ್ ಸಖಾಫಿ ಉಸ್ತಾದರು ದುವಾಗೈದು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿದರು. ಕೌಡೇಲ್ ಖತೀಬರಾದ ಮಜೀದ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಆಶಾಂಶ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಇಹ್ಸಾನ್ ಕರ್ನಾಟಕ ಇದರ ರಾಜ್ಯಾಧ್ಯಕ್ಷರಾದ ಶಾಫಿ ಸಅದಿ ಉಸ್ತಾದರು ಮತದಾನದ ಮಹತ್ವವನ್ನು ವಿವರಿಸಿದರು.



ಹದಿನೆಂಟು ವರುಷ ತುಂಬಿದ ಪ್ರತಿಯೊಬ್ಬರಿಗೂ ವಿವೇಚನಾ ಶಕ್ತಿ ಇದೆ. ತಮ್ಮ ರಾಜ್ಯದಲ್ಲಿ ಯಾರು ಆಡಳಿತ ನಡೆಸಬೇಕು, ಯಾವ ಅಭ್ಯರ್ಥಿಯನ್ನು ವಿಧಾನಸಭೆಗೆ ಕಳುಹಿಸಿ ಕೊಡಬೇಕೆಂಬ  ಜ್ಞಾನ ಪ್ರತಿಯೊಬ್ಬರಿಗೂ ಇದೆ. ಎಸ್ಸೆಸ್ಸೆಫ್ ಕಾರ್ಯಕರ್ತರು ಯಾವುದೇ ರಾಜಕೀಯ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯಾಚರಿಸದೆ, ಪ್ರಜಾಪ್ರಭುತ್ವ ಭಾರತದ ಸಂವಿಧಾನವನ್ನು ಗೌರವಿಸಿ ನಾಡಿನ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುವ ಅಭ್ಯರ್ಥಿಗಳನ್ನು ವಿಧಾನಸಭೆಗೆ ಆಯ್ಕೆ ಮಾಡಬೇಕಾಗಿ ಕರೆ ನೀಡಿದರು.
ಕಾರ್ಯಕ್ರಮದಲ್ಲಿ  ಡಿವಿಷನ್ ಪದಾಧಿಕಾರಿಗಳು ಹಾಗೂ ಕಾರ್ಯಾಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

✍🏻 ಹಾರಿಸ್ ಪೆರಿಯಪಾದೆ

Popular Posts

Blog Archive