Saturday, 28 October 2017

ಯುವಜನತೆಯ ಬರಹಗಳು ಕೇವಲ ಅಂತರ್ಜಾಲಗಳಿಗೆ ಮಾತ್ರ ಸೀಮಿತವಾಗದಿರಲಿ - ರಶೀದ್ ವಿಟ್ಲ

          ನಾಲಕ್ಕು ಅಕ್ಷರಗಳ ಕರುಣೆ ತುಂಬಿದ ಬರಹದಿಂದ ಸಮಾಜದಲ್ಲೂ ಮತ್ತು  ಮಾನವರ ಎಡೆಯಲ್ಲೂ ಅಳಿಸಲಾಗದ ಬಹು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಲು ಸಾಧ್ಯ ಎಂದು   ಪ್ರಮುಖ ಪತ್ರಕರ್ತರು ಬರಹಗಾರರೂ ಮತ್ತು ಉತ್ತಮ ಸಮಾಜ ಸೇವಕರು ಆದ ರಶೀದ್ ವಿಟ್ಲ ರವರು ಹೇಳಿದರು.
   
         ಮುಂದುವರಿದು ಮಾತನಾಡಿದ ಅವರು ಸಮಾಜದಲ್ಲಿ ಯಾವುದಾದರೂ ವಿಷಯದಲ್ಲಿ ಅಥವಾ ಯಾವುದೇ ಧರ್ಮ ಮತ್ತು ಪಂಗಡಗಳ ಎಡೆಯಲ್ಲಿ ಯಾವುದಾದರು ಸಣ್ಣ ಪುಟ್ಟ ವಿವಾದಗಳು ಇದ್ದಲ್ಲಿ ಅದನ್ನು ಬೌದೊಡ್ಡ ವಿಷಯವಾಗಿ ಬರೆದು ಸಮಾಜದಲ್ಲಿ ಇನ್ನಷ್ಟು ವಿವಾದಗಳನ್ನು ಸೃಷ್ಟಿ ಮಾಡುವುದು ಬರಹಗಾರರಿಗೆ ಭೂಷಣವಲ್ಲ ಎಂದು ಅವರು ದೊಹಾ ಖತ್ತರಿನಲ್ಲಿ ನೆಡೆದ ಕೆ. ಸಿ. ಫ್  ಸಾಹಿತ್ಯ ಕಲಾ ಒಕ್ಕೂಟದ  ಉದ್ಘಾಟನಾ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದರು.






        ಸಮುದಾಯದ,ಸಮಾಜದ ಪರಿಹಾರಿಸಲಾಗದ ಸಮಸ್ಯೆಯನ್ನು ಕೇವಲ ಒಂದು ಸಣ್ಣ ಬರಹದಿಂದ ಪರಿಹಾರಿಸಬಹುದೆಂದು ಅವರ ಜೀವನದಲ್ಲಿ ನಡೆದಂತ ಕೆಲವೂಂದು ಹಚ್ಚ ಹಸಿರು ಅನುಭವವನ್ನು ಅನಿವಾಸಿ ಕನ್ನಡಿಗರೂಂದಿಗೆ ಹಂಚಿದರು.ನಂತರ ಒಂದು ಉತ್ತಮ ಲೇಖನ ಹೇಗಿರಬೇಕು ಎಂಬುದರ ಬಗ್ಗೆ ಪರಸ್ಪರ ಪ್ರಶ್ನೋತ್ತರ ಕಾರ್ಯಕ್ರಮ ಕೂಡ ನಡೆಯಿತು.ಕಾರ್ಯಕ್ರಮದಲ್ಲಿ ಯೂಸಫ್ ಸಖಾಫಿ ಉಸ್ತಾದ್ ಅಯ್ಯಂಗೆರಿ ರವರು ಅದ್ಯಕ್ಷತೆಯನ್ನು ವಹಿಸಿದರು ಹಾಫಿಳ್ ಉಮರುಲ್ ಫಾರೂಕ್ ಸಖಾಫಿ ಉಸ್ತಾದ್ ಉದ್ಘಾಟಿಸಿದ ಸಭೆಯಲ್ಲಿ ರಹೀಮ್ ಸಆದಿ ಉಸ್ತಾದ್ ಫಾರೂಕ್ ಕ್ರಷ್ಣಾಪುರ ಅನೀಫ್ ಪಾತುರೂ ಆಸಿಫ್ ಕರೊಪಾಡಿ,ರಝೀನ್  ಸುಳ್ಯ,ರಿಶಾದ್ ಮಧುವನ ಮೊದಲಾದವರು ಮಾತನಾಡಿದರು.ಮೊದಲಿಗೆ ರಿಶಾದ್ ಸ್ವಾಗತಿಸಿ ಕೊನೆಯಲ್ಲಿ ಸಅದಿ ಉಸ್ತಾದ್ ವಂದಿಸಿದರು.ನಝೀರ್ ಮೂರ್ನಾಡು ಕಾರ್ಯಕ್ರಮವನ್ನು ನಿರೂಪಿಸಿದರು.
      










Popular Posts

Blog Archive