ಬಂಟ್ವಾಳ: ಎಸ್ಎಸ್ಎಫ್ ಪೆರಿಯಪಾದೆ ಶಾಖೆಯ ಮಾಸಿಕ ತರಗತಿ ಹಾಗೂ ಮೆಹಫಿಲೇ ತಯಿಬ ಝಿಕ್ರ್ ಮಜ್ಲಿಸ್ ಇತ್ತೀಚೆಗೆ ಆದಂ ಗಣಪಳಿಕೆಯವರ ಮನೆಯಲ್ಲಿ ನಡೆಯಿತು.
ಕೆ.ಸಿ.ಎಫ್ ಕಾರ್ಯಕರ್ತರಾದ ಕಬೀರ್ ಝುಹುರಿ ಉಸ್ತಾದರು ದುವಾಗೈದು, ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
ಎಸ್ ವೈ ಎಸ್ ಬಂಟ್ವಾಳ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಗ್ರಹಾರ ತರಗತಿ ಮಂಡಿಸಿದರು. ಎಸ್ ವೈ ಎಸ್ ಇದರ ಅಗತ್ಯತೆ ಹಾಗೂ ಅದಕ್ಕೆ ನೇತೃತ್ವ ನೀಡುವ ಉಲಮಾಗಳ ಬಗ್ಗೆ ವಿವರಿಸಿ ಅತೀ ಶೀಘ್ರದಲ್ಲಿ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ರಚಿಸಲು ಕರೆ ನೀಡಿದರು. ಎಸ್ ವೈ ಎಸ್ ನಲ್ಲಿ ಕಾರ್ಯಾಚರಿಸುವುದು ಮರಣಾನಂತರದ ಲಾಭಕ್ಕಾಗಿ ಮಾತ್ರವಾಗಿದೆ ಎಂದು ಸಾಂಧರ್ಬಿಕವಾಗಿ ಹೇಳಿದರು. ನಂತರ ರಫೀಕ್ ಝುಹುರಿ ಉಸ್ತಾದರು ಮಾತನಾಡಿ ಕೆಸಿಎಫ್ ಸಂಘಟನೆಯ ಬಗ್ಗೆ ವಿವರಿಸಿ ಇತ್ತೀಚೆಗೆ ಹಜ್ಜ್ ವಾಲೆಂಟರ್ ಆಗಿ ಸೇವೆ ಸಲ್ಲಿಸಿದ ಕೆಸಿಎಫ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.
ಕೊನೆಯಲ್ಲಿ ಪೊಸೋಟು ತಂಙಳ್ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಇರ್ಷಾದ್ ಸ್ವಾಬಿರ್ ಮತ್ತು ನಮ್ಮೆಲ್ಲರ ಕುಟುಂಬಸ್ಥರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಲಾಯಿತು.
*✍🏻ಹಾರಿಸ್ ಪೆರಿಯಪಾದೆ*