ಅರ್ಥಶೂನ್ಯವಾದ ಜೀವನಕ್ಕೆ ಅರ್ಥವತ್ತಾದ ಮೌಲ್ಯಗಳನ್ನು ಕಲಿಸಿಕೊಟ್ಟು ಬೆಳೆಸಿದ ಸಂಘಟನೆ. ಅಧರ್ಮದ ಹಾದಿ ಹಿಡಿದ ಯೌವನಕ್ಕೆ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!
ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಸೇವೆ,ಶೈಕ್ಷಣಿಕ ಕ್ರಾಂತಿಯ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಜನ್ಮ ತಾಳಿದ ಎಸ್ಸೆಸ್ಸಫ್, ಕರ್ನಾಟಕದ ಮಣ್ಣಿಗೆ ಕಾಲಿರಿಸಿ ಇಪ್ಪತ್ತೆಂಟು ಸಂವತ್ಸರಗಳು ಕಳೆದು ಹೋದವು.
ಆರೋಪ,ಅಪಪ್ರಚಾರ,ಅಪಹಾಸ್ಯಗಳನ್ನೆಲ್ಲಾ ನಗುಮೊಗದಿಂದಲೇ ಸ್ವೀಕರಿಸಿ ಮುನ್ನೇರಿದ ಸಂಘಟನೆ ಕನ್ನಡ ನಾಡಿನಲ್ಲಿ ಸೃಷ್ಟಿಸಿದ ಕ್ರಾಂತಿಗಳು ಮಾತ್ರ ಅತ್ಯಧ್ಭುತವಾದದ್ದು..!!
ಆರೋಪ,ಅಪಪ್ರಚಾರ,ಅಪಹಾಸ್ಯಗಳನ್ನೆಲ್ಲಾ ನಗುಮೊಗದಿಂದಲೇ ಸ್ವೀಕರಿಸಿ ಮುನ್ನೇರಿದ ಸಂಘಟನೆ ಕನ್ನಡ ನಾಡಿನಲ್ಲಿ ಸೃಷ್ಟಿಸಿದ ಕ್ರಾಂತಿಗಳು ಮಾತ್ರ ಅತ್ಯಧ್ಭುತವಾದದ್ದು..!!
"ಕೆಡುಕುಗಳಿಂದ ಒಳಿತಿನೆಡೆಗೆ" ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್ ಯುವ ಸಮೂಹವು ಗಾಂಜಾ,ಮಾದಕ ವಸ್ತುಗಳ ದಾಸರಾಗುತ್ತಿರುವ ಸಂದರ್ಭಗಳೆಲ್ಲಾ ಅವರನ್ನು ಅದರಿಂದ ದೂರವಿರಿಸುವಂತೆ ಮಾಡಿ, ನಿರಂತರವಾಗಿ ಅದರ ಕುರಿತು ಜಾಗೃತಿ ಆಂದೋಲನ ಒಳಿತೆನೆಡಗೆ ಅವರನ್ನು ಕೊಂಡೊಯ್ಯವಲ್ಲಿ ಸಫಲವಾಗಿದೆ.
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.

ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.
ಕಾಲೇಜ್ ಕ್ಯಾಂಪಸ್ ಗಳು ಅನೈತಿಕೆಯ ತಾಣಗಳಾಗುತ್ತಿರುವಂತಹ ಸಂದರ್ಭದಲ್ಲೂ, ಯತೀಂ ಮಕ್ಕಳ ಶೈಕ್ಷಣಿಕ ಶಿಕ್ಷಣಕ್ಕೆ ಅವರ ಬಡತನಗಳು ಕಾರಣಗಳಾಗುತ್ತಿರುವಾಗಲೂ ಶೈಕ್ಷಣಿಕ ಕ್ರಾಂತಿಯ ಮೂಲಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತು, ಸಮುದಾಯದ ನೊಂದ ಮನಸ್ಸುಗಳಿಗೆ ಆಸರೆಯಾದವು.
ಧಾರ್ಮಿಕ ಪ್ರಜ್ಞೆಯ ಅರಿವನ್ನು ಹೊಂದಿರದ ಉತ್ತರ ಕನ್ನಡದ ಹಲವು ಭಾಗಗಳಿಗೆ ಇಹ್ಸಾನ್ ತಂಡವನ್ನು ಕಳುಹಿಸಿ, ಅಲ್ಲಿಯ ಜನತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ, ಹಿಂದುಳಿದ ಸಮುದಾಯದ ಜನರಿಗೆ ಶೈಕ್ಷಣಿಕ ಶಿಕ್ಷಣವನ್ನು ಕೊಡಿಸುವಂತಹ ವ್ಯವಸ್ಥೆಯನ್ನು ಮಾಡಿ ಕೊಡುವಲ್ಲಿ ಸಂಘಟನೆ ಯಶಸ್ವಿಯಾಗಿದೆ.
ಸಮುದಾಯದ ಸಹೋದರಿಯರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿರುವಂತಹ ಸಂದರ್ಭದಲ್ಲೇ ಕಾಲೇಜ್ ಕ್ಯಾಂಪಸ್ ಗಳಲ್ಲಿ ಅನಗತ್ಯ ವಿವಾದಗಳು ತಲೆದೋರುವಾಗ, ಸಮುದಾಯದ ಸಹೋದರಿಯರ ಮುಂದಿನ ಶೈಕ್ಷಣಿಕ ಹಾದಿಗೆ ತೊಡಕಾಗಬಾರದು ಅನ್ನುವ ದೂರದೃಷ್ಟಿಯಿಂದ ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯದ ಸಹೋದರಿಯರ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದವು.
ಕಳೆದ ಇಪ್ಪತ್ತೆಂಟು ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ. ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ಇಪ್ಪತ್ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಎಸ್ಸೆಸ್ಸಫ್ ನ *ಧ್ವಜ ದಿನದ* ಶುಭಾಶಯಗಳನ್ನು ಸಲ್ಲಿಸುತ್ತಾ,
ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸುತ್ತಿದ್ದೇನೆ.
ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ