Thursday, 26 October 2017
ಯಶಸ್ವಿಗೊಂಡ SELFIE ಕ್ಯಾಂಪ್
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಸೆಲ್ಫಿ ಕ್ಯಾಂಪ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವಿಷನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಂ ಸಕಾಫಿ ಸೆರ್ಕಲ ದವಾಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಉದ್ಘಾಟಿಸಿದರು.
ಕ್ಯಾಂಪಿನ ಅಮೀರ್ ಸಿದ್ದೀಕ್ ಮದನಿ ಉಸ್ತಾದರು ಕ್ಯಾಂಪಿನ ಉದ್ದೇಶ ಮತ್ತು ಸೆಲ್ಫಿ ಎಂಬ ಪದದ ವಿಶಾಲ ಅರ್ಥವನ್ನು ವಿವರಿಸಿದರು.
ಮುಹಮ್ಮದ್ ಅಲಿ ತುರ್ಕಳಿಕೆ Self improvement ಎಂಬ ವಿಷಯದಲ್ಲಿ ತರಗತಿ ಮಂಡಿಸಿದರು. ನಂತರ ಕ್ಯಾಂಪಿಗೆ ಭಾಗವಹಿಸಿದ್ದ ಸೆಕ್ಟರ್ ನಾಯಕರಿಗೆ ಐದು ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ನೀಡಿ ಪ್ರಥಮ ಸ್ಥಾನ ಗಳಿಸಿದ ವ್ಯಕ್ತಿಗೆ ಉತ್ತಮ ಬಹುಮಾನ ನೀಡುವುದಾಗಿ ಘೋಷಿಸಲಾಯಿತು. ಅದರೊಂದಿಗೆ ಮೂವತ್ತೊಂದು ಪ್ರಶ್ನೆಗಳನ್ನು ಒಳಗೊಂಡ ಒಂದು ಪ್ರಶ್ನೆ ಪತ್ರಿಕೆಯನ್ನು ನೀಡಿ ದಿನ ನಿತ್ಯದಲ್ಲಿ ಮಾಡಬೇಕಾದ ಸತ್ಕರ್ಮಗಳನ್ನು ಜಾಸ್ತಿ ಮಾಡುವಂತೆ ಪ್ರೇರೇಪಿಸಲಾಯಿತು.
ನಂತರ ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಿರಾಜುದ್ದೀನ್ ಸಕಾಫಿ ಕನ್ಯಾನರವರು ತರಗತಿ ನಡೆಸಿದರು.
ಎಸ್ ವೈ ಎಸ್ ಬಂಟ್ವಾಳ ಝೋನ್ ಸಮಿತಿಯ ಅಧ್ಯಕ್ಷರಾದ ಹಂಝ ಮದನಿ ಮಿತ್ತೂರು ನಸೀಹತ್ ಹೇಳಿ ದುವಾ ಮಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಕಲ್ಲಡ್ಕ, ಪಾಣೆಮಂಗಳೂರು, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ ಎಕ್ಸಿಕ್ಯುಟಿವ್ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದ ಈ ಕ್ಯಾಂಪಿನಲ್ಲಿ ಶೆಖಡಾ 85ರಷ್ಟು ಸದಸ್ಯರು ಭಾಗವಹಿಸಿ ಸೆಲ್ಫೀ ಕ್ಯಾಂಪ್ ಯಶಸ್ವಿಗೊಳಿಸಿದರು. ಅಲ್ಲದೆ ಡಿವಿಷನ್ ಸಮಿತಿಯ ಎಲ್ಲಾ 23 ಸದಸ್ಯರೂ ಭಾಗವಹಿಸಿ ಶೇಕಡಾ 100 ಹಾಜರಾತಿಯಾಗಿರೋದು ಕ್ಯಾಂಪಿನ ಯಶಸ್ವಿಗೆ ಮತ್ತೊಂದು ಕಾರಣವಾಯಿತು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಪಾಣೆಮಂಗಳೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕೊಳಕೆ, ಇಬ್ರಾಹಿಮ್ ಖಲೀಲ್ ಕಾವೂರು ಮತ್ತು ಎಸ್ ಎಸ್ ಎಫ್ ಬಂಟ್ವಾಳ ಡಿವಿಷನ್ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಸಅದಿ ಉಪಸ್ಥಿತರಿದ್ದರು.
-REPORT BY HARIS PERIYAPADE
Subscribe to:
Comments (Atom)
Popular Posts
Popular Posts
-
ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ ಇತ್ತೀಚೆಗೆ ...
-
ಜಗತ್ತಿನಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಲೇ ಇರುವಂತಹ ಅಲ್ಪಸಂಖ್ಯಾತ ಸಮುದಾಯವಾಗಿದೆ ರೊಹಿಂಗ್ಯಾ ಮುಸ್ಲಿಮರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಮುಸ...
-
ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಎಸ್.ಬಿ.ಎಸ್ ವಿಧ್ಯಾರ್ಥಿಗಳಿಗೆ ಬಟರ್ ಫ್ಲೈ ಕ್ಯಾಂಪ್ ಪೆರಾಳದಲ್ಲಿ ನಡೆ...
-
-
Happy to see young budding scholars moving ahead with academic excellence, enough to question the faults of modernity. Taping excellent res...
-
All India Jamiyyathul Ulama general secretary Kanthapuram A.P. Aboobacker Musliar said here on Tuesday that the Supreme Court should review...
-
Call for Papers Malaibar Institute for Advanced Studies (MIAS), a leading institute in Markaz Knowledge City, Calicut, Kerala, India , c...







