Saturday, 16 December 2017

ಪ್ರಸಿದ್ಧ ಫಿಖ್ಹ್ ಪಂಡಿತ ಶೈಖುನಾ ಮುಹಿಸುನ್ನ ಪೊನ್ಮಲ ಉಸ್ತಾದ್ ತುಂಬೆ ಸುನ್ನೀ ಕಲ್ಚರಲ್ ಸೆಂಟರಿಗೆ ಭೇಟಿ


ಸಮಸ್ತ ಕೇರಳ ಸುನ್ನೀ ಜಂಯಿಯ್ಯತುಲ್ ಉಲಮಾದ ಜೊತೆ ಕಾರ್ಯದರ್ಶಿ ಹಾಗು ಪ್ರಸಿದ್ಧ ಫಿಖ್ಹ್ ಪಂಡಿತ ಶೈಖುನಾ ಮುಹಿಸುನ್ನ ಪೊನ್ಮಲ ಉಸ್ತಾದ್ ಇಂದು ಮಧ್ಯಾಹ್ನ ತುಂಬೆ ಸುನ್ನೀ ಕಲ್ಚರಲ್ ಸೆಂಟರಿಗೆ ಭೇ ಟಿ ನೀಡಿದರು.





ಶೈಖುನಾ ಉಸ್ತಾದರು ನಿನ್ನೇ ರಾತ್ರಿ ಬಾಯರ್ ಸ್ವಲಾತ್ ಮಜ್ಲಿಸಿನಲ್ಲಿ ಭಾಗವಯಿಸಿ ಇಂದು ಬೆಳಿಗ್ಗೆ ಉಳ್ಳಾಲದ ಮಂಚಿಲ ಜುಮಾ ಮಸೀದಿಯಲ್ಲಿ ತರಗತಿ ನಡೆಸಿ ಕೆಲವೊಂದು ಕಾರ್ಯಕ್ರಮವನ್ನು ಮುಗಿಸಿ ಶೈಖುನಾ ಪೊನ್ಮಲ ಉಸ್ತಾದರ ಸಂಭಂಧಿಯಾದ ಎಸ್ಸಸ್ಸಫ್ ತುಂಬೆ ಶಾಖೆಯ ಅಧ್ಯಕ್ಷರಾದ ಮುಸ್ತಾಕ್ ಮದನಿ ಉಸ್ತಾದರ ವಿನಂತಿಯವೇರೆಗೆ ಶೈಖುನಾ ಮುಹಿಸುನ್ನ ಪೊನ್ಮಲ  ಉಸ್ತಾದರು ಸುನ್ನೀ ಕಲ್ಚರಲ್ ಸೆಂಟರಿಗೆ ಭೇಟಿ ನೀಡಿ  ಪ್ರಾಥಿಸಿದರು ಬಳಿಕ ಸಂಘಟನೆಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಸಂಘಟನೆ ಹಾಗು ಕಾರ್ಯಕರ್ತರಿಗೆ ಶುಭ ಹಾರೈಸಿದರು.








ಪ್ರಸುತ ಈ ಸಂದರ್ಭದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,ಎಸ್ಸಸ್ಸಫ್ ತುಂಬೆ ಶಾಖೆಯ ಅಧ್ಯಕ್ಷರಾದ ಬಹು!ಮುಸ್ತಾಕ್ ಮದನಿ,ಉಪಾಧ್ಯಕ್ಷಾರದ ಹನೀಫ್ ಎಂ.ಎ,ಜೊತೆ ಕಾರ್ಯದರ್ಶಿ ನೌಷದ್ ತುಂಬೆ,ಜೊತೆ ಕಾರ್ಯದರ್ಶಿ ಅಮೀನ್ ಟಿ.ಎ,ಕ್ಯಾಂಪಸ್ ಘಟಕದ ಕಾರ್ಯದರ್ಶಿ ಅಕ್ಬರ್ ಅಲಿ ತುಂಬೆ,ಫಯಾಝ್ ತುಂಬೆ ಮುಂತಾದವರು ಉಪಸ್ಥರಿದ್ದರು.

Popular Posts

Blog Archive