Sunday, 8 October 2017

*ಎಸ್ಸೆಸ್ಸೆಫ್ ರಾಷ್ಟ್ರೀಯ ‌ಸಮಾವೇಶ

*ಎಸ್ಸೆಸ್ಸೆಫ್ ರಾಷ್ಟ್ರೀಯ ‌ಸಮಾವೇಶ*

ಬೆಂಗಳೂರು (ಅ.08): ನಗರದ ಸೆವೋರಿಯಾ ಹೋಟೆಲ್‌ನಲ್ಲಿ ನಡೆಯುತ್ತಿರುವ ಎಸ್ಸೆಸ್ಸೆಫ್ ರಾಷ್ಟ್ರೀಯ ಪ್ರತಿನಿಧಿಗಳ ಸಮಾವೇಶದಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ. ಖಾದರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಶೌಕತ್ ನ‌ಈಮಿ ಕಾಶ್ಮೀರ, ಪ್ರಧಾನ ಕಾರ್ಯದರ್ಶಿ ಕೆ.ಎಂ. ಅಬೂಬಕರ್ ಸಿದ್ದೀಕ್, ಇಹ್ಸಾನ್ ರಾಜ್ಯ ಸಮಿತಿ ಅಧ್ಯಕ್ಷ ಶಾಫಿ ಸಅದಿ ಇನ್ನಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

say no todrugg ssf kasmir student rally


#ಡಾ_ಎಪಿ_ಅಬ್ದುಲ್_ಹಕೀಂ_ಅಝ್ಹರಿˌ ಎರಡು ದಿವಸದ ಸಂದರ್ಶನಕ್ಕಾಗಿ ಗುಜರಾತ್ ಗೆ..*

#
*("ಡಾ.ಬಿ.ಆರ್ ಅಂಬೇಡ್ಕರ್ ಎಂಪವರ್ಮೆಂಟ್ "ಪ್ರಶಸ್ತಿˌ ಹಕೀಂ ಅಝ್ಹರಿ ಉಸ್ತಾದರ ಮಡಿಲಿಗೆ....)*
ದಶಕಗಳ ಮುಂಚೆ ಯಾರಿಗೂ ತಿಳಿಯದಂತಹ ಗುಜರಾತ್ ನ ಒಂದು ಗ್ರಾಮವಾಗಿತ್ತು 'ಗೋಂಡಲ್'.
ತನ್ನ ಜೀವನ ಯಾತ್ರೆಯಲ್ಲಿ ಎಲ್ಲೋ ಸಿಕ್ಕಿದ ದೀನೀ ಸ್ನೇಹಿತನ ಸಹಾಯದಿಂದ ಗುಜರಾತ್ ನ ಮಣ್ಣಿಗೆ ಮರ್ಕಝ್ ನನ್ನು ಪರಿಚಯಿಸಿದರುˌಹಕೀಂ ಅಝ್ಹರಿ ಉಸ್ತಾದ್....
ನಮ್ಮೂರಿನವರು ಧಾರ್ಮಿಕ ವಿಧಿವಿಧಾನಗಳನ್ನ ಕಲಿಯಬೇಕು ಎಂಬ ಸದುದ್ಧೇಶದಿಂದˌ ದೊಡ್ಡ ಒಂದು ಕಟ್ಟಡವನ್ನ ಹಕೀಂ ಅಝ್ಹರಿ ಉಸ್ತಾದರ ಕೈ ಗೆ ಹಸ್ತಾಂತರಿಸುತ್ತಾರೆˌ ಆ ದೀನೀ ಸ್ನೇಹಿತ......
ಮರ್ಕಝ್ ಹೆಜ್ಜೆಹೆಜ್ಜೆಯನ್ನ ಇಡುತ್ತಾˌ ನಡೆನಡೆದು ಇಂದು ಗುಜರಾತ್ ನ ಭೂಪಟದಲ್ಲಿ ಪ್ರಕಾಶಿಸುವ ಮಹಾಗೋಪುರ ವಾಗಿ ಬೆಳೆದು ನಿಂತಿದೆ.
ಕೇರಳದ ಮರ್ಕಝ್ ರೂಬಿಜುಬಿಲಿಯನ್ನ ಆಚರಿಸುವಾಗ ಗುಜರಾತ್ ನ ಮರ್ಕಝ್ ದಶವಾರ್ಷಿಕ ಆಚರಿಸಲಿದೆ.
ಪ್ರಸ್ತುತ ವಾರ್ಷಿಕೋತ್ಸವದ ಮುಖ್ಯ ರೂವಾರಿಯಾಗಿ ಹಕೀಂ ಅಝ್ಹರಿ ಮುನ್ನಡೆಸಲಿದ್ದಾರೆ.
ಆದರೆˌ ಕಟ್ಟದ ದಾನ ಮಾಡಿದಂತಹ ಅಬ್ದುಲ್ ಗಫೂರ್ ನೂರಿ ಎಂಬ ಆ ದೀನೀ ಸ್ನೇಹಿತˌ ಇಂದು ನಮ್ಮೊಂದಿಗಿಲ್ಲˌˌ(ಅಲ್ಲಾಹು ಖಬರ್ ಸ್ವರ್ಗಮಯವನ್ನಾಗಿಸಲಿ.ಆಮೀನ್)
ಅತೀ ಕಠಿನಾವಸ್ಥೆಯಾಗಿತ್ತು ಹತ್ತು ವರ್ಷಗಳ ಮುಂಚಿನ ಗುಜರಾತ್ ನ ಅವಸ್ಥೆˌ.ಮರ್ಕಝ್ ನ ಕಾರ್ಯವೈಖರಿಗಳಿಂದ ನಿರ್ಭೀತಿಯಿಂದ ಇಂದು ಗುಜರಾತ್ ನಲ್ಲಿ ನಡೆದಾಡುವಂತಾಗಿದೆ.
ಗುಜರಾತ್ ನ ಹಲವು ಜಿಲ್ಲೆಗಳಲ್ಲಿ ಇಂದು ಒಂಬತ್ತು ಸ್ಕೂಲ್ ಗಳು ಕಾರ್ಯಚರಿಸುತ್ತಿವೆ.ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದೆ.ಹಲವಾರು ಮಸೀದಿಗಳು ಮರ್ಕಝ್ ಅಧೀನದಲ್ಲಿ ತಲೆಎತ್ತಿನಿಂತಿವೆ.
ಅದೂ ಅಲ್ಲದೇ ಅನಾಥ ಮಕ್ಕಳ ಸಂರಕ್ಷಣೆಯಲ್ಲೂ ಮರ್ಕಝ್ ನ ಸೇವೆ ಅನನ್ಯ.
ಗುಜರಾತ್ ನ ಮಣ್ಣಲ್ಲಿ 185 ಬಡಕುಟುಂಬಗಳ ಪೂರ್ಣ ಖರ್ಚುವೆಚ್ಚಗಳನ್ನ ಮರ್ಕಝ್ ಭರಿಸುತ್ತಿದೆ.ಹಲವಾರು ಮನೆಗಳಿಗೆ ಬಾವಿ ನಿರ್ಮಿಸಿ ಕೊಡಲಾಗಿದೆ.ರೋಗಿಗಳ ಶುಶ್ರೂಷಣೆಯೂ ಭರವಾಗಿಯೇ ನಡೆಯುತ್ತಿದೆ.
ಈ ಎಲ್ಲಾ ಕಾರುಣ್ಯ ಸೇವೆಗಳ ಮುಖ್ಯ ರುವಾರಿˌ #ಶೈಖುನಾ_ಸುಲ್ತಾನುಲ್_ಉಲಮಾ_ಕಾಂತಪುರಂ_ಎಪಿ_ಉಸ್ತಾದ'ರ ಸುಪುತ್ರರಾಗಿರುವ ಡಾ.ಹಕೀಂ ಅಝ್ಹರಿ ಉಸ್ತಾದರದ್ದು.
2010 ರಲ್ಲಿ ಗೋಂಡಾಲ್ ನಲ್ಲಿ 2014 ರಲ್ಲಿ ಅಹ್ಮದಾಬಾದ್ ನಲ್ಲಿ ಶೈಖುನಾರ ಸಹಿತ ಇಸ್ಲಾಮಿಕ್ ಸಮ್ಮೇಳನ ವಿಜ್ರಂಭಣೆಯಿಂದಲೇ ನಡೆದಿತ್ತು.ಗುಜರಾತ್ ಎಸ್ಸೆಸ್ಸೆಫ್ˌ ಮುಸ್ಲಿಂ ಜಮಾಅತ್ ಸಂಘಟನೆಗಳು ಮರ್ಕಝ್ ನೊಂದಿಗೆ ಕೈ ಜೋಡಿಸಿ ಕಾರ್ಯಾಚರಿಸುತ್ತಿದೆ.
ಗುಜರಾತ್ ಮರ್ಕಝ್ ನ ದಶವಾರ್ಷಿಕ ಪ್ರಚಾರಾರ್ಥˌ ಹಕೀಂ ಅಝ್ಹರಿ ಉಸ್ತಾದ್ ಇಂದು(8/10/2017)ಗುಜರಾತ್ ತಲುಪಲಿದ್ದಾರೆ.
ಗೋಂಡಾಲ್ ನಲ್ಲಿ ನಡೆಯುವ ಇಂಟರ್ ಫೇಸ್ ಕಾಂಫರೆನ್ಸ್ ನಲ್ಲಿ "ಮಹಾತ್ಮಾ ಗಾಂಧೀ ಪೀಸ್ ಲೆಕ್ಚರ್" ಮುನ್ನಡೆಸಲಿದ್ದಾರೆ. ಗುಜರಾತ್ ಎಸ್ಸೆಸ್ಸೆಫ್ ಹಾಗೂ ಗೋಂಡಾಲ್ ಮರ್ಕಝ್ ಏರ್ಪಡಿಸಿದ "ಡಾ.ಬಿ.ಆರ್ ಅಂಬೇಡ್ಕರ್ ಸೋಷಿಯಲ್ ಎಂಪವರ್ಮೆಂಟ್" ಪ್ರಶಸ್ತಿ ಪಡೆಯಲಿದ್ದಾರೆ ಹಕೀಂ ಅಝ್ಹರಿ ಉಸ್ತಾದ್ .
(ಭಾಷಾಂತರ)
ಶೈಖುನಾ ಎ.ಪಿ. ಉಸ್ತಾದರ ನಿರ್ದೇಶನದಲ್ಲಿ
ಗುಜರಾತ್ ನ ಮಣ್ಣಲ್ಲಿ ಧಾರ್ಮಿಕ ಪ್ರಜ್ಙೆ ಮೂಡಿಸವಲ್ಲಿ
ರಾತ್ರಿ ಹಗಲೆನ್ನದೇ ಕಷ್ಟಪಡುವ ಅಝ್ಹರಿ ಉಸ್ತಾದರಿಗೆ ಅಲ್ಲಾಹು ಹಿಮ್ಮತ್ ನೀಡಲಿˌಆಮೀನ್
💢ಎಂ.ಕೆ.ಸಿನಾನ್ ಅಜಿಲಮೊಗರು💢
mksinan212@gmail.comDr. Muhammed Abdul Hakkim Azhari
Markazu Saqafathi Sunniyya Ruby Jubilee,

B. C ROAD BLOOD CAMP LIVE PHOTOS










ಸಕ್ರೀಯ ಕಾರ್ಯಕರ್ತ ಹಬೀಬ್ ಸಜೀಪ ವಿದೇಶದತ್ತ

*ಸುಖಃ ಪ್ರಯಾಣ ನಿಮ್ಮದು,,,,,,, ಶುಭ ಹಾರೈಕೆ ನಮ್ಮದು*

           *ಬಂಟ್ವಾಳ ಸುನ್ನಿ ಸಕ್ರಿಯ ಕಾರ್ಯಕರ್ತ ನಮ್ಮೆಲ್ಲರ ಆತ್ಮೀಯ ಸ್ನೇಹಿತ ಸಜೀಪ ಹಬೀಬ್ ರವರು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡುವ ಅವರನ್ನ ಸಜೀಪ ಎಸ್ಎಸ್ಎಫ್ ಹಾಗೂ ಎಸ್ ವೈ ಎಸ್ ವತಿಯಿಂದ ಸಾಲು ಹೊದಿಸಿ ಬೀಳ್ಕೊಡುಗೆ ಸಮಾರಂಭವು ಸಜೀಪ ಸುನ್ನೀ ಮಸ್ಜಿದ್ ನಲ್ಲಿ ಹೈದರ್ ಹಾಜಿ ರವರ ಅಧ್ಯಕ್ಷತೆ ಯಲ್ಲಿ ಜರುಗಿತು. ಸಮಾರಂಭದಲ್ಲಿ ಸಿದ್ದೀಖ್ ಸಖಾಫಿ, ಫಾರೂಕ್ ಅಂಜದಿ,ಉಸ್ಮಾನ್ ಸಖಾಫಿ, ಇರ್ಶಾದ್ ಮದನಿ,ಲತೀಫ್ ಮುಸ್ಲಿಯಾರ್, ಖಬೀರ್,ಸ್ವಾಲಿಹ್,ಮುಸ್ತಫಾ ಉಪಸ್ಥಿತರಿದ್ದರು*

Popular Posts

Blog Archive