SSF ಅಂದರೆ, ಅಹ್ಲುಸ್ಸುನ್ನತಿ ವಲ್ ಜಮಾಹತ್ ಎಂಬ ಇಸ್ಲಾಮಿನ ನೈಜ ಸಿದ್ಧಾಂತವನ್ನು ಸಂರಕ್ಷಿಸಲು ಪ್ರಗಲ್ಭರಾದ ಉಲಮಾಗಳು, ಸಯ್ಯಿದ್-ಸಾದಾತುಗಳು, ಅವುಲಿಯಾಗಳು ಕಟ್ಟಿ ಬೆಳೆಸಿದ ಸಂಘಟನೆಯಾಗಿದೆ. ಅದರ ಪ್ರತಿಯೊಂದು ಕಾರ್ಯಕ್ರಮವೂ ಕೂಡಾ ಆರಾಧನೆ ಯಾಗಿದೆ. ಅದನ್ನು ಯಶಸ್ವಿಗೊಳಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡಾ.
ಸುನ್ನತ್ ಜಮಾಹತ್ ಇಲ್ಲಿ ಬಲಿಷ್ಠವಾಗಬೇಕಾದರೆ, ಅದಕ್ಕಾಗಿ ಕಾರ್ಯಾಚರಿಸುವ ಸಂಘಟನೆ ಕೂಡಾ ಬಲಿಷ್ಠವಾಗಬೇಕು. ಸಂಘಟನೆ ಬಲಿಷ್ಠವಾಗಬೇಕಾದರೆ, ಅದರ ಪ್ರತಿಯೊಂದು ಕಾರ್ಯಕ್ರಮವು ಕೂಡಾ ಯಶಸ್ವಿಯಾಗಬೇಕು. ಕಾರ್ಯಕ್ರಮವು ಯಶಸ್ವಿಯಾಗಬೇಕಾದರೆ, ನಮ್ಮಂತಹ ಕಾರ್ಯಕರ್ತರು ಅದರಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಸುನ್ನತ್ ಜಮಾಹತ್ ಸಂರಕ್ಷಣೆಗಾಗಿ ಇದಕ್ಕಿಂತಲೂ ಉತ್ತಮ ಸೇವೆ ಮಾಡಲು ನಮ್ಮಂತವರಿಗೆ ಖಂಡಿತಾ ಸಾದ್ಯವಿಲ್ಲ. ಆದುದರಿಂದ, ನಮಗೆ ಸಿಕ್ಕಿದ ಈ ಒಂದು ಉತ್ತಮ ಅವಕಾಶವನ್ನು ನಾವು ಸದುಪಯೋಗ ಪಡಿಸಲೇಬೇಕು. ಇದು ನಾವು ಸುನ್ನತ್ ಜಮಾಹತ್ ಗೆ ಬೇಕಾಗಿ ಮಾಡುವ ಒಂದು ಅಳಿಲು ಸೇವೆ ಮಾತ್ರವಾಗಿದೆ. ಈ ಒಂದು ಅವಕಾಶವನ್ನು ಮಾಡಿಕೊಟ್ಟ ಅಲ್ಲಾಹನಿಗೆ ಸಾವಿರ ಸಾವಿರ ಸ್ತುತಿಗಳು.
ನಾವು ಅಲ್ಲಾಹನಿಗಾಗಿ ಒಂದು ಹೆಜ್ಜೆ ಮುಂದಿಟ್ಟರೆ, ಅಲ್ಲಾಹು ನಮಗಾಗಿ ಹತ್ತಾರು ಹೆಜ್ಜೆ ಮುಂದಿಡುವನು. ಅಲ್ಲಾಹನ ಧರ್ಮ ಸಂರಕ್ಷಣೆಗಾಗಿ ಉಲಮಾಗಳು ರೂಪುಕೊಟ್ಟ ಸಂಘಟನೆಯ ಕಾರ್ಯಕ್ರಮವನ್ನು ನಾವು ಯಶಸ್ವಿ ಗೊಳಿಸಲು ಶ್ರಮಿಸಿದರೆ, ಖಂಡಿತಾ ನಮ್ಮ ಹತ್ತಾರು ಯೋಜನೆ-ಉದ್ದೇಶ ಗಳನ್ನು ಅಲ್ಲಾಹು ಯಶಸ್ವಿ ಗೊಳಿಸುತ್ತಾನೆ. ಅದರಲ್ಲಿ ಯಾವುದೇ ಸಂಶಯವಿಲ್ಲ.
ಕೋಟಿ ರೂಪಾಯಿ ಸಹಾಯ ಮಾಡಿದವನಿಗೆ ಒಂದು ನೂರು ರೂಪಾಯಿ ತಿರುಗಿ ಸಹಾಯ ಮಾಡಲು ನಾವೇಗೆ ಹಿಂಜರಿಯುವುದಿಲ್ಲವೋ, ಅದಕ್ಕಿಂತಲೂ ಮಿಗಿಲಾಗಿ, ಬೆಲೆ ಕಟ್ಟಲಾದ ಕಣ್ಣು, ಕಾಲು, ಕೈ, ಆರೋಗ್ಯ, ಸಂಪತ್ತು ಅದೇರೀತಿ, ಎಲ್ಲದಕ್ಕಿಂತಲೂ ಮಿಗಿಲಾಗಿ ಹಿದಾಯತ್ ನ್ನು ಉಚಿತವಾಗಿ ಕರುಣಿಸಿದ, ವರ್ಷದಲ್ಲಿ ಮುನ್ನೂರೈವತ್ತು ದಿನ ಕೆಲಸ ಮಾಡಲು ಶಕ್ತಿ ಮತ್ತು ಆರೋಗ್ಯವನ್ನು ಕರುಣಿಸಿದ ಅಲ್ಲಾಹನಿಗಾಗಿ, ಅವನ ಧರ್ಮ ಸಂರಕ್ಷಣೆಗಾಗಿ ಕಾರ್ಯಾಚರಿಸುವ ಸಂಘಟನೆಗಾಗಿ ಒಂದರ್ಧ ದಿನ ರಜೆ ಮಾಡಲು ನಾವ್ಯಾಕೆ ಹಿಂಜರಿಯಬೇಕು?.
ಇಲ್ಲ, ಖಂಡಿತಾ ನಾನು ಹಿಂಜರಿಯಲಾರೆ.
ಅಲ್ಲಾಹನಿಗಾಗಿ ಒಂದರ್ಧ ದಿನ ರಜೆ ಮಾಡಲು ಅವಕಾಶ ಸಿಕ್ಕಿದ್ದೇ ನನ್ನ ಸೌಭಾಗ್ಯ. ಅದು ನನ್ನ ಪಾಲಿಗೆ ಅಭಿಮಾನ. ಆ ಒಂದರ್ಧ ದಿನದ ಕಾರಣದಿಂದ, ನಮ್ಮ ಮರಣದ ವರೆಗೂ ಆರೋಗ್ಯವನ್ನು, ಸಂಪತ್ತನ್ನೂ ಅಲ್ಲಾಹು ವೃದ್ಧಿಸುವನು ಖಂಡಿತಾ, ಅಲ್ಲಾಹು ಕರುಣಿಸಲಿ, ಆಮೀನ್.
in sha allah, ಶನಿವಾರ ಮಧ್ಯಾಹ್ನ 2 ಗಂಟೆಗೆ SSF ಜಿಲ್ಲಾ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ನಾನು ತೀರ್ಮಾನಿಸಿದ್ದೇನೆ, ಮತ್ತು ನೀವು 👉🏽......
ಬರುವ ನಂಬಿಕೆ ಇದೆ. ಇನ್ಶಾಅಲ್ಲಾಹ್