Thursday, 28 December 2017

ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ : ಮಂಚಿ ಸೆಕ್ಟರ್ ಪ್ರಥಮ ಸ್ಥಾನ

ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ ಇತ್ತೀಚೆಗೆ ಬಿಸಿ ರೋಡಿನ ಸ್ಪರ್ಶಾ ಹಾಲಿನಲ್ಲಿ ನಡೆಯಿತು.





ಎಸ್ ವೈ ಎಸ್ ಬಿ.ಸಿ ರೋಡು ಬ್ರಾಂಚಿನ ಅಧ್ಯಕ್ಷರಾದ ಹಾಜಿ ಅಬ್ದುಲ್ ಬಶೀರ್ ಮಿತ್ತ ಬೈಲು ಧ್ವಜಾರೋಹಣ ನೆರವೇರಿಸಿದರು. ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಪ್ರತಿಭೋತ್ಸವ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ರಫೀಕ್ ಝುಹುರಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕನ್ವೀನರ್ ಇರ್ಷಾದ್ ಗೂಡಿನ ಬಳಿ ಸ್ವಾಗತಿಸಿ,


                           (ಮರಯಾಗಿ ಹೋದ ತಾಜುಲ್ ಉಲಮಾ ಹಾಡು - ಭಾವುಕಗೊಂಡ ಸಭಿಕರ ದಂಡು)


ಎಸ್.ಪಿ ಹಂಝ ಸಖಾಫಿ ಉಸ್ತಾದರು ದುವಾಗೈದು ಉದ್ಘಾಟಿಸಿದರು.
ನಂತರ ನಾಲ್ಕು ಸೆಕ್ಟರಿನಿಂದ ಡಿವಿಜನ್ಗೆ ಆಯ್ಕೆಯಾದ ವಿದ್ಯಾರ್ಥಿಗಳ ವಿವಿಧ ಪ್ರತಿಭಾ ಕಾರ್ಯಕ್ರಮ ನಡೆಯಿತು.




                                (ಗಮನ ಸೆಳೆದ ಸಯನ್ಸ್ ಮೋಡೆಲ್)
ಸಾಯಂಕಾಲ ಐದು ಗಂಟೆಗೆ ಸಮಾರೋಪ ಸಮಾರಂಭ ನಡೆಯಿತು. ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಉಸ್ತಾದ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ  ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷರಾದ ಶಾಫಿ ಸಅದಿ ಬೆಂಗಳೂರು ಮತ್ತು ಜಿಲ್ಲಾ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿ ಕನ್ಯಾನ ಆಗಮಿಸಿ ವಿದ್ಯಾರ್ಥಿಗಳಿಗೆ ಹಿತವಚನ ನೀಡಿದರು.
ಕೊನೆಯಲ್ಲಿ ಬಹುಮಾನ ವಿತರಣೆ ನಡೆಯಿತು. ಮಂಚಿ ಸೆಕ್ಟರ್ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ಷಿಪ್ ಟ್ರೋಫಿ ತನ್ನದಾಗಿಸಿಕೊಂಡಿತು. ಪಾಣೆಮಂಗಳೂರು ಸೆಕ್ಟರ್ ದ್ವಿತೀಯ ಸ್ಥಾನ ಗಳಿಸಿದರೆ, ಬಂಟ್ವಾಳ ಸೆಕ್ಟರ್ ತೃತೀಯ  ಸ್ಥಾನ ಪಡೆದುಕೊಂಡಿತು.

ವರದಿ:
✍🏻ಹಾರಿಸ್ ಪೆರಿಯಪಾದೆ

Popular Posts

Popular Posts

Blog Archive