Saturday, 26 August 2017

ಕೈಗಳು ನಡುಗುತ್ತಿದೆ.... ಇರ್ಷಾದ್ ಕರ್ನೂರ್ ನಮ್ಮಿಂದಗಳಿದ ವಾರ್ತೆ ಕೇಳಿ ಮನ ನೋಯುತ್ತಿದೆ....

ಸದಾ ಹಸನ್ಮುಖಿ.ಉತ್ತಮ ಗುಣ ನಡತೆಯ ಪ್ರತಿರೂಪ.ಪುತ್ತೂರಿನ ನೂರಾರು ವಿಧ್ಯಾರ್ಥಿಗಳಿಗೆ ಚಿರಪರಿಚಿತ ನಾಮ.ನನ್ನ ಸಹ ಕಾರ್ಯಕರ್ತ.ಕಳೆದ ವರ್ಷ ನಿರಂತರ ಎಸ್ ಎಸ್ ಎಫ್ ಕ್ಯಾಂಪಸ್ ಪುತ್ತೂರು ಕಾರ್ಯಕ್ರಮಗಳಲ್ಲಿ ಕಾಣುತ್ತಿದ್ದ ಮೇರು ವ್ಯಕ್ತಿತ್ವ ಇರ್ಷಾದ್ ಕರ್ನೂರ್...

     ಇದೀಗ ಅಪಘಾತದಲ್ಲಿ ನಿಧನ ವಾರ್ತೆ ಕೇಳಿ ನಂಬಳಾಗುತ್ತಿಲ್ಲ...
ನಮ್ಮಂತೆ ಆವೇಶ ಭರಿತವಾಗಿ ಎಲ್ಲರ ಜೊತೆಯೂ ಸಹಕಾರಿಯಾಗಿ ಭಾಗವಹಿಸುತ್ತಿದ್ದ ಮಿತ್ರ ಕಳೆದ ಬಾರಿ ಇಂಡಸ್ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತ ಸುನ್ನೀ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಸ್ ಎಸ್ ಎಫ್ ಕ್ಯಾಂಪಸ್ ಇಂಡಸ್ ಯುನಿಟ್ ರಚಿಸಿ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು....

     ಮಾತ್ರವಲ್ಲದೆ ಎಸ್ ಎಸ್ ಎಫ್ ಕ್ಯಾಂಪಸ್ ಪ್ರತಿಭೋತ್ಸವದಲ್ಲಿ ಪುತ್ತೂರು ಡಿವಿಷನ್ ಕ್ಯಾಂಪಸನ್ನು ಪ್ರತಿನಿಧಿಸಿ ಜಿಲ್ಲಾಮಟ್ಟದಲ್ಲಿ ಸ್ಫರ್ಧಾರ್ಥಿಯಾಗಿಯೂ ಭಾಗವಹಿಸಿದ್ದರು ಇರ್ಷಾದ್ ಕರ್ನೂರ್......

       ಈ ರೀತಿ ಎಸ್ ಎಸ್ ಎಫ್ ಕ್ಯಾಂಪಸ್ ಕಾರ್ಯಕರ್ತರಿಗೆ ನೂರು ಮಾತು ಹೇಳಲಿರುವ ಮಿತ್ರ ಮರ್ಹೂಂ ಇರ್ಷಾದ್ ಕರ್ನೂರ್ ರವರ ನಿಧನ ಸುನ್ನೀ ಸಮೂಹಕ್ಕೆ ದುಖವನ್ನು ತಂದಿದ್ದರೂ ಅಲ್ಲಾಹನ ವಿಧಿಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ...
ಆದರೆ ಇಂದು ಹಲವು ಯುವಕರ ನಡುವೆಯೂ ಭಾಗ್ಯವಂತರ  ಸಾಲಿನಲ್ಲಿ ಇರ್ಷಾದ್ ಕರ್ನೂರ್ ಸ್ಮರಿಸಲ್ಪಡುತ್ತಿದ್ದು....

ಇನ್ಸಾಅಲ್ಲಾಹ್ ಎಲ್ಲ ಮಿತ್ರರು ಇರ್ಷಾದ್ ಕರ್ನೂರ್ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸುವಂತೆಯೂ ತಹ್ಲೀಲ್ ಸಮರ್ಪಿಸುವಂತೆಯೂ ಕೇಳಿಕೊಳ್ಳುತ್ತ...

ತಹ್ಲೀಲ್ ಹೇಳಲು ಇಚ್ಚಿಸುವವರು ಈ ಕೆಳಗಿನ ವಾಟ್ಸಾಪ್ ನಂಗೆ ಪರ್ಸನಲಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ...
8971778483

✍ರಾಫಿ ನಗರ

ಪೋಸೋಟ್ ತಂಙಳ್ ಉಸ್ತಾದರ ಬದುಕು ಪಕ್ಷಿನೋಟದಲ್ಲಿ


ಹೆಸರು ಸಯ್ಯದ್ ಮುಹಮ್ಮದ್ ಉಮರುಲ್ ಫಾರೂಕ್ ತಂಙಳ್

ಖಬೀಲ: ಬುಖಾರಿ

ಜನನ: 1961 ಸಪ್ವೆಂಬರ್ 31 (ಮುಹರ್ರಂ 24)ಬುದವಾರ

ತಂದೆ: ಸಯ್ಯಿದ್ ಅಹ್ಮದ್ ಬುಖಾರಿ

ತಾಯಿ: ತೃಕರಿಪುರ್ ಸಯ್ಯಿದ್ ಶಾಹುಲ್ ಹಮೀದ್ ತಂಗಳ್ ರವರ ಮಗಳು ಸಯ್ಯಿದತ್ ಫಾತಿಮ ಇಂಬಿಚ್ಚಿ ಬೀವಿ

ಪತ್ನಿ: ತಾಜುಲ್ ಉಲಮಾ ರವರ ಮಗಳ ಮಗಳು ಸಯ್ಯಿದತ್ ಉಮ್ಮು ಹಾನಿಯ ಬೀವಿ

ಮಕ್ಕಳು: ಸಯ್ಯಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ
ಸಯ್ಯಿದತ್ ಆಯಿಶತ್ ರಾಫಿದ
ಸಯ್ಯಿದತ್ ಖದೀಜತ್ ನಫೀಖ
ಸಯ್ಯಿದತ್ ಫತಿಮತ್ ಶಮೀಮ
ಸಯ್ಯಿದತ್ ಹಫ್ಸತ್ ದಖಿರಾ (ಮರ್ಹೂಮತ್)
ಅದ್ಯಾಪನೆ: ಪಣಿಕೊಟ್ಂಪಡಿ (ಪಡಿಕ್ಕಲ್),
ಆಕೋಟ್,
ಪೋಸೋಟ್,
ಮಳ್ ಹರ್ (2000 ರಿಂದ ವಫಾತ್ ತನಕ)

ಉಸ್ತಾದರು: ಸಯ್ಯಿದ್ ಅಹ್ಮದ್ ಬುಖಾರಿ (ತಂದೆ)
ಕೋಡಂಬುಯ ಬೀರಾನ್ ಕೋಯ ಮುಸ್ಲಿಯಾರ್
ಒ.ಕೆ ಹಝ್ರತ್
ಕಮಾಲುದ್ದೀನ್ ಹಝ್ರತ್
ಜಬ್ಬಾರ್ ಹಝ್ರತ್
ಪನಾಯಿಕುಳಂ ಹಝ್ರತ್

ಪದವಿ: ಮಳ್ ಹರ್ ನೂರಿಲ್ ಇಸ್ಲಾಮಿತ್ತ-ಲಿಮಿ ಸ್ತಾಪಕ
ಸಮಸ್ತ ಕೇಂದ್ರ ಮುಶಾವರ ಸದಸ್ಯ
ಎಸ್ ವ್ಯೆ ಎಸ್ ಕೇರಳ ರಾಜ್ಯ ಸದಸ್ಯರು (2013-2015)
ಕಾಸರಗೋಡು ಜಿಲ್ಲಾ ಸಂಯುಕ್ತ ಜಮಾ-ಅತ್ ಪ್ರಥಮ ಖಾಝಿ
ಕಡಲುಂಡಿ ಖಾಝಿ
ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಮಾಗುಂಡಿ ಖಾಝಿ
ಕರ್ನಾಟಕದ ದ.ಕ ಜಿಲ್ಲೆಯ ಕಾಟಿಪಳ್ಳ ಖಾಝಿ
ಬಾ ಅಲವಿ ತ್ವರೀಕತಿನ ಕೇರಳ ಖಲೀಫ

ಆತ್ಮಿಯ ಗುರು: ಸಯ್ಯಿದ್ ಅಹ್ಮದ್ ಝೈನುದ್ದೀನ್ ಇಂಬಿಚ್ಚಿಕೋಯ ತಂಗಳ್ ಕಡಲುಂಡಿ

Popular Posts

Blog Archive