ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.![](https://blogger.googleusercontent.com/img/b/R29vZ2xl/AVvXsEio4EIhVsJYDMZ2JFCxeoUgdcJuf8v3lmiMeKO_Qnf7SLp2Uk5UqCCtuveAdVkO4rSEf5fP-zVqYR70HJ8az5jTioGdL3iCKiGvPsfo3nWzdXKISd-sIehIS29Q0WV70Oy_s0pDKzspOPdf/s640/80be516b-aff8-4c19-921a-4c7f5e0c65c8.jpg)
ಸುಮಾರು 25 ವರ್ಷಗಳ ಹಿಂದೆ ಕನಸಿನಲ್ಲೂ ಊಹಿಸಲು ಸಾಧ್ಯವಿಲ್ಲದ ವಿಷಯವಾಗಿತ್ತು ಕರ್ನಾಟಕದ ಮಣ್ಣಿನಲ್ಲಿ ಇಂತಹ ಅತ್ಯಂತ ಶಿಸ್ತುಬಧ್ದವಾದ ಒಂದು ಉಲಮಾ ಸಮಾವೇಶ.
ಆದರೆ ಕನ್ನಡಿಗ ವಿಧ್ವಾಂಸರು ಈ ಚರಿತ್ರೆಯನ್ನು ಬದಲಿಸಿ ಉಪ್ಪಿನಂಗಡಿಯ ಹೃದಯಭಾಗದಲ್ಲಿ ಹೊಸದೊಂದು ಅಧ್ಯಾಯವನ್ನು ಬರೆದಿದ್ದಾರೆ.ಬಿಳಿವಸ್ತ್ರಧಾರಿ ವಿಧ್ವಾಂಸರಿಂದ ಬಿಳಿ ವರ್ಣಮಯಗೊಂಡಿದ್ದ ಉಪ್ಪಿನಂಗಡಿ ನಗರವು ಇಸ್ಲಾಮಿನಿಂದ ಶಾಂತಿಯನ್ನಲ್ಲದೆ ಬಯಸಲು ಸಾಧ್ಯವಿಲ್ಲ ಎಂಬ ಉದಾತ್ತ ಸಂದೇಶವನ್ನು ಸಾರುತ್ತಿತ್ತು.
ಮೂರು ದಿನಗಳಲ್ಲಿ ನಡೆದ ಸಮಾವೇಶವು ಅತ್ಯಂತ ಶಿಸ್ತು ಬಧ್ಧವೂ ಯಶಸ್ವಿಯೂ ಆಗಿತ್ತು.
ಕನ್ನಡಿಗ ಉಲಮಾ ದಿಗ್ಗಜರಾದ ಬೇಕಲ್ ಉಸ್ತಾದ್,ಅಬ್ಬಾಸ್ ಉಸ್ತಾದ್,ಮಾಣಿ ಉಸ್ತಾದ್ ಮುಂತಾದವರ ನಾಯಕತ್ವದಲ್ಲಿ ವಿಧ್ವಾಂಸರ ಒಂದು ಬಳಗದ ಅವಿಶ್ರಾಂತ ಕಾರ್ಯಾಚರಣೆಯ ಫಲವಾಗಿತ್ತು ಈ ಯಶಸ್ಸು.
ವಳವೂರು ಮುಹಮ್ಮದ್ ಸಅದಿ ಉಸ್ತಾದ್,ಯೂಸುಫ್ ಸಅದಿ ಉಸ್ತಾದ್,ಮುಹಮ್ಮದ್ ಅಲಿ ಫೈಝಿ ಉಸ್ತಾದ್,ತೋಕೆ ಉಸ್ತಾದ್,ಜಿ.ಎಮ್.ಉಸ್ತಾದ್,ಝೈನಿ ಉಸ್ತಾದ್,ಮೂಡಡ್ಕ ಸಖಾಫಿ,ಕೆಕೆಎಮ್ ಕಾಮಿಲ್ ಸಖಾಫಿ ಅಶ್ರಫ್ ಸಖಾಫಿ ಕಿನ್ಯ ಮುಂತಾದ ಅನೇಕರು ಈ ಬಳಗದಲ್ಲಿದ್ದರು. ಅಲ್ಲಾಹು ಅವರ ಶ್ರಮಗಳನ್ನು ಸ್ವೀಕರಿಸಲಿ ಆಮೀನ್.
🔹ಅವರ ಮ್ಯಾಜಿಕ್ ನಡೆದೇ ಬಿಟ್ಟಿತು🔹
ಇಲ್ಲಿ ಒಬ್ಬರ ಮ್ಯಾಜಿಕ್ ಮೈಂಡ್ ತುಂಬಾ ಕೆಲಸ ಮಾಡಿದೆ. ತಿಂಗಳುಗಳ ಹಿಂದೆ ಮುಶಾವರದಲ್ಲಿ ಈ ಸಮಾವೇಶದ ಪ್ರಸ್ತಾಪ ಬಂದಾಗಲೇ ಅವರ ದೂರದೃಷ್ಠಿಯಿಂದ ಅವರು ವಿನೂತನ ವ್ಯವಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಆ ವ್ಯವಸ್ತೆಯನ್ನು ಜಾರಿಗೆ ತಂದಿರುವುದು ಈ ಸಮಾವೇಶದ ಯಶಸ್ವಿನಲ್ಲಿ ಮುಖ್ಯ ಪಾತ್ರ ವಹಿಸಿದೆ.ಅದ್ಯಾವುದೆಂದರೆ ಸುನ್ನೀ ರೇಂಜ್ ಮಟ್ಟದಲ್ಲಿ ಝೋನಲ್ ಸಮಿತಿಗಳ ರಚನೆಯಾಗಿತ್ತು.ಇದು ಅತ್ಯಂತ ಯಶಸ್ಸೀ ಪ್ಲಾನ್ ಆಗಿತ್ತು.
ಅವರ ಪ್ಲಾನ್ ಗಳೆಲ್ಲವೂ ಹೀಗೇ.ಯಶಸ್ಸಲ್ಲದೆ ಪರಾಭವಗೊಂಡದ್ದೇ ಇಲ್ಲ.
ಎರಡು ವರ್ಷಗಳ ಹಿಂದೆ ನಡೆದ ಸುಲ್ತಾನುಲ್ ಉಲಮಾರ ಕರ್ನಾಟಕ ಯಾತ್ರೆಯಾಗಿರಬಹುದು.ಅದರ ಯಶಸ್ಸಿನಲ್ಲಿಯೂ ಇವರದೇ ಮುಖ್ಯ ಪಾತ್ರ. ಕರ್ನಾಟಕದ ಸಂಘಟನಾ ಬೆಳವಣಿಗೆಯಲ್ಲೂ ಇವರದೇ ಮಾಸ್ಟರ್ ಪ್ಲಾನ್ ಕೆಲಸಮಾಡಿದ್ದು. SSF,SYS,SJM,SMA,KMJC ಮುಂತಾದ ಎಲ್ಲಾ ಸಂಘಟಣೆಗಳಲ್ಲಿ ಇವರ ಪಾತ್ರ ಇದ್ದೇ ಇದೆ.
ಇವರು ಬೇರೆ ಯಾರೂ ಅಲ್ಲ. ಮರ್ಕಝ್ನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಶೈಖುನಾ ಸುಲ್ತಾನುಲ್ ಉಲಮಾದ ಪುಣ್ಯನಾಲಗೆಯಿಂದ “ಅಬೂಹಾಮಿದ್“ಎಂಬ ಬಿರುದನ್ನು ಪಡೆದಿದ್ದ ಬಹು SP. ಹಂಝ ಸಖಾಫಿ ಬಂಟ್ವಾಳ ರವರಾಗಿರುತ್ತಾರೆ.ಅಲ್ಲಾಹು ದೀರ್ಘಾಯುಸ್ಸು ಆಫಿಯತನ್ನು ಕರುಣಿಸಲಿ ಆಮೀನ್.
ಇವರು ಶ್ರಮಜೀವಿ.ನಿಷ್ಕಳಂಕ,ನಿಸ್ವಾರ್ಥ,ನಿಷ್ಪಕ್ಷ ಹೃದಯದ ವಕ್ತಾರ. 1991-92 ರಅವಧಿಯಲ್ಲಿ ಮರ್ಕಝ್ ನಲ್ಲಿ ಮುತವ್ವಲ್ ವಿಧ್ಯಾರ್ಥಿ ಸಹಪಾಠಿಗಳಾಗಿದ್ದೆವು.ಆ ಸಮಯದಲ್ಲೇ ಕನ್ನಡಮಣ್ಣಿನಲ್ಲಿ ಸುನ್ನೀ ಸಂಘಟನೆ ಬಗ್ಗೆ ಅನೇಕ ಕನಸುಗಳನ್ನು ಕಾಣುತ್ತಿದ್ದರು.ಇಲ್ಲಿನ ಶೋಚನೀಯ ಅವಸ್ಥೆಗಳ ಬಗ್ಗೆ ಅರ್ಧ ರಾತ್ರಿಗಳ ತನಕ ನಿದ್ರಿಸದೆ ಮರ್ಕಝ್ ಶರೀಅತ್ ಕಾಲೇಜಿನ ವರಾಂಡಗಳಲ್ಲಿ ಕುಳಿತು ಚರ್ಚಿಸುತ್ತಿದ್ದುದುಂಟು.
ಆ ಸಮಯದಲ್ಲೇ ಸಂಘಟಣಾ ರಂಗಕ್ಕೆ ದುಮುಕಿ ಕ್ರಾಂತಿಕಾರಿ ಚಟುವಟಿಕೆ ಗಳನ್ನು ಮಾಡುವ ಪ್ರಯತ್ನ ಮಾಡುತ್ತಿದ್ದರು. ಅಂದು ಅವರು ಕಾಣುತ್ತಿದ್ದ ಅನೇಕ ಕನಸುಗಳನ್ನು ನನಸು ಮಾಡುವುದರಲ್ಲಿ ಬಹುತೇಕ ಯಶಸ್ವಿಯಾಗಿರುತ್ತಾರೆಂಬುದರಲ್ಲಿ ಅನುಮಾನವೇ ಇಲ್ಲ.
ಕರ್ನಾಟಕದ ಎಸ್ಸೆಸ್ಸಫ್ ನ ಪ್ರಾರಂಭ ಕಾಲದಲ್ಲಿ ಅಂದಿನ ಸಂಕೀರ್ಣ ಸಂಕಷ್ಟಮಯ ಸಮಯಗಳಲ್ಲಿಯೂ ನಿಸ್ವಾರ್ಥವಾಗಿ ದುಡಿದವರೂ ನಾಯಕತ್ವವನ್ನು ನೀಡಿದವರೂ ಆಗಿರುತ್ತಾರೆ.
ವಿನೀತನಾದ ನಾನು ಎಸ್ಸೆಸ್ಸಫ್ ನ ರಾಜ್ಯಾಧ್ಯಕ್ಷ ನಾಗಿಯೂ GM ಉಸ್ತಾದರು ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ಸಮಯ ಮಂಗಳೂರು ಬಂದರಿನಲ್ಲಿರುವ ಮಾಜಿ ಸಚಿವ ಸಿ.ಎಮ್ ಇಬ್ರಾಹೀಮ್ ರವರ ಕಾಂಪ್ಲೆಕ್ಸ್ ನಲ್ಲಿ ಕಚೇರಿಯನ್ನು ಪಡೆದಿದ್ದೆವು.
ಕಾರ್ಯಕರ್ತರ ತೀವ್ರ ಅಭಾವವನ್ನು ಎದುರಿಸುತ್ತಿದ್ದ ಅಂದು ಅನೇಕ ಕಡತಗಳನ್ನು ಬರೆದು ಮುಗಿಸಬೇಕಾಗಿತ್ತು.
ನಾನು ಕನ್ನಂಗಾರಿನಲ್ಲಿ ಮುದರ್ರಿಸ್ GM ಉಸ್ತಾದರು ಸೂರಿಂಜೆಯಲ್ಲಿ ಮುದರ್ರಿಸರಾದ್ದರಿಂದ ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಆಸಾಧ್ಯವಾಗಿತ್ತು.
ಅಂದು ಯಾವುದೇ ಉದ್ಯೋಗದಲ್ಲಿರದ SP ಉಸ್ತಾದರನ್ನು ಆಫೀಸಿನಲ್ಲಿ ಕುಳಿತು ಕೆಲಸಮಾಡಲು ಕೇಳಿಕೊಂಡಿದ್ದೆವು. ಅದನ್ನು ಒಪ್ಪಿಕೊಂಡು ಕಚೇರಿಯಲ್ಲಿಯೇ ಕುಳಿತು ರಾತ್ರಿ ಅಲ್ಲಿಯೇ ತಂಗಿ ಕೆಳಸಗಳನ್ನು ಮಾಡುತ್ತಿದ್ದರು.
ಒಂದು ದಿನ ನಾನು ಮತ್ತು Gm ಉಸ್ತಾದರು ಕಚೇರಿಗೆ ಹೋದೆವು. ಸಮಯ ಮದ್ಯಾಹ್ನವಾಗಿತ್ತು. SP ಉಸ್ತಾದರು ಕಡತಗಳನ್ನು ಬರೆಯುತ್ತಾ ಇದ್ದರು. ನಾಷ್ಟ ಮಾಡಿದ್ದೀರಾ ಎಂದು ಕೇಳುವಾಗ ಇಲ್ಲ ಎಂದರು.
ಪರಿಶೀಲಿಸಿದಾಗ ಹಣವಿಲ್ಲದ ಕಾರಣ ನಾಷ್ಟ ಮಾಡಿಲ್ಲ ಎಂದು ತಿಳಿಯಿತು. ಆಗ ಕಚೇರಿಯಲ್ಲಿ ಬಾತ್ರೂಮ್ ಇಲ್ಲ.ಫ್ಯಾನ್ ಇಲ್ಲ.ನಾಷ್ಟನೂ ಮಾಡದೆ ಮಧೃದ್ಯಾಹ್ನದ ವರೆಗೆ ಕೆಲಸವನ್ನು ಮಾಡುತ್ತಿದ್ದರು.
ಇದು ಒಂದು ಸಣ್ಣ ಉದಾಹರಣೆ ಮಾತ್ರ.ಇಂತಹ ಅನೇಕ ಉದಾಹರಣೆಗಳನ್ನು ಅವರ ಸಂಘಟನಾ ಜೀವನದಲ್ಲಿ ಹಲವಾರು ಕಾಣಬಹುದು.
ಆದುದರಿಂದ ಇವರು ನಮ್ಮ ಸುನ್ನೀ ಕರ್ನಾಟಕದ ಅಭಿಮಾನ.
ಅಲ್ಲಾಹುವೇ ಇವರಿಗೂ ನಮ್ಮ ಎಲ್ಲಾ ಉಲಮಾಗಳಿಗೂ ಇನ್ನಷ್ಟು ಹಿಮ್ಮತ್ತನ್ನು ನೀಡಿ ಅನುಗ್ರಹಿಸು.ಆಮೀನ್.
ಪಿ.ಪಿ. ಅಹ್ಮದ್ ಸಖಾಫಿ ಕಾಶಿಪಟ್ಣ