Wednesday, 11 October 2017

ತುಂಬೆ ನಾಡನ್ನು ಧನ್ಯಗೊಳಿಸಿದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಭೇಟಿ.



ವಿಶ್ರಾಂತಿಯಿಲ್ಲದೇ ದೇಶದಿಂದ ದೇಶಕ್ಕೆ,ಪ್ರದೇಶದಿಂದ ಪ್ರದೇಶಕ್ಕೆ,ರಾಜ್ಯದಿಂದ ರಾಜ್ಯಕ್ಕೆ,ಸಮ್ಮೇಳನದಿಂದ ಸಮ್ಮೇಳನಕ್ಕೆ ಮುಂತಾದ ಹಲವಾರು ರೀತಿಯ ಧೀನಿ ಪ್ರಭೋದನೆಯ ಕಾರ್ಯಕ್ಕೆ ಒಂದು ನಿಮಿಷವು ವಿಶ್ರಾಂತಿಯಿಲ್ಲದೇ ಓಡಾಡುವ ಜಗತ್ತು ಕಂಡ ಓರ್ವ ಅದ್ಬುತ ವಿದ್ವಾಂಸ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ,ಸಮಸ್ತದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರ ತುಂಬೆ ಸುನ್ನೀ ಮಕ್ಕಳ ಅಸ್ಥಾನ ಕೇಂದ್ರವಾದ ಸುನ್ನೀ ಕಲ್ಚರಲ್ ಸೆಂಟರಿನ ಭೇಟಿಯು ಇತಿಹಾಸದ ಇನ್ನೊಂದು ಪುಟ ಸೇರಿದರೆ ತುಂಬೆಯ ಮಣ್ಣು ಉಸ್ತಾದರ ಪಾವನ ಪುಣ್ಯ ಕಾಲಿನ ಸ್ಪರ್ಶದಿಂದ ಪುಣಿಯುತಗೊಂಡು ಧನ್ಯಗೊಂಡವು,ತುಂಬೆಯ ಸುನ್ನೀ ಮಕ್ಕಳ ಪಾಲಿಗೆ ಎರಡನೇ ಪೆರ್ನಾಲ್ ಎಂದೇ ಸಂಭ್ರಮಪಟ್ಟುಗೊಂಡರೆ "ಮರುಭೂಮಿಯು ಬಿಸಿಲಿನ ತಾಪಕ್ಕೆ ಮರುಭೂಮಿಯ ಮಣ್ಣು ಒಂದು ಹನಿ ನೀರಿಗಾಗಿ ಚಟಪಡಿಸುವಾ ದ್ರಶ್ಯವಾದರೆ ತುಂಬೆಯ ಮಣ್ಣು ಉಸ್ತಾದರ ಪುಣ್ಯ ಕಾಲಿನ ಸ್ಪರ್ಷಕ್ಕಾಗಿ ದಾಹದಲ್ಲಿ ಮುಳುಗಿದಾಗ ಶೈಖುನ ಎ.ಪಿ ಉಸ್ತಾದರ ಕಾಲಿನ ಸ್ಪರ್ಷದಿಂದ ತುಂಬೆಯ ಮಣ್ಣಿನ ದಾಹ ಹಾಗು ಸುನ್ನೀ ಮಕ್ಕಳ ದಾಹವು ನೀಗಿದಾಗ ಸುನ್ನೀ ಮಕ್ಕಳು ತಕ್ಬೀರ್ ಮೊಳಗಿಸಿದರು".

ಉಪ್ಪಿನಂಗಡಿಯ ಐತಿಹಾಸಿಕ ಮೂರು ದಿನಗಳ ಬ್ರಹತ್ ಉಲಮಾ ಕಾನ್ಫರನ್ಸ್ ಕಾರ್ಯಕ್ರಮದ ಮೂರನೇ ದಿನದ ಸಮರೂಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಯಿಸಲು ಮಂಗಳೂರಿನಿಂದ ಉಪ್ಪಿನಂಗಡಿಗೆ ಹಾದುಹೋಗಬೇಕಾದರೆ ತುಂಬೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಧಾಟಿಹೋಗುವ ಸನ್ನಿಹಿತವನ್ನು ಅರಿತ ಜಾತಕ ಪಕ್ಷಿಯಂತೆ ಕಾದುಕುಳಿತ ತುಂಬೆಯ ಸುನ್ನೀ ಮಕ್ಕಳು ಒಂದುಕಡೆಯಾದರೆ ಇನ್ನೊಂದು ಕಡೆ ಎ.ಪಿ ಉಸ್ತಾದ್ ಪ್ರಸ್ತುತ ತುಂಬೆಯಲ್ಲಿ ವಾಸವಾಗಿರುವ ಉಮಾರ ನಾಯಕ ಕಣ್ಣೂರಿನ ಗೋಲ್ಡನ್ ಪುತ್ತಾಕರವರ ಮನೆಯಲ್ಲಿ ಮುಂಜಾನೆಯ ಉಪಹಾರವನ್ನು ಸೇವಿಸಿ ಬರುವ ಸಂದರ್ಭವನ್ನು ಮೊದಲೇ ಅರಿತ ತುಂಬೆಯ ಸುನ್ನೀ ಕಾರ್ಯಕರ್ತರ ಕಠಿಣ ಶ್ರಮದ ಫಲವಾಗಿ ಉಸ್ತಾದರು ಕೊನೆಗೂ ಪುಣ್ಯ ಕಾಲಿನ ಭಾಗವನ್ನು ತುಂಬೆಯ ಮಣ್ಣನ್ನು ಸ್ಪರ್ಶಿಸಿ ಕೆಲವೇ ಕೆಲವು ನಿಮಿಷದಲ್ಲಿ ದುವಾ: ನಡೆಸಿ ಉಸ್ತಾದರು ಹಿಂದುರಿಗಿ ಹೋದರೆ ಸುನ್ನೀ ಮಕ್ಕಳ ಆವೇಶವು ಸಂತೋಸದ ಸಂಭ್ರಮ ಮುಗಿಲುಮುಟ್ಟುತ್ತಿದವು ಹಾಗು ತುಂಬೆಯ ಚರಿತ್ರೆಯಲ್ಲಿ ಮಾಯದ ದಿನವಾಗಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು(ಅಲ್-ಅಮ್ದುಲಿಲ್ಲಾ)

ಎರಡನೇ ವರ್ಷ ಪೂರ್ತಿಗೊಳಿಸುವ ಸಂಭ್ರಮದಲ್ಲಿರುವ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಹದಿಹರೆಯಾದ ಕೂಸು ನಿಜಕ್ಕೂ ಇಪ್ಪತ್ತು ವರ್ಷದ ಯುವಕನಂತೆ ಹೆಮ್ಮರವಾಗಿ ತುಂಬೆಯ ನಾಡಿನಲ್ಲಿ ಸುನ್ನಿಗಳ ಆಸ್ಥಾನವಾಗಿ ಬೆಳೆದು ನಿಂತಿದೆ(ಮಾಷ ಅಲ್ಲಾ).
ಶೈಖುನ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರನ್ನು ತುಂಬೆಗೆ ಕರೆಸಿಕೊಳ್ಳಬೇಕೆಂದು SSF ತುಂಬೆ ಕಾರ್ಯಕರ್ತರು ಕಾಣುತ್ತಿದ ಕನಸು ನಿಜಕ್ಕೂ ಅರ್ಧದಷ್ಟು ಪೂರ್ತಿಯಾಯಿತು.

ಉಸ್ತಾದರನ್ನು ಒಂದು ಯಾವುದೇ ಕಾರ್ಯಕ್ರಮಕ್ಕೂ ಕರೆಸಿಕೊಳ್ಳುವುದು ಸುಲಭದ ಮಾತಲ್ಲ ಅದು ಅದೆಷ್ಟೋ ವರ್ಷಗಳ ಹಿಂದೆಯೇ ಉಸ್ತಾದರ ಬರುಯುವಿಕೆಯನ್ನು ಖಾಯಂಗೊಳಿಸಬೇಕು ಅದರಲ್ಲೂ ಉಸ್ತಾದ್ ವಿದೇಶದಲ್ಲಿ ಅಥವಾ ಯಾವುದೇ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಯಿಸಿದರೆ ಉಸ್ತಾದರಿಗೆ ಇನ್ನಿತರ ಖಾಯಂಗೊಳಿಸಿದ ಕಾರ್ಯಕ್ರಮಕ್ಕೆ ಭಾಗವಯಿಸಲು ಸಾದ್ಯವಾಗುವುದ್ದಿಲ್ಲ ವಯಸ್ಸು 80 ದಾಟಿದರು ಸರ್ವ ಶಕ್ತನಾದ ಅಲ್ಲಾಹನ ದಿವ್ಯ ಅನುಗ್ರಹದಿಂದ ಒಂದು ನಿಮಿಸವು ವಿಶ್ರಾಂತಿಯಿಲ್ಲದೇ ಓಡಾಡುವ ಓರ್ವ ಮಹಾ ಚೇತನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಅಲ್ಲದೇ ಜಗತ್ತಿನಲ್ಲಿ ಇನ್ಯಾರನ್ನು ಕಾಣಲು ಸಾದ್ಯವಾಗುವುದಿಲ್ಲ.

ಅಕಸ್ಮಿಕ ಉಸ್ತಾದರ ತುಂಬೆಯ ಭೇಟಿಯಿಂದ ತುಂಬೆ ನಾಡು ಧನ್ಯಗೊಂಡಿತು ಇನ್ಶ ಅಲ್ಲಾ ಒಂದು ಸುನ್ನೀ ಮಹಾ ಸಮ್ಮೇಲ್ಲನದ ಮೂಲಕ ತುಂಬೆಯಲ್ಲಿ ಜನಸಾಗರದ ನಡುವೆ ಉಸ್ತಾದರ ಮುಖ್ಯ ಪ್ರಭಾಷಣ ಸರ್ವಶಕ್ತನಾದ ಅಲ್ಲಾಹಾನ ದಿವ್ಯ ಅನುಗ್ರಹದೊಂದಿಗೆ ನಡೆಯಬೇಕೆಂಬ ಅಭಿಲಾಸೆಯೂ ನಮ್ಮಲ್ಲಿದೆ ಅಲ್ಲಾಹಾನು ಪೂರ್ತಿಗೊಳಿಸಲಿ (ಅಮೀನ್).

ಸರ್ವ ಶಕ್ತನಾದ ಅಲ್ಲಾಹನು ಶೈಖುನ ಸುಲ್ತಾನುಲ್ ಉಲಮಾರಿಗೆ ದೀರ್ಘ ಅರೋಗ್ಯ ಅಯುಷ್ಯವನ್ನು ದಯಪಾಲಿಸಲಿ,ಉಸ್ತಾದರ ನೆರಳಿನಲ್ಲಿ ಜೀವಿಸಲು ಸರ್ವಶಕ್ತನಾದ ಅಲ್ಲಾಹನು ನಮಗೆಲ್ಲರಿಗೂ ಸೌಭಾಗ್ಯ ನೀಡಿ ದಯಾಪಾಲಿಸಲಿ(ಅಮೀನ್ ಯಾರಬ್ಬಲ್ ಅಲಾಮೀನ್)

====================
✍ಇರ್ಫಾಝ್ ತುಂಬೆ
====================

No comments:

Post a Comment

thank you

Popular Posts

Blog Archive