*ಡಾ:ಫಾರೂಖ್ ನಈಮಿ ಕೊಲ್ಲಂ'*ಆ ಹೆಸರು ಕೇಳಿದರೇನೇ ಅದೇನೋ ರೋಮಾಂಚನ,ಕೇಳುಗರಿಗೆ ಬೋರ್ ಹೊಡಿಸದೆ ಪ್ರತಿ ನಿಮಿಷವೂ ನಿಬ್ಬೆರಗಾಗುವ ರೀತಿಯ ಪ್ರೌಢೋಜ್ವಲ ಪ್ರಭಾಷಣಕ್ಕೆ ಖ್ಯಾತಿವೆತ್ತ ಹೆಸರು.ಸುಮಧುರ ಶಬ್ದ ಮಾಧುರ್ಯದೊಂದಿಗೆ ಅರ್ಥಗರ್ಭಿತ ಭಾಷಣಗೈಯುವ ಚತುರತೆ.ಸಭಿಕರ ಸಂಖ್ಯೆಯ ಹೆಚ್ಚಳಕ್ಕೆ ಅನಗತ್ಯ ಮಸಾಲೆಗಳ ಬೆರೆತವಿಲ್ಲ ಬದಲು ಸಂಪೂರ್ಣವಾಗಿ ಪ್ರವಾದಿ ಮದಹ್ ಮುಖಾಂತರ ಅಸಂಖ್ಯಾತ ಪ್ರೇಕ್ಷಕ ವರ್ಗವನ್ನು ಸೆಳೆಯಬಹುದೆಂದು ತೋರಿಸಿದ ಗ್ರೇಟ್ ವಾಗ್ಮಿ.ಕ್ರೀಡಾ ತಾರೆಯರ,ನಟ ನಟಿಯರ 'ಫ್ಯಾನ್ಸ್'ಗಳಾಗಿ ದಿಕ್ಕು ತಪ್ಪುತ್ತಿರುವ"ನ್ಯೂ ಜನ್ ವರ್ಗದ ಮಧ್ಯೆ 'ಪ್ರವಾದೀ ಪ್ರೇಮ'ವನ್ನೇ ಮುಖ್ಯ ವಿಷಯವನ್ನಾಗಿ ಆಯ್ಕೆಮಾಡಿ ನಿರರ್ಗಳ ಭಾಷಣದ ಮೂಲಕ ಜನಮನಗೆದ್ದ ಆಶಿಕುರ್ರಸೂಲ್.
ಸುನ್ನೀ ಮುಸಲ್ಮಾನರ ಹೆಮ್ಮೆ *ಡಾ ಫಾರೂಖ್ ನಈಮಿ ಅಲ್ ಬುಖಾರಿ ಕೊಲ್ಲಂ* ಇದೇ ತಿಂಗಳ 25'ರಂದು ಮಂಗಳೂರು ನೆಹರು ಮೈದಾನದಲ್ಲಿ ಎಸ್.ಎಸ್.ಎಫ್.ದ.ಕ ಜಿಲ್ಲಾ ಸಮಿತಿ ಮೀಲಾದ್ ರಾಲಿ ಮತ್ತು ಹುಬ್ಬುರ್ರಸೂಲ್ ಕಾನ್ಫರೆನ್ಸ್ ನಲ್ಲಿ ಮುಖ್ಯ ಪ್ರಭಾಷಣಗೈಯಲಿರುವಾಗ ಸರ್ವರನ್ನೂ ಪ್ರೀತಿಪೂರ್ವಕ ಆಮಂತ್ರಿಸುತ್ತಿದ್ದೇವೆ ಇನ್ಶಾ ಅಲ್ಲಾಹ್..ಸರ್ವಶಕ್ತನು ಅನುಗ್ರಹಿಸಲೆಂಬ ಪ್ರಾರ್ಥನೆಯೊಂದಿಗೆ *ಸರ್ವರಿಗೂ ಮಗದೊಮ್ಮೆ ಸುಸ್ವಾಗತ ಬಯಸುವ
_ ರಫೀಕ್ ಕಾಪಜಾಲ್