Wednesday, 30 August 2017

SHAFI SAADI ABOUT TALAQ NYAYA - SEG 01 RAJ TV



PART - 2
https://www.youtube.com/watch?v=GFZ92yn5RZ4

PART 3


https://www.blogger.com/blog-this.g?n=TALAQ+NYAYA+-+SEG+03&source=youtube&b=%3Ciframe+width%3D%22459%22+height%3D%22344%22+src%3D%22https://www.youtube.com/embed/QmCthNpA-fU%22+frameborder%3D%220%22+allowfullscreen%3E%3C/iframe%3E&eurl=https://i.ytimg.com/vi/QmCthNpA-fU/hqdefault.jpg


PART 4

https://www.blogger.com/blog-this.g?n=TALAQ+NYAYA+-+SEG+04&source=youtube&b=%3Ciframe+width%3D%22459%22+height%3D%22344%22+src%3D%22https://www.youtube.com/embed/xifEUJeH_ww%22+frameborder%3D%220%22+allowfullscreen%3E%3C/iframe%3E&eurl=https://i.ytimg.com/vi/xifEUJeH_ww/hqdefault.jpg

*ಅರಫಾದಿನ ಹಾಗೂ ಪೆರ್ನಾಳ್ ದಿನದಂದು ಅತ್ಯಂತ ಫ್ರತಿಫಲದಾಯಕ ಝಿಕ್ರ್.......*



*سُبْحَانَ اللّهِ ، والْحَمْدُللّهِ ، وَ لا اِلهَ اِلَّا اللّهُ ، وَ اللّهُ اَكْبَرُ ، وَ لا حَوْلَ وَ لا قُوَّةَ اِلَّا بِاللّهِ – 100*

           🕌🕌🕌🕌🕌🕌
*يَا حَيُّ يَا قَيُّوْمُ بِرَحْمَتِكَ أَسْتَغِيْث  100*
            🕌🕌🕌🕌🕌🕌
*لا إلهَ إلا أنتَ سُبْحَانَكَ إِنِّي كُنْتُ مِنَالظّالِمِيْنَ...100* 
            🕌🕌🕌🕌🕌🕌

*حَسْبُنَا اللَّهُ وَنِعْمَ الْوَكِيلُ.    :    450*
            🕌🕌🕌🕌🕌🕌

*أَسْتَغْفِرُ اللَّهَ الْعَظِيمَ الَّذِي لاَ إِلَهَ إِلاَّ هُوَ الْحَيُّ الْْقَيُّومُ وَ أَتُوبُ إِلَيْهِ :100* 
           🕌🕌🕌🕌🕌🕌
*اللَّهُمَّ صَلِّ عَلَى سَيِّدِنَا مُحَمَّدٍ*
*وَعَلَى آلِ سَيِّدِنَا مُحَمَّدٍ*
 :100

ಸರ್ವರಿಗೂ ಬಲಿಪೆರ್ನಾಳ್ ಹಬ್ಬದ ಶುಭಾಶಯಗಳು.....
*(in advance.......)*

💢ಎಂ.ಕೆ.ಸಿ.ಅಜಿಲಮೊಗರು💢

ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗಿಗೆ ಮೌನವಾಯಿತೇ ಜಗತ್ತು..?!





ಜಗತ್ತಿನಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಲೇ ಇರುವಂತಹ ಅಲ್ಪಸಂಖ್ಯಾತ ಸಮುದಾಯವಾಗಿದೆ ರೊಹಿಂಗ್ಯಾ ಮುಸ್ಲಿಮರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಮುಸ್ಲಿಂ ಸಮುದಾಯವು ನಾನಾ ರೀತಿಯ ಹಿಂಸೆಗಳನ್ನು ಅನುಭವಿಸುತ್ತಾ ಬರುತ್ತಿದ್ದರೂ  ಇದರ ವಿರುದ್ಧ ಶಬ್ದವೆತ್ತಬೇಕಾದ ವಿಶ್ವಸಂಸ್ಥೆ ಸಹಿತ ಪ್ರಬಲ ರಾಷ್ಟ್ರಗಳು ಇಂದು ಮೌನ ತಾಳಿರುವುದು ವಿಪರ್ಯಾಸ..!!
ಶಾಂತಿಯ ಪ್ರತಿಪಾದಕರು ಅಂತ ಬಿಂಬಿಸುವಂತಹ ಬೌದ್ಧ ಧರ್ಮದ ಅನುಯಾಯಿಗಳಿಂದಲೇ ಅಮಾನುಷವಾಗಿ ದೌರ್ಜನ್ಯಕ್ಕೀಡಾಗಿ ಸಾವು -ಬದುಕಿನ ನಡುವೆ ಹೋರಾಡುವ ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗು ಇಂದು ಕ್ಷೀಣಿಸತೊಡಗಿದೆ.

ತನ್ನ ದೇಶದಲ್ಲಿ ಪೌರತ್ವವನ್ನು ಪಡೆಯಲಾಗದೆ ಚಡಪಡಿಸುತ್ತಿರುವ ಅಲ್ಲಿನ ಮುಸ್ಲಿಮರನ್ನು ಕಳೆದ ಹಲವಾರು ವರ್ಷಗಳಿಂದ ಶೋಷನೆಗೊಳಪಡಿಸಿ ,ಅಮಾನುಷವಾಗಿ ದೌರ್ಜನ್ಯಕ್ಕೊಳಪಡಿಸುತ್ತಲೇ ಇದ್ದಾರೆ. ಸಮುದ್ರದ ನಡುವೆ ಹೊಟ್ಟೆಗೆ ಆಹಾರವಿಲ್ಲದೆ ವಿಲವಿಲನೆ ಒದ್ದಾಡುತ್ತಿರುವ ಆ ಮುದ್ದು ಕಂದಮ್ಮಗಳ ಮನಕಲಕುವ ದೃಶ್ಯಗಳು ಅದೆಂತಹ ಕಲ್ಲು ಹೃದಯಗಳನ್ನೂ ಕರಗಿಸಬಹುದಾದರೂ , ಜಗತ್ತಿನ ಬಹುತೇಕ ರಾಷ್ಟ್ರಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.

ಸಿನಿಮಾ ತಾರೆಯರ ಮಡದಿಯರು ಗರ್ಭಿಣಿಯಾದರೂ ಅದನ್ನು ದಿನಗಟ್ಟಲೆ ವರ್ಣರಂಜಿತವಾಗಿ ಪ್ರಸಾರ ಮಾಡುವ ಮಾಧ್ಯಮಗಳು, ಗರ್ಭಿಣಿ ಮಹಿಳೆಯರು ಬೌದ್ಧ ಧರ್ಮದ ತೀವ್ರಗಾಮಿಗಳ ಅಮಾನುಷವಾದ ವರ್ತನೆಗೆ ಅನ್ಯಾಯವಾಗಿ ಈ ಲೋಕಕ್ಕೆ ವಿದಾಯ ಹೇಳುವಾಗ ಕಾಣದಂತೆ ನಟಿಸುತ್ತಿರುವುದು ದುರಂತ.
ಒಂದು ದೇಶದ ಅಲ್ಪಸಂಖ್ಯಾತ ಸಮುದಾಯವೊಂದು ಅನ್ಯಾಯವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವಾಗ ಮಾನವೀಯತೆಯ ಹಸ್ತವನ್ನು ಚಾಚಬೇಕಾದ ವಿಶ್ವಸಂಸ್ಥೆಯ ಜಾಣ ಕುರುಡುತನ ಮಾನವೀಯತೆಯ ಸಾರವನ್ನು ಅಣಕಿಸುವಂತಿದೆ.
ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಾ ಅಭದ್ರತೆಯಿಂದ ಜೀವನ ಸಾಗಿಸಿ, ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ರೊಹಿಂಗ್ಯಾದ ಮುಸ್ಲಿಮರಿಗೆ ಸರ್ವಶಕ್ತನು ರಕ್ಷೆಯನ್ನು ನೀಡಲಿ.ಎಲ್ಲಾ ತರದ ಷಡ್ಯಂತ್ರಗಳಿಂದ ಜಾಗತಿಕ ಮುಸ್ಲಿಮರಿಗೆ ವಿಜಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.

📝ಸ್ನೇಹಜೀವಿ ಅಡ್ಕ

*HIGHSCHOOL FRATENITY CAMP* @ ಮಾವಿನಕಟ್ಟೆ_



  *ಎ*ಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಮಾವಿನಕಟ್ಟೆ ಮದ್ರಸ ಹಾಲ್ ನಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ಶೆರೀಫ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆಯವರು ಸ್ವಾಗತಿಸಿ,ಸೆಕ್ಟರಿನ ಮಾಜಿ ಅಧ್ಯಕ್ಷರಾದ ಅಶ್ರಫ್ ಸಖಾಫಿ  ಉಧ್ಘಾಟಣೆಗೈದರು.ಬಳಿಕ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್  ಅಧ್ಯಕ್ಷರಾದ ಅಬ್ದುಲ್‌ ರಶೀದ್ ವಗ್ಗ ರವರು ವಿಧ್ಯಾರ್ಥಿಗಳಿಗೆ ಧಾರ್ಮಿಕ & ಲೌಕಿಕ ವಿಷಯದಲ್ಲಿ ತರಗತಿಯನ್ನು ಮಂಡಿಸಿದರು.
"ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ವಿಷಯದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳೊಂದಿಗೆ ಬಾಲ್ಯದಲ್ಲಿ ಕಲಿತ ವಿದ್ಯೆ ಕಲ್ಲಿನಲ್ಲಿ ಕೆತ್ತಿದ ಹಾಗೆ. ಬಾಲ್ಯದಲ್ಲಿ ಒಳ್ಳೆಯದನ್ನೇ ಕಲಿಯಬೆಕು. ದೇಶ ಪ್ರೇಮವು ಈಮಾನಿನ ಭಾಗವಾಗಿದೆ. ದೇಶದಲ್ಲಿರುವ ಎಲ್ಲ ಜಾತಿ ಧರ್ಮದವರನ್ನು ಪ್ರೀತಿಸಬೇಕು. ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಯಹೂದಿಯ ಮೃತ ಶರೀರವು ಬಂದಾಗ ಎದ್ದು ನಿಂತು ಗೌರವಿಸಿದರು. ಆ ಪ್ರವಾದಿಯ ಅನುಯಾಯಿಗಳಾದ ನಾವು ಇತರ ಧರ್ಮದೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಕೊನೆಯಲ್ಲಿ ಧನ್ಯವಾದ ಸಮರ್ಪಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.


                                      report by*-haris pariyapade

Popular Posts

Blog Archive