ಜಗತ್ತಿನಲ್ಲಿ ಅತೀ ಹೆಚ್ಚು ದೌರ್ಜನ್ಯಕ್ಕೊಳಗಾಗುತ್ತಲೇ ಇರುವಂತಹ ಅಲ್ಪಸಂಖ್ಯಾತ ಸಮುದಾಯವಾಗಿದೆ ರೊಹಿಂಗ್ಯಾ ಮುಸ್ಲಿಮರು. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಮುಸ್ಲಿಂ ಸಮುದಾಯವು ನಾನಾ ರೀತಿಯ ಹಿಂಸೆಗಳನ್ನು ಅನುಭವಿಸುತ್ತಾ ಬರುತ್ತಿದ್ದರೂ ಇದರ ವಿರುದ್ಧ ಶಬ್ದವೆತ್ತಬೇಕಾದ ವಿಶ್ವಸಂಸ್ಥೆ ಸಹಿತ ಪ್ರಬಲ ರಾಷ್ಟ್ರಗಳು ಇಂದು ಮೌನ ತಾಳಿರುವುದು ವಿಪರ್ಯಾಸ..!!
ಶಾಂತಿಯ ಪ್ರತಿಪಾದಕರು ಅಂತ ಬಿಂಬಿಸುವಂತಹ ಬೌದ್ಧ ಧರ್ಮದ ಅನುಯಾಯಿಗಳಿಂದಲೇ ಅಮಾನುಷವಾಗಿ ದೌರ್ಜನ್ಯಕ್ಕೀಡಾಗಿ ಸಾವು -ಬದುಕಿನ ನಡುವೆ ಹೋರಾಡುವ ರೊಹಿಂಗ್ಯಾ ಮುಸ್ಲಿಮರ ಅಸಹಾಯಕತೆಯ ಕೂಗು ಇಂದು ಕ್ಷೀಣಿಸತೊಡಗಿದೆ.
ತನ್ನ ದೇಶದಲ್ಲಿ ಪೌರತ್ವವನ್ನು ಪಡೆಯಲಾಗದೆ ಚಡಪಡಿಸುತ್ತಿರುವ ಅಲ್ಲಿನ ಮುಸ್ಲಿಮರನ್ನು ಕಳೆದ ಹಲವಾರು ವರ್ಷಗಳಿಂದ ಶೋಷನೆಗೊಳಪಡಿಸಿ ,ಅಮಾನುಷವಾಗಿ ದೌರ್ಜನ್ಯಕ್ಕೊಳಪಡಿಸುತ್ತಲೇ ಇದ್ದಾರೆ. ಸಮುದ್ರದ ನಡುವೆ ಹೊಟ್ಟೆಗೆ ಆಹಾರವಿಲ್ಲದೆ ವಿಲವಿಲನೆ ಒದ್ದಾಡುತ್ತಿರುವ ಆ ಮುದ್ದು ಕಂದಮ್ಮಗಳ ಮನಕಲಕುವ ದೃಶ್ಯಗಳು ಅದೆಂತಹ ಕಲ್ಲು ಹೃದಯಗಳನ್ನೂ ಕರಗಿಸಬಹುದಾದರೂ , ಜಗತ್ತಿನ ಬಹುತೇಕ ರಾಷ್ಟ್ರಗಳು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ.
ಸಿನಿಮಾ ತಾರೆಯರ ಮಡದಿಯರು ಗರ್ಭಿಣಿಯಾದರೂ ಅದನ್ನು ದಿನಗಟ್ಟಲೆ ವರ್ಣರಂಜಿತವಾಗಿ ಪ್ರಸಾರ ಮಾಡುವ ಮಾಧ್ಯಮಗಳು, ಗರ್ಭಿಣಿ ಮಹಿಳೆಯರು ಬೌದ್ಧ ಧರ್ಮದ ತೀವ್ರಗಾಮಿಗಳ ಅಮಾನುಷವಾದ ವರ್ತನೆಗೆ ಅನ್ಯಾಯವಾಗಿ ಈ ಲೋಕಕ್ಕೆ ವಿದಾಯ ಹೇಳುವಾಗ ಕಾಣದಂತೆ ನಟಿಸುತ್ತಿರುವುದು ದುರಂತ.
ಒಂದು ದೇಶದ ಅಲ್ಪಸಂಖ್ಯಾತ ಸಮುದಾಯವೊಂದು ಅನ್ಯಾಯವಾಗಿ ದೌರ್ಜನ್ಯಕ್ಕೊಳಗಾಗುತ್ತಿರುವಾಗ ಮಾನವೀಯತೆಯ ಹಸ್ತವನ್ನು ಚಾಚಬೇಕಾದ ವಿಶ್ವಸಂಸ್ಥೆಯ ಜಾಣ ಕುರುಡುತನ ಮಾನವೀಯತೆಯ ಸಾರವನ್ನು ಅಣಕಿಸುವಂತಿದೆ.
ನಿರಂತರವಾಗಿ ದೌರ್ಜನ್ಯಕ್ಕೊಳಗಾಗುತ್ತಾ ಅಭದ್ರತೆಯಿಂದ ಜೀವನ ಸಾಗಿಸಿ, ಸಾವು -ಬದುಕಿನ ಮಧ್ಯೆ ಹೋರಾಡುತ್ತಿರುವ ರೊಹಿಂಗ್ಯಾದ ಮುಸ್ಲಿಮರಿಗೆ ಸರ್ವಶಕ್ತನು ರಕ್ಷೆಯನ್ನು ನೀಡಲಿ.ಎಲ್ಲಾ ತರದ ಷಡ್ಯಂತ್ರಗಳಿಂದ ಜಾಗತಿಕ ಮುಸ್ಲಿಮರಿಗೆ ವಿಜಯವನ್ನು ನೀಡಲಿ ಎಂದು ಪ್ರಾರ್ಥಿಸೋಣ.
No comments:
Post a Comment
thank you