*ಎ*ಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಹೈಸ್ಕೂಲ್ ವಿಧ್ಯಾರ್ಥಿಗಳಿಗೆ ಸ್ನೇಹ ಸಂಗಮ ಕಾರ್ಯಕ್ರಮ ಇತ್ತೀಚೆಗೆ ಮಾವಿನಕಟ್ಟೆ ಮದ್ರಸ ಹಾಲ್ ನಲ್ಲಿ ಸೆಕ್ಟರ್ ಉಪಾಧ್ಯಕ್ಷರಾದ ಶೆರೀಫ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸೆಕ್ಟರ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆಯವರು ಸ್ವಾಗತಿಸಿ,ಸೆಕ್ಟರಿನ ಮಾಜಿ ಅಧ್ಯಕ್ಷರಾದ ಅಶ್ರಫ್ ಸಖಾಫಿ ಉಧ್ಘಾಟಣೆಗೈದರು.ಬಳಿಕ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ರವರು ವಿಧ್ಯಾರ್ಥಿಗಳಿಗೆ ಧಾರ್ಮಿಕ & ಲೌಕಿಕ ವಿಷಯದಲ್ಲಿ ತರಗತಿಯನ್ನು ಮಂಡಿಸಿದರು.

"ದೇಶ ಉಳಿಸಿ ದ್ವೇಷ ಅಳಿಸಿ" ಎಂಬ ವಿಷಯದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳೊಂದಿಗೆ ಬಾಲ್ಯದಲ್ಲಿ ಕಲಿತ ವಿದ್ಯೆ ಕಲ್ಲಿನಲ್ಲಿ ಕೆತ್ತಿದ ಹಾಗೆ. ಬಾಲ್ಯದಲ್ಲಿ ಒಳ್ಳೆಯದನ್ನೇ ಕಲಿಯಬೆಕು. ದೇಶ ಪ್ರೇಮವು ಈಮಾನಿನ ಭಾಗವಾಗಿದೆ. ದೇಶದಲ್ಲಿರುವ ಎಲ್ಲ ಜಾತಿ ಧರ್ಮದವರನ್ನು ಪ್ರೀತಿಸಬೇಕು. ಪ್ರವಾದಿ ಮುಹಮ್ಮದ್ ಮುಸ್ತಫ ಸ್ವಲ್ಲಲ್ಲಾಹು ಅಲೈಹಿವಸಲ್ಲಮರು ಯಹೂದಿಯ ಮೃತ ಶರೀರವು ಬಂದಾಗ ಎದ್ದು ನಿಂತು ಗೌರವಿಸಿದರು. ಆ ಪ್ರವಾದಿಯ ಅನುಯಾಯಿಗಳಾದ ನಾವು ಇತರ ಧರ್ಮದೊಂದಿಗೆ ಶಾಂತಿ ಸೌಹಾರ್ದತೆಯಿಂದ ಬಾಳಬೇಕು ಎಂದು ಕರೆ ನೀಡಿದರು.
ಕೊನೆಯಲ್ಲಿ ಧನ್ಯವಾದ ಸಮರ್ಪಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
report by*-haris pariyapade
No comments:
Post a Comment
thank you