Friday, 6 October 2017

ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಅಕ್ಟೋಬರ್ ಎಂಟನೇ ತಾರೀಖಿನಂದು ಬೃಹತ್ ರಕ್ತದಾನ ಶಿಬಿರ.

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನವೆಂಬರ್ ಇಪ್ಪತ್ತೈದನೇ ತಾರೀಖಿನಂದು  ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಹುಬ್ಬು ರಸೂಲ್ ಕಾನ್ಫರೆನ್ಸಿನ ಪ್ರಚಾರಾರ್ಥವಾಗಿ ಬಹತ್ ರಕ್ತದಾನ ಶಿಬಿರ ಅಕ್ಟೋಬರ್ ಎಂಟನೇ ತಾರೀಖಿನಂದು ಬಿಸಿ ರೋಡಿನ ಎಸ್ಎಸ್ ಎಫ್ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಲಿದೆ.

                    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಎಸ್ಎಫ್ ಬಂಟ್ವಾಳ  ಡಿವಿಷನ್ ಅಧ್ಯಕ್ಷರಾದ ರಶೀದ್ ವಗ್ಗರವರು ವಹಿಸಲಿದ್ದು, ಉದ್ಘಾಟನೆಯನ್ನು 
ದಕ್ಷಿಣ ಕನ್ನಡ ಜಿಲ್ಲಾ ಎಸ್ ವೈ ಎಸ್ ಉಪಾಧ್ಯಕ್ಷರಾದ ಜಿ ಎಂ ಮುಹಮ್ಮದ್ ಕಾಮಿಲ್ ಸಖಾಫಿಯವರು ಮಾಡಲಿದ್ದಾರೆ. ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಿರಾಜುದ್ದೀನ್ ಸಖಾಫಿಯವರು ಸಂದೇಶ ಭಾಷಣ ಮಾಡಲಿದ್ದಾರೆ.

                ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಬಂಟ್ವಾಳ ತಾಲ್ಲೂಕು ತಹಶಿಲ್ದಾರರಾದ ಪುರಂದರ ಹೆಗ್ಡೆ, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ  ಕಾರ್ಯದರ್ಶಿ ಕಲಂದರ್ ಪದ್ಮುಂಜ, ಶರೀಫ್ ನಂದಾವರ, ಇಸ್ಮಾಯಿಲ್ ನಾವೂರು ಸಹಿತವಿರುವ ರಾಜಕೀಯ ಶೈಕ್ಷಣಿಕ ಧಾರ್ಮಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ಎಸ್ಎಸ್ಎಫ್ ಬಂಟ್ವಾಳ ಡಿವಿಜನ್ ಮಾಧ್ಯಮ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Popular Posts

Blog Archive