Monday, 25 September 2017

ತುಂಬೆಯಲ್ಲಿ ತಿಂಗಳ ದೀನಿ ತರಗತಿ

ಪರಂಗಿಪೇಟೆ ಆ25:SSF ತುಂಬೆ ಶಾಖೆಯ ವತಿಯಿಂದ ತಿಂಗಳು ಪ್ರತಿ ನಡೆಯುವ ತಿಂಗಳ ತರಗತಿ



24/09/2017 ರಂದು ಇಶಾ ನಮಾಝಿನ ಬಳಿಕ ತುಂಬೆ ಸುನ್ನೀ ಕಲ್ಚರಲ್ ಸೆಂಟರ್'ನಲ್ಲಿ ನಡೆಯಿತು.

ಪ್ರಸುತ ಕಾರ್ಯಕ್ರಮದಲ್ಲಿ SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಲತೀಫ್ ಹಿಮಮಿ ಸ್ವಾಗತಿಸಿದರು ಬಳಿಕ ಅಲ್-ಅನ್ಸಾರ್ ವಾರ ಪತ್ರಿಕೆ,ಮೈಲಾಂಜಿ ಮಾಸ ಪತ್ರಿಕೆಯ ಸಂಪಾದಕರು,ಉಳ್ಳಾಲ ಮುಕಚೇರಿ ಮದ್ರಸದ ಸದರ್ ಮುಹಲ್ಲಿಮರು,ತೈಬ ವುಮೆನ್ಸ್ ಇನ್ಸ್ಟಿಟ್ಯೂಟ್ ಅಫ್ ಇಸ್ಲಾಮಿಕ್ ಶರೀಅತ್ ಮುಕಚೇರಿ ಉಳ್ಳಾಲ ಇದರ ಟ್ರೈನರಾದ *ಬಹು!ಇಸ್ಮಾಯಿಲ್ ನಹೀಮಿ ಮಂಗಲಪೇಟೆ ಉಸ್ತಾದರು ಮುಹರ್ರಮಿನ ಮಹತ್ವ ಎಂಬ ವಿಷಯದಲ್ಲಿ ಮುಖ್ಯ ತರಗತಿ ನಡೆಸಿದರು.*

ಕಾರ್ಯಕ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಇದರ ಗೌರವಾಧ್ಯಕ್ಷರಾದ ಅಬ್ದುಲ್ ಹಮೀದ್ ಎಸ್.ಬಿ,SSF ತುಂಬೆ ಶಾಖೆಯ ಉಪಾಧ್ಯಕ್ಷರಾದ ಹನೀಫ್ ಎಂ.ಎ,ಕೋಶಾಧಿಕಾರಿ ಅದಂ ಟಿ.ಎ ಹಾಗು ಶಾಖಾ ಮಟ್ಟದ ಕಾರ್ಯಕರ್ತರು ನಾಡಿನ ಹಿರಿಯರು ಸಹಿತ ಹಲವಾರು ಸುನ್ನೀ ಕಾರ್ಯಕರ್ತರು ಉಪಸ್ಥರಿದ್ದರು.

ಕಾರ್ಯಕ್ರಮದ ಕೊನೆಯಲ್ಲಿ ಶಾಖಾ ಕಾರ್ಯದರ್ಶಿ ನೌಷದ್ ತುಂಬೆ ದನ್ಯವಾದಗೈದರು.
Report By :Irfaz Tumbey

ಅಪಘಾತದಲ್ಲಿ ಮೃತಪಟ್ಟ ಮುಹಮ್ಮದ್ ಹಾಫಿಳ್ ಮನೆಯಲ್ಲಿ sjm mangaluru ಜಿಲ್ಲೆಯ ನಾಯಕರು





ಊರಿನಲ್ಲೂ ಯುವಕರಿಗೆ ಸ್ಪೂರ್ತಿಯಾಗಿ ಒಬ್ಬ ನಾಯಕ ಇದ್ದೇ ಇರುತ್ತಾನೆ.

إناللّه وإنا اليه راجعون
‎اَللــَّهُـمَّ اغْــفِــرْ لَــهُ و ارْحَــمْهُ ، واَدْخِلْهُ الجَنَّة مَعَ الأبْرار،، اللّهُمَّ اجْعَلْ قَبَرهُ رَوْضَةً مِنْ رِيَاضِ الجَنَّةَ وَلاَ تَجْعَلْ قَبَرَهُ حُفْرَةً مِنْ حُفْرِ النِّيرانْ. 
‎آميــــــن يـا رب الــعالمــيــــــــن

 ಪ್ರತಿಯೊಂದು ಊರಿನಲ್ಲೂ ಯುವಕರಿಗೆ ಸ್ಪೂರ್ತಿಯಾಗಿ ಒಬ್ಬ ನಾಯಕ ಇದ್ದೇ ಇರುತ್ತಾನೆ.
ಅದೇ ರೀತಿ ಸೌದಿ ಅರೇಬಿಯಾದ ಅಲ್ ಹಸ್ಸಾದಲ್ಲೂ ಯುವಕ/ವಯಸ್ಕರಿಗೆ ಭೇದವಿಲ್ಲದೆ ನಮ್ಮೆಲ್ಲರಿಗೂ ಮಾದರಿಯಾದ ಮೇರು ವ್ಯಕ್ತಿತ್ವದ ಒಡೆಯರಿದ್ದರು, ಅವರೇ ನಮ್ಮ ಪ್ರೀತಿಯ ಅಲಿಯಾಕ(ಅಬ್ದುಲ್ ರಹ್ಮಾನ್ ಕೈರಂಗಳ).
ಗಲ್ಫಿನಲ್ಲಿ ಮೊತ್ತಮೊದಲ ಕರ್ನಾಟಕದ ಸುನ್ನತ್ ಜಮಾತಿನ ಸಂಘಟಮೆಯಾದ GKSF ನ ಸ್ಥಾಪಕರಲ್ಲಿ ಮೊದಲಿಗರಾಗಿ, ತದನಂತರ KCF ಅಲ್ ಹಸ್ಸಾ ಘಟಕದ ಅಧ್ಯಕ್ಷರಾಗಿ - ಕೋಶಾಧಿಕಾರಿ ಯಾಗಿ, ಸುನ್ನತ್ ಜಮಾತಿನ ಹಲವಾರು ಸಂಘಸಂಸ್ಥೆಗಳಲ್ಲಿ ನಾಯಕರಾಗಿ - ಸಹಾಯಿಯಾಗಿ,
ಹೀಗೇ.. ಕೆಲಸದ ಒತ್ತಡದ ನಡುವೆಯೂ ಸುನ್ನತ್ ಜಮಾತ್ ಗಾಗಿ ಹಗಲಿರುಳು ದುಡಿದು ವಿದ್ವಾಂಸರುಗಳ ಪ್ರಾರ್ಥನೆಗಳಿಗೆ ಪಾತ್ರರಾದ ರಹ್ಮಾನಾಕ ಇಂದು ನಮ್ಮೊಂದಿಗಿಲ್ಲ..
KCF ನ ಯಾವುದೇ ಕಾರ್ಯಕ್ರಮ ಇರಲಿ, ಅದರಲ್ಲಿ ಮುಂಚೂಣಿಯಾಗಿ ಆ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸುವುದರಲ್ಲಿ ರಹ್ಮಾನಾಕ ಮೊದಲಿಗರಾಗಿರುತ್ತಾರೆ. ತನ್ನ ಗೆಳೆಯರಿಗೆ ಏನೇ ಸಹಾಯ ಸಹಕಾರ ಬೇಕಾದರೂ ಅವರಿಗೆ ಕರೆ ಮಾಡಿದರೆ ಯಾವುದೇ ಸಮಯವೇ ಆಗಿರಲಿ ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು.
ಇಂದು(23/09/2017) ರಹ್ಮಾನಾಕರವರು ನಿಧನ ಹೊಂದಿದರು ಎಂಬ ಸಂದೇಶ ನೋಡಿದಾಗ ಒಮ್ಮೆಲೇ ಸಿಡಿಲೆರಗಿದಂತಾಯಿತು.
ನಾವು ಯಾವುದೇ ಸಮಯದಲ್ಲಿ ಅವರ ಅಂಗಡಿಗೆ ಹೋದರೆ ಅವರ ಮೊದಲ ಮಾತು, "ಏನು ಕುಡಿಯುತ್ತೀರಾ.?" ಎಂದು ತಂಪು ಪಾನೀಯಗಳನ್ನು ನೀಡಿ ಉಪಚರಿಸುವುದು ಮತ್ತು ಅವರಿಗಿಂತ ನಾವು ಪ್ರಾಯದಲ್ಲಿ ಎಷ್ಟೇ ಸಣ್ಣವರಾಗಿದ್ದರೂ ಅವರು ನಮ್ಮನ್ನು ಸಂಬೋಧಿಸುವುದು ಬಹುವಚನದಲ್ಲೇ.!
ನಾನು ಊರಿಗೆ ಹೊರಡುವಾಗ ನನ್ನೊಂದಿಗೆ, 
:"ನಿಮಗೆ ಏನೇ ಸಹಾಯ ಬೇಕಾದರೂ ನನಗೆ ಕರೆ ಮಾಡಿ" ಎಂದು ಹೇಳಿದ ರಹ್ಮಾನಾಕನ ಮಾತು ಈಗ ಕೇಳಿದಂತೆ ಭಾಸವಾಗುತ್ತಿದೆ.
- ಸಾವಿನ ರುಚಿಯನ್ನು ಎಲ್ಲರೂ ಅನುಭವಿಸಲೇಬೇಕು. ಆದರೆ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದವರು ಈಗ ನಮ್ಮೊಂದಿಗೆ ಇಲ್ಲ ಎನ್ನುವಾಗ ದುಃಖವನ್ನು ತಡೆಹಿಡಿಯಲು ಬಹಳ ಕಷ್ಟ..
(ನಮ್ಮ ಎಲ್ಲಾ ಸಹೋದರರೂ, ನಮ್ಮನ್ನಗಲಿದ - ಅಬ್ದುಲ್ ರಹ್ಮಾನ್ ಕೈರಂಗಳ ರವರ ಮೇಲೆ ಖುರಾನ್, ತಹ್ಲೀಲ್ ಗಳನ್ನು ಓದಿ ಹದ್ಯಾ ಮಾಡಬೇಕಾಗಿ ಕೇಳಿಕೊಳ್ಳುತ್ತಿದ್ದೇವೆ)
ಅಲ್ಲಾಹು ಅವರ ಕುಟುಂಬಕ್ಕೆ ಶಾಂತಿ ಸಮಾಧಾನವನ್ನು ದಯಪಾಲಿಸಲಿ ಹಾಗೂ ಅವರ ಖಬರ್ ಜೀವನವನ್ನು ಸಂತೋಷಗೊಳಿಸಲಿ, ಆಮೀನ್.
_:ಇಕ್ಬಾಲ್ ಜಿ.ಕೆ.ಗುಲ್ವಾಡಿ_

Popular Posts

Blog Archive