ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಪಾಣೆಮಂಗಳೂರು ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP" ಇತ್ತೀಚೆಗೆ ಗೋಳಿಪಡ್ಪು ಮದರಸ ಹಾಲ್ ನಲ್ಲಿ. ಸೆಕ್ಟರ್ ಅಧ್ಯಕ್ಷರಾದ PS ಯಹ್ಯಾ ಮದನಿ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಶಫೀಕ್ ಸಖಾಫಿ ದುವಾದೊಂದಿಗೆ ಚಾಲನೆ ನೀಡಿದರು ಹಾಗೂ ಕ್ಯಾಂಪನ್ನು ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಅನ್ಸಾರ್ ಕಾರಜೆ ಸ್ವಾಗತಿಸಿದರು. ಡಿವಿಷನ್ ನಾಯಕರಾದ ಮೆದು ಮದನಿ ಉಸ್ತಾದರು, ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಪಾಣೆಮಂಗಳೂರು ಸೆಕ್ಟರ್ ಉಸ್ತುವಾರಿ ಹಾರೀಸ್ ಚಟ್ಟೆಕ್ಕಲ್,ಡಿವಿಶನ್ ನಾಯಕರಾದ ಅಲ್ತಾಫ್ ಕೊಳಕೆ,ಇರ್ಷಾದ್ ಗೂಡಿನಬಳಿ,ಮೌಸೂಫ್ ಮೆಲ್ಕಾರ್ ಸೆಕ್ಟರ್ ಮಾಜಿ ಅಧ್ಯಕ್ಷರಾದ ಮಜೀದ್ ಸಖಾಫಿ,ಉಸ್ಮಾನ್ ಸಖಾಫಿ ಹಾಗೂ ಸೆಕ್ಟರ್ ನಾಯಕರು ಉಪಸ್ಥಿತರಿದ್ದರು.ಸೆಕ್ಟರ್ ಕಾರ್ಯದರ್ಶಿ ರಹ್ಮತುಲ್ಲಾ ಸಿದ್ದೀಖ್ ವಂದಿಸಿದರು.