Friday, 18 August 2017

ಎಸ್ಸೆಸ್ಸಫ್ ಕಾರ್ಯಕರ್ತರೊಡನೆ ಪ್ರೀತಿ ಪೂರ್ವಕ..

ಎಸ್ಸೆಸ್ಸಫ್ ಕಾರ್ಯಕರ್ತರೊಡನೆ ಪ್ರೀತಿ ಪೂರ್ವಕ..

ಅಸ್ಸಲಾಮು ಅಲೈಕುಂ.

ಸಹೃದಯೀ ಎಸ್ಸೆಸ್ಸಫ್ ಕಾರ್ಯಕರ್ತರೇ..

ನಮ್ಮ ಮುಂದೆ ಹಲವಾರು ಸವಾಲುಗಳಿವೆ.
ಮುಸ್ಲಿಂ ಸಮುದಾಯವಿಂದು ಹಲವಾರು ಜ್ವಲಂತ ಸಮಸ್ಯೆಗಳ ನಡುವೆ ಸಿಲುಕಿಕೊಂಡು ನರಳಾಡುತ್ತಿರುವಂತಹ ಸನ್ನಿವೇಶದಲ್ಲಾಗಿದ್ದೇವೆ ನಾವುಗಳಿರುವುದು.
"ಒಳಿತನ್ನು ಆಹ್ವಾನಿಸುವ ಕೆಡುಕನ್ನು ವಿರೋಧಿಸುವ ಒಂದು ಸಮೂಹ ನಿಮ್ಮಲ್ಲಿರಲಿ ಅವರೇ ವಿಜಯಶಾಲಿಗಳು" ಅನ್ನುವ ವಚನವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ನಾವು ಕಾರ್ಯೋನ್ಮುಖರಾಗಬೇಕಿದೆ.
ಕಳೆದ ಎರಡೂವರೆ ದಶಕಗಳಿಂದ ಕನ್ನಡ ಮಣ್ಣಿನಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ರಾಂತಿಯನ್ನು ಸೃಷ್ಟಿಸಿ ಮುನ್ನೇರುತ್ತಿರುವ ಎಸ್ಸೆಸ್ಸಫ್ ಸಂಘಟನೆಗೆ ಆರೋಪಗಳು, ಅಪಹಾಸ್ಯಗಳು ಹೊಸತೇನಲ್ಲ.
ಒಂದು ವೇಳೆ ಸಂಘಟನೆಯ ವಿರುದ್ಧ ಆರೋಪ ಮಾಡುತ್ತಾ ಬಂದವರಿಗೆ ಮರುತ್ತರ ನೀಡುತ್ತಾ ಕಾಲ ಕಳೆದಿದ್ದರೆ ಕರ್ನಾಟಕದ ಮಣ್ಣಿನಲ್ಲಿ ಇಷ್ಟೊಂದು ಶೈಕ್ಷಣಿಕ, ಧಾರ್ಮಿಕ ಕೇಂದ್ರಗಳು ತಲೆಯೆತ್ತಿ ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ.
ಮುಸ್ಲಿಂ ಸಮುದಾಯದ ಸಹೋದರಿಯರು ಅಸುರಕ್ಷಿತೆಯ ಭಾವನೆಯಿಂದ  ವಿದ್ಯಾಭ್ಯಾಸವನ್ನು ಪಡೆಯುವುದನ್ನು ಮನಗಂಡು ರಾಜ್ಯದ ಹಲವು ಕಡೆಗಳಲ್ಲಿ ನೈತಿಕತೆಯಿಂದ ಕೂಡಿದ ಕಾಲೇಜ್ ಕ್ಯಾಂಪಸ್ ಗಳನ್ನೊಳಗೊಂಡ ಮಹಿಳಾ ಕಾಲೇಜ್ ಗಳು ಸಮುದಾಯದ ಅಭಿಮಾನದ ಪ್ರತೀಕವಾಗಿ ಬೆಳೆದು ನಿಂತವು.

ಸಾಮಾಜಿಕ ತಾಣಗಳು ಒಳಿತುಗಳಿಗಿಂತ ಅಧಿಕವಾಗಿ ಕೆಡುಕಿನ ಕೇಂದ್ರಗಳಾಗಿ ಬದಲಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಸಂಘಟನೆಯ ವಿರುದ್ಧವೋ, ಸಂಘಟನಾ ನಾಯಕರ ವಿರುದ್ಧವೋ ಕಪೋಲಕಲ್ಪಿತ ಆರೋಪಗಳನ್ನು ಹೊರಿಸಿ, ಸಮುದಾಯದ ನಡುವೆ ಅನೈಕ್ಯತೆಯನ್ನು ಸೃಷ್ಟಿಸುವ ಪ್ರಯತ್ನ ನಡೆಸುವ ಕುಬುದ್ಧಿಗಳ ಪ್ರಯತ್ನಗಳಿಗೆ ನಾವು ಸಾಥ್ ನೀಡಬಾರದು.
ಯಾವುದೇ ಬರಹಗಳನ್ನೋ,  ವಾಯ್ಸ್ ಸಂದೇಶಗಳನ್ನೋ ಕಳುಹಿಸುವುದರ ಮೂಲಕನೋ, ನಮ್ಮ ಸಂಘಟನೆ, ನಾಯಕರ ವಿರುದ್ಧದ ಬರಹಗಳಿಗೆ ಪ್ರತಿಕ್ರಿಯಿಸುವುದರ ಮೂಲಕ
ಅನಗತ್ಯ ಚರ್ಚೆಗಳಿಗೆ ನಿಮ್ಮ ಸಮಯವನ್ನು ಮೀಸಲಿರಿಸದೆ, ಸಮುದಾಯದ ನಡುವಿನ ಸಮಸ್ಯೆಗಳಿಗೆ ಬೆಳಕು ಚೆಲ್ಲುವಂತಹ ಯೋಜನೆ, ಎಸ್ಸೆಸ್ಸಫ್ ನಡೆಸುತ್ತಿರುವ ಶೈಕ್ಷಣಿಕ, ಧಾರ್ಮಿಕ ಕ್ರಾಂತಿಯ ಕುರಿತಾದ ಮಾಹಿತಿಗಳನ್ನು ಪಸರಿಸುವಂತಾಗಲು ನಿಮ್ಮ ಅತ್ಯಮೂಲ್ಯವಾದ ಸಮಯಗಳನ್ನು ಸದುಪಯೋಗಪಡಿಸಿಕೊಳ್ಳಿರಿ.
ಅದಲ್ಲದೆ ಸಂಘಟನೆಯ ಸರ್ಕ್ಯುಲರ್ ಗೆ ಅನುಸಾರವಾಗಿ ಪ್ರತಿಯೊಂದು ಪದ್ಧತಿಗಳನ್ನು ಯಥಾವತ್ತಾಗಿ ನಡೆಸಿಕೊಂಡು ಬಂದರೆ, ಹಲವಾರು ಪರಿಣಾಮಕಾರಿಯಾದ ಸೇವೆಗಳು ಸಮುದಾಯಕ್ಕೆ ಸಮರ್ಪಿಸಲು ನಮ್ಮಿಂದ ಸಾಧ್ಯವಿದೆ. ನಮ್ಮ ಸಂಘಟನಾ ಆವೇಶ ಆ ರೂಪದಲ್ಲಿ ತೋರ್ಪಡಿಸಲು ನಮ್ಮಿಂದ ಸಾಧ್ಯವಾಗಲಿ.


ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ
ರಾಜ್ಯಾಧ್ಯಕ್ಷರು ಎಸ್ಸೆಸ್ಸಫ್ ಕರ್ನಾಟಕ

High School Fraternity

SSF ಪಾಣೆಮಂಗಳೂರು ಸೆಕ್ಟರ್

  ( ದೇಶ ಉಳಿಸಿ ದ್ವೇಷ ಅಳಿಸಿ
(ಎಂಬ ಷೋಷವಾಕ್ಯದೊಂದಿಗೆ)
🔅ಸೆಕ್ಟರ್ ಮಟ್ಟದ 🔅

💈  High School Fraternity 💈

★ Date. 20-8-2017
★ Place. ಕೊಳಕೆ
★ Time. 9.00Am

💫ಸೆಕ್ಟರ್ ವ್ಯಾಪ್ತಿಯ 11 ಯೂನಿಟ್ ನಿಂದ ಕನಿಷ್ಠ 10 ವಿಧ್ಯಾರ್ಥಿಗಳನ್ನು (7,8,9,10 ತರಗತಿಯಾ ವಿಧ್ಯಾರ್ಥಿಗಳಿಗೆ ಮಾತ್ರ) ಕಳಿಸಿ ಯಶಸ್ವಿಗೊಳಿಸಬೇಕಾಗಿ ಯೂನಿಟ್ ನಾಯಕರಲ್ಲಿ ವಿನಂತಿ
✍🏻
ಸೆಕ್ಟರ್ ಹೈಸ್ಕೂಲ್ ಕನ್ವಿನರ್
ಹಾರೀಸ್ ಕೆಂಜಿಲ

20ಕ್ಕೆ "Campus Confabulation" ವಿಧ್ಯಾರ್ಥಿಗಳ ಸ್ನೇಹ ಸಮ್ಮಿಳನ

"ದೇಶ ಉಳಿಸಿ, ದ್ವೇಷ ಅಳಿಸಿ"

"Campus Confabulation"

SSF Campus - ವಿಧ್ಯಾರ್ಥಿಗಳ ಸ್ನೇಹ ಸಮ್ಮಿಳನ


























ಆಗಸ್ಟ್ ೧೮:ವ್ಯಾಪಿಸುತ್ತಿರುವ ಕೋಮು ಪ್ರಚೋದದಿತ ಹಿಂಸೆ ಮತ್ತು ದ್ವೇಷ ರಾಜಕೀಯದಿಂದ ದೇಶವನ್ನು ರಕ್ಷಿಸಲು "ದೇಶ ಉಳಿಸಿ, ದ್ವೇಷ ಅಳಿಸಿ" ಎಂಬ ಘೋಷ ವಾಕ್ಯದೊಂದಿಗೆ SSF  ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದಾದ್ಯಂತ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಅದರ ಭಾಗವಾಗಿ  ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಲು "CAMPUS CONFABULATION"   ಎಂಬ ಹೆಸರಿನಲ್ಲಿ ಡಿವಿಜನ್ ಮಟ್ಟದ ವಿಧ್ಯಾರ್ಥಿಗಳ ಸ್ನೇಹ ಸಮ್ಮಿಳನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದರ ಬಂಟ್ವಾಳ ಡಿವಿಜನ್ ಮಟ್ಟದ ಕಾರ್ಯಕ್ರಮವು Aug 20ನೆ ತಾರೀಖು 2:00 ಗಂಟೆಗೆ ಸರಿಯಾಗಿ ಬಿ.ಸಿ ರೋಡ್ ಜಿಲ್ಲಾ Ssf ಕಛೇರಿಯಲ್ಲಿ ನಡೆಯಲಿದೆ.
ವಿಧ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆಯುವಂತೆ‌ ವಿನಂತಿಸಲಾಗಿದೆ.

Popular Posts

Blog Archive