ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ ಫೆಡರೇಷನ್ ಎಸ್ಎಸ್ಎಫ್ ಪೆರಿಯಪಾದೆ ಶಾಖಾವತಿಯಿಂದ ರಾಜ್ಯ ಸಮಿತಿಯ ನಿರ್ದೇಶನದಂತೆ ಗೌರವ ಎಂಬ ವಿಷಯದಲ್ಲಿ ವಿಶೇಷ ತರಗತಿ ಇತ್ತೀಚೆಗೆ ಇಬ್ರಾಹಿಂ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾಧ್ಯಕ್ಷರಾದ ಹಾರಿಸ್ ಪೆರಿಯಪಾದೆ ವಹಿಸಿದ್ದರು.
ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ರಶೀದ್ ವಗ್ಗ ಇವರು ತರಗತಿ ಮಂಡಿಸಿದರು. ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಮರನ್ನು ಸ್ವಹಾಬಿಗಳು ಗೌರವಿಸಿದ ರೀತಿಗಳನ್ನು ಮನಮುಟ್ಟುವಂತೆ ಸವಿವರವಾಗಿ ವಿವರಿಸಿದರು. ತಂದೆ ತಾಯಿಗಳನ್ನು, ಗುರು ಹಿರಿಯರನ್ನು ಗೌರವಿಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪವಿತ್ರ ಉಮ್ರಾ ಯಾತ್ರೆ ಕೈಗೊಂಡ ಮೈಮೂನ್ ಜುಮಾ ಮಸೀದಿ ಪೆರಿಯಪಾದೆಯ ಅಧ್ಯಕ್ಷರಾದ ಅಬ್ಬಾಸ್ ಪೆರಿಯಪಾದೆ ಹಾಗೂ ಎಸ್ ವೈ ಎಸ್ ಪೆರಿಯಪಾದೆ ಬ್ರಾಂಚ್ ಅಧ್ಯಕ್ಷರಾದ ಆದಂ ಇವರಿಗೆ ಶಾಲು ಹೊದಿಸಿ ಗೌರವಿಸಲಾಯಿತು. ಕೊನೆಯಲ್ಲಿ ಇತ್ತೀಚೆಗೆ ನಮ್ಮನ್ನಗಲಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಕುಮರಂಪುತ್ತೂರು ಅಲಿ ಉಸ್ತಾದ್, ವಾರಿಸ್ ಸಖಾಫಿ ಆಸಿಯಮ್ಮ ನಂದಾವರ ಇವರಿಗೆ ತಹ್ಲೀಲ್ ಸಮರ್ಪಿಸಿ ದುವಾ ಮಾಡಲಾಯಿತು.

No comments:
Post a Comment
thank you