Tuesday, 24 October 2017

ಎರಡನೇ ವರ್ಷದ ಸಂಭ್ರಮದಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ತುಂಬೆ🌹

25/10/15 ರಂದು  ಅಸೆಯ್ಯದ್ ಹಬೀಬುಲ್ಲಾಹಿ ಪೆರುವಾಹಿ ತಂಗಳರ ದಿವ್ಯ ಹಸ್ತದೊಂದಿಗೆ ಉದ್ಘಾಟನೆಗೊಂಡು ಬೆಳಗಿದ ತುಂಬೆ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಸುನ್ನೀ ಸಂಸ್ಥೆಯು ಅಲ್ಲಾಹನ ದಿವ್ಯ ಅನುಗ್ರಹದೊಂದಿಗೆ ತುಂಬೆಯಲ್ಲಿ ತಲೆಎತ್ತಿ ನಿಂತು ಇಂದು ಎರಡನೇ ವರ್ಷವನ್ನು ಪೂರ್ತಿಗೊಳಿಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.






ಎರಡು ವರ್ಷ ಪೂರ್ತಿಗೊಳಿಸಿ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಎರಡು ವರ್ಷದ ಹದಿಹರೆಯದ ಕೂಸು ತುಂಬೆಯ ಸುನ್ನಿ ಕಾರ್ಯಕರ್ತರ ದೀನಿ ಧಾನಿಗಳ ದಿವ್ಯ ನೆರಳಿನೊಂದಿಗೆ ಹೆಮ್ಮರವಾಗಿ ಬೆಳೆದುನಿಂತಿದೆ.

👉 ಸಂಸ್ಥೆಯ ಕಿರು ಪರಿಚಯ ಹಾಗು ಕಾರ್ಯವೈಖರಿ👇

👉 ಸೆಯ್ಯದ್ ಹಬೀಬುಲ್ಲಾಹಿ ಪೆರುವಾಹಿ ತಂಗಳರ ಪುಣ್ಯ ಅಸ್ತದೊಂದಿಗೆ ಬೆಳಗಿದ ಸಂಸ್ಥೆ:-
ಸೆಯ್ಯದ್ ಕುಟುಂಬದ ನೇತಾರ ಅಸೆಯ್ಯದ್ ಹಬೀಬುಲ್ಲಾಹಿ ಪೆರುವಾಹಿ ತಂಗಳರ ಪುಣ್ಯ ಅಸ್ತದೊಂದಿಗೆ ಉದ್ಘಾಟನೆಗೊಂಡ ಸಂಸ್ಥೆಯು ದೀನಿ,ಸಾಮಾಜಿಕ,ಬಡವರ ಸಂಕಷ್ಟಕ್ಕೆ ಸ್ಪಂದಿಸಿ ನಾಡಿನಲ್ಲಿ ಸಂಸ್ಥೆಯು ಮಿಂಚಿನ ಸರಮಾಲೆಯ ವೇಗವನ್ನು ಪಡೆದುಕೊಂಡಿದೆ.
ಸಂಸ್ಥೆಯು ಈದೀಗ ಬಹು!ಮುಸ್ತಾಕ್ ಮದನಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮುಂದುವರೆಯುತ್ತಿದೆ.





👉 ರೋಗಿಗಳಿಗೆ ಸಹಾಯ ನಿಧಿ:-
ತುಂಬೆ ನಾಡಿನ ಬಡ ಕುಟುಂಬದ ರೋಗಿಗಳ ಚಿಕಿತ್ಸೆಗಳಿಗೆ ನಮ್ಮ ಸಂಸ್ಥೆಯ ವತಿಯಿಂದ ಉದಾರವಾದ ಸಹಾಯ ಮೊತ್ತವನ್ನು ನೀಡುತ್ತಿದೇವೆ ಅದು ಮುಂದಕ್ಕೂ ಕಾರ್ಯರೂಪದಲ್ಲಿದೆ.

👉 ಈದ್-ಹಬ್ಬದ ಪ್ರಯುಕ್ತ ವಸ್ತ್ರ ವಿತರಣೆ:-
ನಾಡಿನಲ್ಲೆಡೆ ಮುಸಲ್ಮಾನರು ಸಂಭ್ರಮ ಸಡಗರದಿಂದ ಅಚರಿಸುವ ಈದ್-ಪೆರ್ನಾಲ್ ಹಬ್ಬದ ಪ್ರಯುಕ್ತ ನಾಡಿನ ಅರ್ಹ ಬಡ ಕುಟುಂಭಗಳಿಗೆ ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ವಸ್ತ್ರ ನೀಡಿ ಸಹಾಯಿಸುತ್ತಿದೆ.

👉 ಬಡ ಹೆಣ್ಣು ಮಕ್ಕಳ ಮದುವೆಗೆ ಸಹಾಯ ನಿಧಿ:-
ನಾಡಿನಲ್ಲಿ ಹಲವಾರು ಬಡ ಹೆಣ್ಮಕ್ಕಳ ವಿವಾಹ ಕಾರ್ಯಕ್ಕೆ ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ಸಹಾಯ ನಿಧಿಯನ್ನು ವಿತರಿಸಲಾಗಿದೆ ಅಲ್ಲದೇ ಪರ ಊರಿನ ಬಡ ಹೆಣ್ಮಕ್ಕಳ ವಿವಾಹಕ್ಕೂ ಸಹಾಯ ಅಸ್ತವನ್ನು ಸಂಸ್ಥೆಯು ನೀಡಿದೆ ಮುಂದೆಯೂ ನಮ್ಮ ಸಹಾಯ ನಿಧಿ ಪ್ರಗತಿಯಲ್ಲಿದೆ.

👉 ರಂಝನ್ ಕೀಟ್ ವಿತರಣೆ:-
ವರ್ಷಪ್ರತಿ ರಂಜಾನ್ ಪ್ರಯುಕ್ತ ನಾಡಿನ ಬಡವರನ್ನು ಗುರುತಿಸಿ ಅವರಿಗೆ ರಂಜಾನ್ ತಿಂಗಳ ರೇಶನ್ ಅಹಾರ ಸಾಮ್ರಾಗಿಗಳು ಸಂಸ್ಥೆಯು ನೀಡುತ್ತಿದೆ,ಮುಂದೆಯೂ ಇದು ಪ್ರಗತಿಯಲ್ಲಿದೆ.

👉 ಸಡಗರದ ಈದ್-ಮಿಲಾದ್'ನಲ್ಲಿ ಸಾಗಿ ಬರುತ್ತಿರುವ ರಾಲಿಗೆ ತಂಪು ಪಾನೀಯ ವಿತರಣೆ:-
ವಿಶ್ವ ಪ್ರವಾದಿ ಮುಹಮ್ಮದ್ ಮುಸ್ತಾಫ(ಸ.ಅ)ರ ಜನ್ಮದಿನಾಚರಣೆಯ ಪ್ರಯುಕ್ತ ನಾಡಿನಲ್ಲಿ ಸಾಗಿ ಬರುವ ಮೀಲಾದ್ ಜಾಥಾಕ್ಕೆ ಸುನ್ನೀ ಕಲ್ಚರಲ್ ಸೆಂಟರ್ ಕಚೇರಿಯ ಮುಂದೆ ತಂಪು ಪಾನೀಯವನ್ನು ನೀಡುತ್ತಿದೆ.

👉 ತಿಂಗಳು ಪ್ರತಿ ದೀನಿ ತರಗತಿ:-
ಫ್ಯಾಷನಿನ ಆಧುನಿಕ ಯುಗದಲ್ಲಿ ದಾರಿ ತಪ್ಪುತ್ತಿರುವ ಯುವ ಸಮೂಹವನ್ನು ನೈಜ್ಯ ಸುನ್ನತ್ ಜಮಾಹತಿನ ಅಶಯ ಅದರ್ಶವನ್ನು ದೀನಿ ಪ್ರಬೋದನೆಯನ್ನು ಉಜ್ಜವಲಗೊಳಿಸುವ ಸಲುವಾಗಿ ತುಂಬೆಯಲ್ಲಿ ತಿಂಗಳು ಪ್ರತಿ ದೀನಿ ತರಗತಿಯನ್ನು ನಡೆಸಲಾಗುತ್ತಿದೆ.

👉 ತುಂಬೆ ಜುಮಾ ಮಸ್ಜಿದ್'ಗೆ ಕೊಡುಗೆ:-
ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ತುಂಬೆ ಮುಹಿಯ್ಯದ್ದಿನ್ ಜುಮಾ ಮಸೀದಿಗೆ ಕಳೆದ ರಂಜಾನಿನಲ್ಲಿ ಕಾಲು ತೊಳೆಯುವ ಪಾತ್ರೆ,ನಮಾಜ್ ನಿರ್ವಹಿಸಲು ಬರುವವರಿಗೆ ತಲೆಗೆ ಟೊಪ್ಪಿಯನ್ನು ಕೊಟ್ಟು ಸಂಸ್ಥೆಯು ಕಿರು ಕೊಡುಗೆಯನ್ನು ನೀಡಿದೆ.

👉 ಮರಣದ ಮನೆಗೆ ಭೇಟಿ ನೀಡಿ ಸ್ವಾoತನ ಹಾಗು ತಹ್ಲೀಲ್ ಸಮರ್ಪಣೆ:-
ನಾಡಿನಲ್ಲಿ ವಫಾತದ ಮನೆಗೆ ಭೇಟಿ ನೀಡಿ ಮನೆಮಂದಿಯನ್ನು ಅರೈಸಿ ಅವರಿಗೆ ಧೈರ್ಯವನ್ನು ಕೊಟ್ಟು ವಫಾತದ ವ್ಯಕ್ತಿಯ ಮೇಲೆ ತಹ್ಲೀಲ್ ಸಮರ್ಪಿಸಿ ಅವರ ಮಗ್ಫಿರತಿಗಾಗಿ ಪ್ರಾಥಿಸುತ್ತಿದೆ.

👉 ಖಬರ್ ಗುಂಡಿ ತೊಡುವ ಸ್ವಯಂ ಸೇವಕರಿಗೆ ಸನ್ಮಾನ:-
ಒಂದೇ ಒಂದು ನಯಾ ಪೈಸೆಯನ್ನು ತೆಗೆಯದೆ ನಾಡಿನಲ್ಲಿ ಮರಣದ ವಾರ್ತೆ ಕೇಳಿದ ತಕ್ಷಣ ಖಬರ್ ಸ್ಥಾನಕ್ಕೆ ತೆರಳಿ ಖಬರ್ ಗುಂಡಿ ಅಗೆಯುವ ನಾಡಿನ ಮಾದರಿ ಸ್ವಯಂ ಸೇವಕರ ಸೇವೆಯನ್ನು ಗುರುತಿಸಿ ಅವರಿಗೆ ಕಳೆದ ಭಾರಿ ನಡೆದ ಮೂರು ದಿನಗಳ ಐತಿಹಾಸಿಕ ಕಾರ್ಯಕ್ರಮದ ಎರಡನೇ ದಿನದಲ್ಲಿ ಅಸೆಯ್ಯದ್ ಕಿಲ್ಲೂರ್ ತಂಗಳರ ಪುಣ್ಯ ಅಸ್ತದಿಂದ ಸನ್ಮಾನ ನೀಡಿ ಗೌರವಿಸಲಾಯಿತು.

👉 ಪ್ರಥಮ ಹಾಗು ದ್ವಿತೀಯ ವರ್ಷದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮ:-
ತುಂಬೆ ಸುನ್ನೀ ಕಲ್ಚರಲ್ ಸೆಂಟರ್ ವತಿಯಿಂದ ಪ್ರಥಮ ವರ್ಷದ ಕಾರ್ಯಕ್ರಮವು ತುಂಬೆ ನಾಡನ್ನೇ ಆಶ್ಚರಿಗೊಳಿಸಿದ್ದರೆ ಎರಡನೇ ವರ್ಷದಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮವು ಇತಿಹಾಸದ ಪುಟ ಸೇರುವಂತಾಯಿತು.
ಪ್ರಥಮ ವರ್ಷದಲ್ಲಿ ಅಸೆಯ್ಯದ್ ಚಟ್ಟೇಕಲ್ ತಂಗಳ್,ನೌಫಲ್ ಸಖಾಫಿ ಕಳಸ,ಅನ್ವರ್ ಅಲಿ ಸಖಾಫಿ ಸಿರಿಯಾ,ರ್ಮಾಸ್ಟರ್ ನಬೀಲ್ ಬೆಂಗಳೂರು,ಮಾಸ್ಟರ್ ಶಿಹಾನ್ ಉಳ್ಳಾಲ,ಶ್ರೀ ಯು.ಟಿ ಖಾದರ್ ಮುಂತಾದವರು ಭಾಗವಯಿಸಿ ಪ್ರಥಮ ವರ್ಷದ ಎರಡು ದಿನಗಳ ಕಾರ್ಯಕ್ರಮವು ತುಂಬೆ ನಾಡನ್ನೇ ಅಶ್ಚರಿಗೊಳಿಸಿದ್ಧರೆ ಎರಡನೇ ವರ್ಷದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಸೆಯ್ಯದ್ ಕಿಲ್ಲೂರ್ ತಂಗಳ್,ಹಮೀದ್ ಫೈಝಿ ಕಿಲ್ಲೂರ್,ನೌಫಲ್ ಸಖಾಫಿ ಕಳಸ,ಸ್ವಾದೀಕ್-ಅಲಿ ಗುಡಲ್ಲೂರ್,ಮುಹಿನುದ್ದೀನ್ ಬೆಂಗಳೂರು,ಮಾಸ್ಟರ್ ಶಿಹಾನ್ ಉಳ್ಳಾಲ,ಮಾಸ್ಟರ್ ನಾಸೀಫ್ ಕಲ್ಲಿಕೋಟೆ,ಯು.ಟಿ ಖಾದರ್,ರಮಾನಾಥ ರೈ ಮುಂತಾದ ಧಾರ್ಮಿಕ,ರಾಜಕೀಯ ನಾಯಕರು ಭಾಗವಯಿಸಿ ತುಂಬೆಯಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮವು ಇತಿಹಾಸವನ್ನು ನಿರ್ಮಿಸಿತ್ತು ಹಾಗು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.

👉 ಜಾಗತಿಕ ಸುನ್ನೀ ಮುಸಲ್ಮಾನರ ನೇತಾರ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರ ಸುನ್ನೀ ಕಲ್ಚರಲ್ ಸೆಂಟರ್ ಭೇಟಿ:-
ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ,ಸುನ್ನೀ ಮಕ್ಕಳ ಆವೇಷ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್ ಸುನ್ನೀ ಸುನ್ನೀ ಕಲ್ಚರಲ್ ಸೆಂಟರ್ ಕಚೇರಿಗೆ ಭೇಟಿ ನೀಡಿ ಭಕ್ತಿಪೂರ್ಣವಾದ ದುವಾ ನಡೆಸಿ ತುಂಬೆ ನಾಡನ್ನೇ ಧನ್ಯಗೊಳಿಸಿದರು ಇದು ನಾಡಿನಲ್ಲಿ ಅಳಿಸಲಾಗದ ಇತಿಹಾಸವನ್ನು ಸೃಷ್ಟಿಸಿದೆ.

👉 ಸಂಸ್ಥೆಗೆ ಸೆಯ್ಯದ್ ಕಿಲ್ಲೂರ್ ತಂಗಳರ ದುವಾ:-
ಸುನ್ನೀ ಕಲ್ಚರಲ್ ಸೆಂಟರ್ ತುಂಬೆ ಇದರ ಎರಡನೇ ವರ್ಷದ ಮೂರು ದಿನಗಳ ಕಾರ್ಯಕ್ರಮದ ಎರಡನೇ ದಿನದಲ್ಲಿ ಸೆಯ್ಯದ್ ಕಿಲ್ಲೂರ್ ತಂಗಳರು ನೇರದ ಜನಸ್ತೋಮವನ್ನು ಉದ್ದೇಶಿಸಿ ಭಾಷಣದ ಉದ್ದಗಲಕ್ಕೂ ಸುನ್ನೀ ಕಲ್ಚರಲ್ ಸೆಂಟರ್ ಸಂಸ್ಥೆಗೆ ಹಲವಾರು ಭಾರಿ ಪ್ರಾಥಿಸಿದರು ಅದರ ಪ್ರತಿಫಲವೇ ಸಂಸ್ಥೆಗೆ ಅಫಾರ ಅನುಗ್ರಹವಾಗಿದೆ.



ತುಂಬೆ ಸುನ್ನೀ ಕಲ್ಚರಲ್ ಸೆಂಟರ್ ಮುಂದಿನ ದಿನಗಳಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಯೋಜನೆಗಳನ್ನು ಹಮ್ಮಿಕೊಂಡಿದೆ ಹಾಗು ನಾಡಿನ ಅತೀ ಬಡ ಹೆಣ್ಣನ್ನು ಗುರುತಿಸಿ ವಿವಾಹವವನ್ನು ನಡೆಸಿಕೊಡಲು ಸಹ ಸಂಸ್ಥೆ ಶ್ರಮಿಸುತ್ತಿದೆ.ಎಲ್ಲ ಸುನ್ನೀ ಕಾರ್ಯಕರ್ತರ ಕಠಿಣ ಶ್ರಮದ ಫಲವಾಗಿ ಧಾನಿಗಳ ಉದಾರ ನೆರವಿನಿಂದ ನಮ್ಮ ಸಂಸ್ಥೆಯು ನಾಡಿನ ಹಾಗು ಬಡವರ ಸಂಕಷ್ಟಕ್ಕೆ ಹಾಗು ಧಾರ್ಮಿಕ ಬೋಧನೆಯನ್ನು ನೀಡುತ್ತಿದೆ.ನಿಮ್ಮೆಲ್ಲರ ಪ್ರೀತಿ ವಿಶ್ವಾಶ ಉದಾರ ನೆರವನ್ನು ಸಹ ಸಂಸ್ಥೆಯು ಕಾಯುತ್ತಿದೆ,ಸರ್ವ ಶಕ್ತನಾದ ಅಲ್ಲಾಹನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತಾ ತುಂಬೆ ನಾಡಿನಲ್ಲಿ ಸುನ್ನೀ ಕಲ್ಚರಲ್ ಸೆಂಟರ್ ಸಂಸ್ಥೆಯು ಇನ್ನಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಹಾರೈಸುತ...

✍ಇರ್ಫಾಝ್ ತುಂಬೆ

No comments:

Post a Comment

thank you

Popular Posts

Blog Archive