ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡೆರೇಶನ್ ವತಿಯಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸುಕೊಂಡು ಬರುತ್ತಿರುವಂತಹ ರಾಜ್ಯದ ಅತೀ ಮನಮೋಹಕ ಕಲಾ ಸಾಹಿತ್ಯ ಹಬ್ಬ ಪ್ರತಿಭೋತ್ಸವ, ಇದರ 2017 ನೇ ಸಾಲಿನ ಪ್ರತಿಭೋತ್ಸವ-2K17 ಇದರ ಪಾಣೆಮಂಗಳೂರ್ ಸೆಕ್ಟರ್ ಮಟ್ಟದ ಕಾರ್ಯಕ್ರಮವು ನೂರುಲ್ ಹುದಾ ಮಸ್ಜಿದ್ ಕಾರಾಜೆ ವಠಾರದಲ್ಲಿ ಮೂರು ಸ್ಟೇಜ್'ಗಳಲ್ಲಾಗಿ ತಾರೀಖು 10/12/2017 ಭಾನುವಾರದಂದು ವೀಕ್ಷಕರ ಮನಸೂರಗೊಳ್ಳುವಂತೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಸೆಕ್ಟರ್ ವ್ಯಾಪ್ತಿಯ ಹನ್ನೆರಡು ಯುನಿಟ್'ಗಳ ಸುಮಾರು 200ರಷ್ಟು ಸ್ಪರ್ಧಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಅಪೂರ್ವ ಅವಕಾಶವನ್ನು ಪಡೆದರು.
ಜೂನಿಯರ್, ಸೀನಿಯರ್, ದ'ಅವಾ ಜೂನಿಯರ್ , ದ'ಅವಾ ಸೀನಿಯರ್, ಜನರಲ್ ಮುಂತಾಗಿ ಐದು ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಬಲ ಪೈಪೋಟಿಯ ನಡುವೆ ಕೊಳಕೆ ಯುನಿಟ್ ಸತತ ಆರನೇ ಬಾರಿಗೆ ಯುನಿಟ್ ಚಾಂಪಿಯನ್ ಅನ್ನು ತನ್ನದಾಗಿಸಿಕೊಂಡಿತು.
(science model)
ಪ್ರತೀ ವಿಭಾಗದಲ್ಲಿಯೂ ಪ್ರತ್ಯೇಕ ವಯ್ಯಕ್ತಿಕ ಚಾಂಪಿಯನ್ ಪ್ರಶಸ್ತಿಯನ್ನೂ ನೀಡಲಾಯಿತು.
ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದವರು ಮುಂದಿನ ಹಂತ ಬಿ.ಸಿ ರೋಡಿನಲ್ಲಿ ನಡೆಯುವ ಡಿವಿಜನ್ ಮಟ್ಟದ ಪ್ರತಿಭೋತ್ಸವದಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿದ್ದಾರೆ.
No comments:
Post a Comment
thank you