Saturday, 28 October 2017

ಯುವಜನತೆಯ ಬರಹಗಳು ಕೇವಲ ಅಂತರ್ಜಾಲಗಳಿಗೆ ಮಾತ್ರ ಸೀಮಿತವಾಗದಿರಲಿ - ರಶೀದ್ ವಿಟ್ಲ

          ನಾಲಕ್ಕು ಅಕ್ಷರಗಳ ಕರುಣೆ ತುಂಬಿದ ಬರಹದಿಂದ ಸಮಾಜದಲ್ಲೂ ಮತ್ತು  ಮಾನವರ ಎಡೆಯಲ್ಲೂ ಅಳಿಸಲಾಗದ ಬಹು ದೊಡ್ಡ ಕ್ರಾಂತಿಯನ್ನೇ ಉಂಟುಮಾಡಲು ಸಾಧ್ಯ ಎಂದು   ಪ್ರಮುಖ ಪತ್ರಕರ್ತರು ಬರಹಗಾರರೂ ಮತ್ತು ಉತ್ತಮ ಸಮಾಜ ಸೇವಕರು ಆದ ರಶೀದ್ ವಿಟ್ಲ ರವರು ಹೇಳಿದರು.
   
         ಮುಂದುವರಿದು ಮಾತನಾಡಿದ ಅವರು ಸಮಾಜದಲ್ಲಿ ಯಾವುದಾದರೂ ವಿಷಯದಲ್ಲಿ ಅಥವಾ ಯಾವುದೇ ಧರ್ಮ ಮತ್ತು ಪಂಗಡಗಳ ಎಡೆಯಲ್ಲಿ ಯಾವುದಾದರು ಸಣ್ಣ ಪುಟ್ಟ ವಿವಾದಗಳು ಇದ್ದಲ್ಲಿ ಅದನ್ನು ಬೌದೊಡ್ಡ ವಿಷಯವಾಗಿ ಬರೆದು ಸಮಾಜದಲ್ಲಿ ಇನ್ನಷ್ಟು ವಿವಾದಗಳನ್ನು ಸೃಷ್ಟಿ ಮಾಡುವುದು ಬರಹಗಾರರಿಗೆ ಭೂಷಣವಲ್ಲ ಎಂದು ಅವರು ದೊಹಾ ಖತ್ತರಿನಲ್ಲಿ ನೆಡೆದ ಕೆ. ಸಿ. ಫ್  ಸಾಹಿತ್ಯ ಕಲಾ ಒಕ್ಕೂಟದ  ಉದ್ಘಾಟನಾ ಕಾರ್ಯಕ್ರಮದಲ್ಲಿ  ಭಾಗವಹಿಸಿ ಮಾತನಾಡುತ್ತಿದ್ದರು.






        ಸಮುದಾಯದ,ಸಮಾಜದ ಪರಿಹಾರಿಸಲಾಗದ ಸಮಸ್ಯೆಯನ್ನು ಕೇವಲ ಒಂದು ಸಣ್ಣ ಬರಹದಿಂದ ಪರಿಹಾರಿಸಬಹುದೆಂದು ಅವರ ಜೀವನದಲ್ಲಿ ನಡೆದಂತ ಕೆಲವೂಂದು ಹಚ್ಚ ಹಸಿರು ಅನುಭವವನ್ನು ಅನಿವಾಸಿ ಕನ್ನಡಿಗರೂಂದಿಗೆ ಹಂಚಿದರು.ನಂತರ ಒಂದು ಉತ್ತಮ ಲೇಖನ ಹೇಗಿರಬೇಕು ಎಂಬುದರ ಬಗ್ಗೆ ಪರಸ್ಪರ ಪ್ರಶ್ನೋತ್ತರ ಕಾರ್ಯಕ್ರಮ ಕೂಡ ನಡೆಯಿತು.ಕಾರ್ಯಕ್ರಮದಲ್ಲಿ ಯೂಸಫ್ ಸಖಾಫಿ ಉಸ್ತಾದ್ ಅಯ್ಯಂಗೆರಿ ರವರು ಅದ್ಯಕ್ಷತೆಯನ್ನು ವಹಿಸಿದರು ಹಾಫಿಳ್ ಉಮರುಲ್ ಫಾರೂಕ್ ಸಖಾಫಿ ಉಸ್ತಾದ್ ಉದ್ಘಾಟಿಸಿದ ಸಭೆಯಲ್ಲಿ ರಹೀಮ್ ಸಆದಿ ಉಸ್ತಾದ್ ಫಾರೂಕ್ ಕ್ರಷ್ಣಾಪುರ ಅನೀಫ್ ಪಾತುರೂ ಆಸಿಫ್ ಕರೊಪಾಡಿ,ರಝೀನ್  ಸುಳ್ಯ,ರಿಶಾದ್ ಮಧುವನ ಮೊದಲಾದವರು ಮಾತನಾಡಿದರು.ಮೊದಲಿಗೆ ರಿಶಾದ್ ಸ್ವಾಗತಿಸಿ ಕೊನೆಯಲ್ಲಿ ಸಅದಿ ಉಸ್ತಾದ್ ವಂದಿಸಿದರು.ನಝೀರ್ ಮೂರ್ನಾಡು ಕಾರ್ಯಕ್ರಮವನ್ನು ನಿರೂಪಿಸಿದರು.
      










Thursday, 26 October 2017

ahlsunnah

ponmala usthad about thajul ulema

ponmala usthad about nothanawadi

ponmala usthad 3

ponmala usthad about nothanawadi

ಯಶಸ್ವಿಗೊಂಡ SELFIE ಕ್ಯಾಂಪ್



ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ ಸೆಲ್ಫಿ ಕ್ಯಾಂಪ್ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿಯಲ್ಲಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವಿಷನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷರಾದ ಇಬ್ರಾಹಿಂ ಸಕಾಫಿ ಸೆರ್ಕಲ ದವಾಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಪ್ರಧಾನ ಕಾರ್ಯದರ್ಶಿ ಆಬಿದ್ ನಈಮಿ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಶರೀಫ್ ನಂದಾವರ ಉದ್ಘಾಟಿಸಿದರು.







  ಕ್ಯಾಂಪಿನ ಅಮೀರ್ ಸಿದ್ದೀಕ್ ಮದನಿ ಉಸ್ತಾದರು ಕ್ಯಾಂಪಿನ ಉದ್ದೇಶ ಮತ್ತು ಸೆಲ್ಫಿ ಎಂಬ ಪದದ ವಿಶಾಲ ಅರ್ಥವನ್ನು ವಿವರಿಸಿದರು.
ಮುಹಮ್ಮದ್ ಅಲಿ ತುರ್ಕಳಿಕೆ Self improvement ಎಂಬ ವಿಷಯದಲ್ಲಿ  ತರಗತಿ ಮಂಡಿಸಿದರು. ನಂತರ ಕ್ಯಾಂಪಿಗೆ ಭಾಗವಹಿಸಿದ್ದ ಸೆಕ್ಟರ್  ನಾಯಕರಿಗೆ ಐದು ಪ್ರಶ್ನೆಗಳ ಪ್ರಶ್ನೆ ಪತ್ರಿಕೆ ನೀಡಿ ಪ್ರಥಮ ಸ್ಥಾನ ಗಳಿಸಿದ ವ್ಯಕ್ತಿಗೆ ಉತ್ತಮ ಬಹುಮಾನ ನೀಡುವುದಾಗಿ ಘೋಷಿಸಲಾಯಿತು. ಅದರೊಂದಿಗೆ ಮೂವತ್ತೊಂದು ಪ್ರಶ್ನೆಗಳನ್ನು ಒಳಗೊಂಡ ಒಂದು ಪ್ರಶ್ನೆ ಪತ್ರಿಕೆಯನ್ನು ನೀಡಿ ದಿನ ನಿತ್ಯದಲ್ಲಿ ಮಾಡಬೇಕಾದ ಸತ್ಕರ್ಮಗಳನ್ನು ಜಾಸ್ತಿ ಮಾಡುವಂತೆ  ಪ್ರೇರೇಪಿಸಲಾಯಿತು.





ನಂತರ ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಸಿರಾಜುದ್ದೀನ್ ಸಕಾಫಿ ಕನ್ಯಾನರವರು ತರಗತಿ ನಡೆಸಿದರು.
ಎಸ್‌ ವೈ ಎಸ್‌ ಬಂಟ್ವಾಳ ಝೋನ್ ಸಮಿತಿಯ ಅಧ್ಯಕ್ಷರಾದ ಹಂಝ ಮದನಿ ಮಿತ್ತೂರು ನಸೀಹತ್ ಹೇಳಿ ದುವಾ ಮಾಡಿ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.

ಬಂಟ್ವಾಳ ಡಿವಿಷನ್ ವ್ಯಾಪ್ತಿಯ ಕಲ್ಲಡ್ಕ, ಪಾಣೆಮಂಗಳೂರು, ಮಂಚಿ ಮತ್ತು ಬಂಟ್ವಾಳ ಈ ನಾಲ್ಕು ಸೆಕ್ಟರಿನ ಎಕ್ಸಿಕ್ಯುಟಿವ್ ಸದಸ್ಯರಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದ ಈ ಕ್ಯಾಂಪಿನಲ್ಲಿ ಶೆಖಡಾ 85ರಷ್ಟು ಸದಸ್ಯರು ಭಾಗವಹಿಸಿ ಸೆಲ್ಫೀ ಕ್ಯಾಂಪ್ ಯಶಸ್ವಿಗೊಳಿಸಿದರು. ಅಲ್ಲದೆ ಡಿವಿಷನ್ ಸಮಿತಿಯ ಎಲ್ಲಾ 23 ಸದಸ್ಯರೂ ಭಾಗವಹಿಸಿ ಶೇಕಡಾ 100 ಹಾಜರಾತಿಯಾಗಿರೋದು ಕ್ಯಾಂಪಿನ ಯಶಸ್ವಿಗೆ ಮತ್ತೊಂದು ಕಾರಣವಾಯಿತು.





ಕಾರ್ಯಕ್ರಮದಲ್ಲಿ ಎಸ್‌ ವೈ ಎಸ್‌ ಪಾಣೆಮಂಗಳೂರು ಸೆಂಟರ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲ ಕೊಳಕೆ, ಇಬ್ರಾಹಿಮ್ ಖಲೀಲ್ ಕಾವೂರು ಮತ್ತು ಎಸ್‌ ಎಸ್‌  ಎಫ್ ಬಂಟ್ವಾಳ ಡಿವಿಷನ್ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಸಅದಿ ಉಪಸ್ಥಿತರಿದ್ದರು.

-REPORT BY HARIS PERIYAPADE

Popular Posts

Popular Posts

Blog Archive