Tuesday, 22 August 2017

ಪರಸ್ಪರ communication gap ನಿಂದ ಧರ್ಮಾನುಯಾಯಿಗಳ ಮದ್ಯೆ ಅಪನಂಬಿಕೆ ಹುಟ್ಟುತ್ತದೆ - ಎ.ಕೆ ನಂದಾವರ


SSF ರಾಜ್ಯ ಸಮಿತಿಯು ಹಮ್ಮಿಕೊಂಡಿರುವ "ದೇಶ ಉಳಿಸಿ, ದ್ವೇಷ ಅಳಿಸಿ" ಜನಜಾಗೃತಿ ಅಭಿಯಾನದ ಭಾಗವಾಗಿ ಡಿವಿಜನ್ ಮಟ್ಟದ ವಿಧ್ಯಾರ್ಥಿಗಳ "ಸ್ನೇಹ ಸಮ್ಮಿಳನ- Campus Confabulation" ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಮಾಜದಲ್ಲಿ ಬೆಳೆಯುತ್ತಿರುವ ಅಸಹಿಷ್ಣುತೆ ಕೆಲವೊಮ್ಮೆ ಕ್ಯಾಂಪಸ್ಸಿನೊಳಗೂ ಕಾಲಿಡುತ್ತಿರುವುದು ದುರಂತ, ವಿದ್ಯಾರ್ಥಿಗಳು ಪರಸ್ಪರ ಮುಕ್ತವಾಗಿ ಬೆರೆಯುವ ಮೂಲಕ ಸ್ನೇಹ ಬೆಳೆಸಿ ಉತ್ತಮ ಕಾರ್ಯಗಳಲ್ಲಿ ಒಂದುಗೂಡಬೇಕು ಎಂದರು.


ಕಾರ್ಯಕ್ರಮದಲ್ಲಿ ಬಂಟ್ವಾಳ ವಿವಿಧ ಕಾಲೇಜ್ ನ ವಿಧ್ಯಾರ್ಥಿಗಳು ಪಾಲ್ಗೂಂಡಿದರು ಮತ್ತು ವಿವಿಧ ಕಾಲೇಜ್ ಗಳಿಂದ ಬಂದಂತಹ  ವಿಧ್ಯಾರ್ಥಿಗಳಿಂದ ಪರಸ್ಪರ ಸ್ನೇಹ ಸಮ್ಮಿಳನ ಕಾರ್ಯಕ್ರಮ ಕೂಡ ನಡೆಯಿತು.  ಡಿವಿಜನ್ ಅಧ್ಯಕ್ಷ ರಶೀದ್ ಹಾಜಿಯವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಗಳಿಸಬೇಕಾದ ಉತ್ತಮವಾದ ಅವ್ಯಾಸಗಳು ನಮ್ಮ ಜೀವನದ ಶೈಲಿಯನ್ನೆ ಬದಲಿಸುತ್ತದೆ ಎಂದು ಹೇಳಿದರು  







ಬಿ.ಸಿ ರೋಡ್ ಜಿಲ್ಲಾ SSF ಕಛೇರಿಯಲ್ಲಿ ನಡೆದ ಕಾರ್ಯಕ್ರಮವು ಡಿವಿಜನ್ ಅಧ್ಯಕ್ಷ ರಶೀದ್ ಹಾಜಿ ವಗ್ಗರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕ್ಯಾಂಪಸ್ ಚೇಯರ್'ಮ್ಯಾನ್ ಸಿದ್ದೀಕ್ ಸ'ಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಂಟ್ವಾಳ ಡಿವಿಜನ್ ಸಮಿತಿಯ ಇತರ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.ವಿವಿಧ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಭಾಗವಹಿಸಿದ್ದರು.



1 comment:

  1. plz comment your opinion
    click comment as-anonymous-publish_enter or
    click comment as-gmail ac-publish_enter

    ReplyDelete

thank you

Popular Posts

Blog Archive