Thursday, 12 October 2017

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ....ನಾನೇನೂ ನಿಮ್ಮ ಒಡನಾಡಿಯಲ್ಲ...ಅಣ್ಣನೋ ...ತಮ್ಮನೋ ...ಅಲ್ಲ...ಹೆಚ್ಚೇಕೆ ನನ್ನ ಜೀವನದಲ್ಲಿ ಒಮ್ಮೆಯೂ ತಮ್ಮನ್ನು ನಾನು ಮುಖತ ಕಂಡಿಲ್ಲ....
ಉಸ್ತಾದ್.....ಆದರೂ...ತಮ್ಮ ಮರಣವಾರ್ತೆ ತಿಳಿದಂದಿನಿಂದ ಮನವೇಕೋ ಮಿಡಿಯುತಿದೆ...ಕೇವಲ ಒಬ್ಬನದಲ್ಲ.....ನನ್ನಂತೆಯೇ ಮರಣದ. ಮೂಲಕ ತಮ್ಮಪರಿಚಯವಾದ ಹಲವರದು....
ವ್ಯಕ್ತಿಯೊಬ್ಬನ ಮಹತ್ವ ತಿಳಿಯಬೇಕೆಂದರೆ ಆತ ಮರಣಹೊಂದಬೇಕು ಎಂಬ ಮಹಾತ್ಮರುಗಳ ಮಾತು ತಮ್ಮ ಮರಣದ ಮೂಲಕ ದಿಟವಾಗುತ್ಥಿದೆ. ತನ್ನ ಮುಂದೆ ಹಾದುಹೋದ ಜನಾಝದ ಕುರಿತು ಸ್ವಹಾಬಿಗಳು ಮೆಚ್ಚುಗೆಯ ಮಾತನ್ನಾಡಿದಾಗ ಆತ ಸ್ವರ್ಗಸ್ಥನಾದ ಎಂಬ ಪ್ರವಾದಿಯವರ ಮಾತು ನೆನಪಾಗುತ್ತಿದೆ.ಯಾಕೆಂದರೆ ತಮ್ಮ ಮರಣವಾರ್ತೆ ತಿಳಿದಾಗಲೂ ಜನರ ಒಕ್ಕೊರೊಳಿನ ಮಾತು ತಮ್ಮ ಉತ್ತಮ ವ್ಯಕ್ತಿತ್ವದ ಕುರಿತಾಗಿತ್ತು.
ಕೆಲವರಿಗಷ್ಟೇ ಪರಿಚಿತವಾಗಿದ್ದ ನಿಮ್ಮ ಹೆಸರು ಮರಣದ ಮೂಲಕ ಎಲ್ಲರೂ ತಿಳಿಯುವಂತಾಯಿತು.ರಬ್ಬೇ ....ವಾರಿಸ್ ಉಸ್ತಾದರ ಪಾರತ್ರಿಕ ಜೀವನ ಪ್ರಕಾಶಯಮಗೊಳಿಸು ಎಂಬ ಪ್ರಾರ್ಥನೆ ಎಲ್ಲೆಡೆಯೂ ಅನುರಣಿಸಿತು.ಉಸ್ತಾದ್ ತಮ್ಮಂತಹ ಭಾಗ್ಯವಂತರು ಇನ್ನಾರಿದ್ದಾರೆ..?ತನ್ನ ಶಿಷ್ಯನ ಜನಾಝ ದರ್ಶನಕ್ಕಾಗಿ ಶೈಖುನಾ ಕಾಂತಪುರಂ ಉಸ್ತಾದರು ತನ್ನೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಸ್ವದೇಶಕ್ಕೆ ಮರಳಬೇಕಾದರೆ.......ತಂಙಳ್ ಉಸ್ತಾದರಿಗೆ ಇನ್ನೂ ಆ ವಾರ್ತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದಾದರೆ.....ಹೆತ್ತಬ್ಬೆಯನ್ನು ಕಳೆದುಕೊಂಡಂತೆ ರೋಧಿಸುತ್ತಿರುವ ತಮ್ಮ ಶಿಷ್ಯಂದಿರ ಕಣ್ಣೀರು ಇನ್ನೂ ಬತ್ತಿಲ್ಲವೆಂದಾದರೆ.......ಅವರೆಡೆಯಲ್ಲಿ ತಾವು ಮೂಡಿಸಿದ ಛಾಪು ಅದೆಂತಹುದೋ..
ಉಸ್ತಾದ್ ನಿಮ್ಮಂತಹ ಮರಣ ನಮಗೂ ಬರಬಾರದೇ ಎಂದು ನನ್ನಂತೆಯೇ ಹಲವರು ಚಿಂತಿಸುತ್ತಿದ್ದಾರೆ.ಹಾಗೆ ಭಾವಿಸುವುದರಲ್ಲೇನಾದರೂ ತಪ್ಪಿದೆಯೇ?ನಿಮಗೂ ತಿಳಿದಿದೆಯಲ್ಲವೇ........ಸ್ವಹಾಬಿಯೊಬ್ಬರು ಮರಣಹೊಂದಿದರು..ತನ್ನ ಶಿಷ್ಯನ ಅಂತಿಮ ಯಾತ್ರೆಯಲ್ಲಿ ಪ್ರವಾದಿವರ್ಯರ ಪ್ರಾರ್ಥನೆಯನ್ನು ಕಂಡ ಸ್ವಹಾಬಿಯೊಬ್ಬರು ಉದ್ಘರಿಸಿದ ಮಾತು...."ಆ ಮಯ್ಯಿತ್ ನಾನಾಗಿದ್ದರೇ"....
ನಾಳೆ ಪರಲೋಕದಲ್ಲಿ ಅಲ್ಲಾಹನು ನಮ್ಮನ್ನು ಒಂದುಗೂಡಿಸಲಿ ಆಮೀನ್

No comments:

Post a Comment

thank you

Popular Posts

Blog Archive