I Really proud about SEF Bengaluru.
#ಟಯರ್_ಪಂಕ್ಚರ್_ಹಾಕಿಕೊಂಡಿದ್ದ_13_ವರ್ಷದ_ಸಯ್ಯದ್_ಮುಸ್ತಾಫಾ_ಎಂಬ_ಹುಡುಗ_ಸಅದಿಯಾದಲ್ಲಿ_ಅತ್ಯಂತ_ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿದ್ದಾನೆ.
#14_ವರ್ಷದ_ಸಯ್ಯದ್_ಅಪ್ರೋಝ್_ಖಾನ್_ಗೇರೇಜಿನಲ್ಲಿ_ಕೆಲಸ_ಮಾಡುತ್ತಿದ್ದ. ಆತನಿಗೆ #ಉರ್ದು_ಮಾತನಾಡಲು_ಮಾತ್ರವೇ_ಬರುತ್ತಿತ್ತು.#ಸಅದಿಯಾದಲ್ಲಿ_ಆತ_ಉರ್ದು_ಇಂಗ್ಲೀಷ್_ಕನ್ನಡ_ಹಿಂದಿ_ಬಾಷೆಯನ್ನು_ಬರೆಯಲು_ಮತ್ತು_ಓದಲು_ಕಲಿತಿದ್ದಾನೆ.ಬಾಷೆಯಲ್ಲಿ ಅಧ್ಯಯನ ಮಾಡಬೇಕೆಂದು ಆತನ ಕನಸು.#ಬರುವಾಗ_ಹೇಗೋ_ಇದ್ದ_ವಿಧ್ಯಾರ್ಥಿಗಳು_ಇಂದು_ಹೀಗೇ_ಆಗಬೇಕು_ಎಂಬ_ಉತ್ತಮ_ನಿರ್ಧಾರದಲ್ಲಿದ್ದಾರೆ
*ರಾಜಕೀಯ ಶೋಷಣೆಗೆ ಬಲಿಯಾದ ಮುಸ್ಲಿಮ್ ಸಮುದಾಯಕ್ಕೆ ಸ-ಅದಿಯಾದಿಂದ ಹ್ಯಾಪಿ ಲೀವಿಂಗ್ ಝೋನ್ ಕೊಡುಗೆ*
ಕರ್ನಾಟಕ ರಾಜ್ಯದ ಬೀದರ್ ನಿಂದ ಚಾಮರಾಜ ನಗರದವರೆಗೆ ಇರುವ ಲಕ್ಷಾಂತರ ಸ್ಲಂಗಳಲ್ಲಿ ಅಲ್ಪಸಂಖ್ಯಾತ ಮುಸ್ಲಿಮರೇ ಹೆಚ್ಚಿನ ಸಂಖ್ಯೆಯಲ್ಲಿ ಬದುಕುತ್ತಿದ್ದಾರೆ.ಮುಸ್ಲಿಮ್ ಸಂಸಾರಗಳು ಇಲ್ಲಿ ಮೂಲಭೂತ ಸೌಲಭ್ಯ ಮತ್ತು ಪೌಷ್ಠಿಕ ಆಹಾರದ ಕೊರತೆಯಿಂದ ಯಾತನಾಮಯ ಜೀವನ ನಡೆಸುತ್ತಿದ್ದಾರೆ.ಶಿಕ್ಷಣ ಮತ್ತು ಧಾರ್ಮಿಕ ಜ್ನಾನವಿಲ್ಲದೇ ಲಕ್ಷಾಂತರ ಮಕ್ಕಳ ಭವಿಷ್ಯ ಅತಂತ್ರವೂ ಹಾಗೇ ಅಪಾಯಕಾರಿಯೂ ಆಗಿ ಬೆಳೆಯುತ್ತಿದೆ.ಕಳೆದ ಆರು ದಶಕದಿಂದ ಮುಸ್ಲಿಮರನ್ನು ರಾಜಕೀಯವಾಗಿ ಶೂಷಣೆ ಮಾಡಿದ ಪಕ್ಷಗಳು ಹಾಗೇ ಹೆಚ್ಚಿನ ಮುಸ್ಲಿಮ್ ಜನ ನಾಯಕರು ಈ ಸ್ಥಿತಿಯ ಸಮುದಾಯವನ್ನು ಇಲ್ಲಿಂದ ಮೇಲೆತ್ತುವ ಪ್ರಯತ್ನವನ್ನು ಮಾಡಿಯೇ ಇಲ್ಲ.ಬೆಂಗಳೂರಿನ ಹೆಚ್ಚಿನ ಸ್ಲಂಗಳು ಇರುವುದು ಮುಸ್ಲಿಮ್ ಶಾಸಕರು ಇರುವ ಪ್ರದೇಶದಲ್ಲಾಗಿದೆ.ಈ ಸ್ಲಂ ನ ಜನರನ್ನು ಇವರು ಬೇಟಿಯಾಗುವುದು ಚುನಾವಣೆ ಬಂದಾಗ ಮಾತ್ರ.ಇಲ್ಲಿನ ಯುವಕರನ್ನು ಇವರು ಪೋಸ್ಟರ್ ಹಚ್ಚಲು ಬಳಸುತ್ತಾರೆ.
ಬೀದರ್-ಬಿಜಾಪುರ-ಗುಲ್ಬರ್ಗಾ ಮತ್ತು ಬಾಗಲಕೋಟೆಯ ಸ್ಥಿತಿಯು ಇದಕ್ಕೆ ಹೊರತಾಗಿಲ್ಲ.ಮುಸ್ಲಿಮ್ ಸಂಸಾರಗಳ ಬದುಕು ಭಯಾನಕವಾಗಿದೆ.ಮುಸ್ಲಿಮರ ಮಕ್ಕಳು ಬೆಳೆಯುತ್ತಿರುವ ವಾತಾವರಣ ಊಹಿಸಿದಾಗ ಭಯ ಆವರಿಸುತ್ತಿದೆ.ಹೆಣ್ಣುಮಕ್ಕಳನ್ನು ಸಣ್ಣ ಪ್ರಾಯದಲ್ಲೇ ಯಾರದೋ ಮನೆ ಮುಸುರೆ ತೊಳೆಯಲು ಬಿಡುತ್ತಾರೆ.ಗಂಡುಮಕ್ಕಳು ಗಾಂಜಾ ಅಥವಾ ಇನ್ನಿತರ ಸಮಾಜ ಘಾತುಕ ಜನರ ಕೂಟದ ಸ್ನೇಹದಿಂದ ಬದುಕನ್ನೇ ನಾಶ ಮಾಡುತ್ತಿದ್ದಾರೆ.ಮನೆ ಯಜಮಾನನ ನಿರ್ಲ್ಯಕ್ಷ ಮತ್ತು ಆಲಸ್ಯವು ಇಲ್ಲಿ ವಾಸಿಸುವ ಮಹಿಳೆಯ ಪಾಲಿಗೆ ಶಾಪವಾಗಿದೆ.ಅವರು ನೋವು ನುಂಗುತ್ತಾ ದಿನ ದೂಡುತ್ತಾರೆ.ತಮ್ಮ ಮಕ್ಕಳ ಭವಿಷ್ಯದ ಕುರಿತು ಚಿಂತಿಸಿ ಕಣ್ಣೀರು ಹಾಕುತ್ತಾರೆ.ಸಾವಿರಾರು ಕಥೆಗಳು ಇಲ್ಲಿವೆ. *ರಾಜಕೀಯದ ಶೋಷಣೆ ಇವರನ್ನು ಅಭಿವೃದ್ದಿಯ ಸಮಾಜದಲ್ಲಿ ಗುರುತಿಸಲು ಅವಕಾಶವೇ ನೀಡಿಲ್ಲ.ಉತ್ತರ ಭಾರತದಲ್ಲಿ ಸಾಚಾರ್ ನಡೆಸಿದ ವರದಿಗಿಂತಲೂ ಭಯಾನಕವಾಗಿದೆ ಕರ್ನಾಟಕದ ಮುಸ್ಲಿಮರ ಸ್ಥಿತಿ.ಕರ್ನಾಟಕದ 74 ಲಕ್ಷ ಮುಸ್ಲಿಮರ ಪೈಕಿ ಮೂವತ್ತು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇದೇ ಸ್ಲಂಗಳಲ್ಲಿ ಕರಾಳ ಬದುಕನ್ನು ಕಟ್ಟುತ್ತಿದೆ.*
ಕಳೆದ ಹದಿನೈದು ವರ್ಷದ ಮೊದಲು ಸ-ಅದಿಯಾ ಎಜುಕೇಶನ್ ಪೌಂಡೇಶನ್ ನ ಮುಖ್ಯ ರುವಾರಿ ಮೌಲಾನಾ ಶಾಫಿ ಸಹದಿ ಯವರು ಕರ್ನಾಟದ ಮುಸ್ಲಿಮರ ಈ ಸ್ಥಿತಿಯನ್ನು ಬಹಳ ಹತ್ತಿರದಿಂದ ಕಂಡು ಕೊರಗಿದ್ದರು.ರಾಜಕೀಯದ ಹಲವು ನಾಯಕರಲ್ಲಿ ಈ ಕುರಿತು ಅವರು ನಿವೇದನೆ ಮಾಡಿ ಈ ಸ್ಲಂ ನ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಶ್ರಮಿಸಲು ಮನವಿ ಮಾಡುತ್ತಲೇ ಬಂದಿದ್ದರು.ಹಲವು ಮುಸ್ಲಿಮ್ ಜನನಾಯಕರ ಬಳಿ ಅಂಗಲಾಚಿದ್ದರು.ಯಾರೂ ಕೂಡ ಶಾಫಿ ಸಹದಿಯವರೊಂದಿಗೆ ಸ್ಪಂದಿಸಿಲ್ಲ.ಇದರಿಂದ ಬೇಸೆತ್ತ ಅವರು ಈ ಸ್ಥಿತಿಗೆ ತಾನೇ ಪರಿಹಾರ ಕಂಡುಕೊಳ್ಳಬೇಕು ಎಂದು 'ಸಹದಿಯ ಸ್ಲಂ ಬಾಲಕರ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು'. ನೂರಾರು ವಿಧ್ಯಾರ್ಥಿಗಳನ್ನು ದತ್ತು ಪಡೆದು ಅವರನ್ನು ಶಿಕ್ಷಣ ಮತ್ತು ಧಾರ್ಮಿಕ ಜ್ನಾನದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು. ಶೋಷಣೆ ಮತ್ತು ಓಟ್ ಬ್ಯಾಂಕ್ ಕಾಪಟ್ಯಕ್ಕೆ ಬಲಿಯಾದ ಮುಸ್ಲಿಮರ ಮಕ್ಕಳನ್ನು ಉಚಿತ ಊಟ-ವಸತಿ ನೀಡುವ ಮೂಲಕ ಅವರ ಭವಿಷ್ಯ ರೂಪಿಸುವ ಪ್ರಯತ್ನದ ಸ-ಅದಿಯಾ ಮಾಡುತ್ತಿದೆ.ಈಗಾಲೇ ನೂರಾರು ಮಕ್ಕಳನ್ನು ಆದರ್ಶ ಸಮಾಜದ ನಾಗರಿಕರನ್ನಾಗಿ ಸ-ಅದಿಯಾ ರೂಪಿಸಿದೆ. *ಟಯರ್ ಪಂಕ್ಚರ್ ಹಾಕಿಕೊಂಡಿದ್ದ 13 ವರ್ಷದ ಸಯ್ಯದ್ ಮುಸ್ತಾಫಾ ಎಂಬ ಹುಡುಗ ಸ-ಅದಿಯಾದಲ್ಲಿ ಅತ್ಯಂತ ಪ್ರತಿಭಾನ್ವಿತ ವಿಧ್ಯಾರ್ಥಿಯಾಗಿ ರೂಪುಗೊಂಡಿದ್ದಾನೆ.ಈತನಿಗೆ ರಿಸೋರ್ಸ್ ಪರ್ಸನ್ ಆಗಬೇಕೆಂದು ಕನಸಿದೆ.ತನ್ನಿಂದ ಸಮಾಜಕ್ಕೆ ದೊಡ್ಡ ಕೊಡುಗೆಗಳು ಸಿಗಬೇಕೆಂದು ಬಯಸುತ್ತಾನೆ.14 ವರ್ಷದ ಸಯ್ಯದ್ ಅಪ್ರೋಝ್ ಖಾನ್ ಗೇರೇಜ್ ನಲ್ಲಿ ಕೆಲಸ ಮಾಡುತ್ತಿದ್ದ. ಆತನಿಗೆ ಉರ್ದು ಮಾತನಾಡಲು ಮಾತ್ರವೇ ಬರುತ್ತಿತ್ತು.ಸ-ಅದಿಯಾದಲ್ಲಿ ಆತ ಉರ್ದು - ಇಂಗ್ಲೀಷ್-ಕನ್ನಡ- ಹಿಂದಿ ಬಾಷೆಯನ್ನು ಬರೆಯಲು ಮತ್ತು ಓದಲು ಕಲಿತಿದ್ದಾನೆ.ಬಾಷೆಯಲ್ಲಿ ಅಧ್ಯಯನ ಮಾಡಬೇಕೆಂದು ಆತನ ಕನಸು.ಬರುವಾಗ ಹೇಗೋ ಇದ್ದ ವಿಧ್ಯಾರ್ಥಿಗಳು ಇಂದು ಹೀಗೇ ಆಗಬೇಕು ಎಂಬ ಉತ್ತಮ ನಿರ್ಧಾರದಲ್ಲಿದ್ದಾರೆ*. ಕುರ್ ಆನ್ ನೋಡದ ವಿದ್ಯಾರ್ಥಿಗಳು ಹತ್ತು ಅಥವಾ ಅದಕ್ಕಿಂತ ಹೆಚ್ಚು ಅಧ್ಯಾಯವನ್ನು ಮನೋಹರವಾಗಿ ಪಠಿಸುತ್ತಾರೆ.ನಮಾಝ್ ಮತ್ತು ಇಸ್ಲಾಮಿಕ್ ಸಂಸ್ಕಾರಗಳು ಇವರಲ್ಲಿ ಮೇಲೈಸಿದೆ.ಮೌಲಾನ ಶಾಫಿ ಸಹದಿಯವರ ಕನಸು ಈ ಮೂಲಕ ಸಾರ್ಥಕ ಕಂಡಿದೆ. "ನನ್ನ ಪ್ರಯತ್ನದ ಬಗ್ಗೆ ಹೆಚ್ಚು ಮಾತನಾಡ ಬಾರದು ಅದು ಪರಲೋಕ ನಷ್ಟಕ್ಕೆ ಕಾರಣವಾಗಬಹುದು ಎಂದು ಅವರು ನಮ್ಮಲ್ಲಿ ಒತ್ತಾಯ ಮಾಡುವಾಗ ಆ ವ್ಯಕ್ತಿಯ ತಖ್ವಾದ ಆಳವನ್ನು ಅರಿಯಬಹುದಾಗಿದೆ".ತಿಂಗಳಿಗೆ 7 ಲಕ್ಷ ರುಪಾಯಿ ಈ ಕೇಂದ್ರದ ನಿರ್ವಹಣೆಗೆ ಅಗತ್ಯವಿದೆ.ಅಲ್ಲಾಹನ ಅನುಗ್ರಹದಿಂದ ನಡೆಯುತ್ತಿದೆ ಎಂದು ಉಸ್ತಾದರು ಹೇಳುತ್ತಾರೆ.
*ಆರಂಭದಿಂದಲೂ ಉಸ್ತಾದರಿಗೆ ಸಂಪೂರ್ಣ ಸಹಕಾರ ನೀಡಿದ್ದ ಪಿಝಾ ಗ್ರೂಫ್ ನ ಮಾಲಕರಾದ ಜನಾಬ್ ಬಿ.ಎಂ ಫಾರೂಕ್ ರವರು ಇದೀಗ ಉಸ್ತಾದರ ಬಹು ನಿರೀಕ್ಷಿತ ಕನಸನ್ನು ನನಸು ಮಾಡಲು ಪಣತೊಟ್ಟಿದ್ದಾರೆ.ಇದಕ್ಕಾಗಿ ಸುಮಾರು ಐದು ಸಾವಿರ ವಿಧ್ಯಾರ್ಥಿಗಳನ್ನು ಸಂಸ್ಕರಿಸುವ ಮತ್ತು ಸಬಲೀಕರಣಗೊಳಿಸುವ ಹ್ಯಾಪಿ ಲೀವಿಂಗ್ ಝೋನ್ ನಿರ್ಮಿಸುವ ಮಹತ್ವದ ಪ್ರಯತ್ನಕ್ಕೆ ಚಾಲನೆ ನೀಡಲಾಗಿದೆ.ಈಗಾಗಲೇ ಬನ್ನೇರುಘಟ್ಟೆಯಲ್ಲಿ ಐದು ಎಕರೆ ಜಮೀನು ಈ ಯೊಜನೆಗಾಗಿ ಖರೀದಿಸಲಾಗಿದ್ದು ಜನಾಬ್ ಬಿ.ಎಂ ಫಾರೂಕ್ ರವರ ತಂದೆಯವರಾದ ದಿವಂಗತ ಬಿ.ಎಂ ಅಹ್ಮದ್ ಭಾವಾರವರ ಸ್ಮರಣಾರ್ಥ ಭೃಹತ್ತ್ ಶೈಕ್ಷಣಿಕ-ದಾರ್ಮಿಕ ಮತ್ತು ಸಾಮಾಜಿಕ ಕಲ್ಯಾಣ ಸಮುಚ್ಚಯ ಇಲ್ಲಿ ತಲೆ ಎತ್ತಲಿದೆ.*
ಬೆಂಗಳೂರಿನ ಸುತ್ತಮತ್ತಲು ಮುಸ್ಲಿಮ್ ಶಾಸಕರು ಇರುವ ಸ್ಲಂಗಳಲ್ಲಿ ಹೆಚ್ಚಿನ ಮುಸ್ಲಿಮ್ ಸಂಸಾರಗಳು ಅತ್ಯಂತ ದಯನೀಯ ಅವಸ್ಥೆಯಲ್ಲಿ ಜೀವಿಸುತ್ತಿದ್ದಾರೆ.ಇಲ್ಲಿನ ಹೆಣ್ಣು ಮಕ್ಕಳ ಭವಿಷ್ಯವನ್ನು ಉಜ್ವಳಗೊಳಿಸಲು ಸ-ಅದಿಯಾ ಎಜುಕೇಶನ್ ಪೌಂಡೇಶನ್ ಸ್ಲಂ ಬಾಲಕಿಯರ ಕಲ್ಯಾಣ ಕೇಂದ್ರ ಮತ್ತು ಇಸ್ಲಾಮಿಕ ಅಧ್ಯಯನ ಕೇಂದ್ರವನ್ನು ಜನಾಬ್ ಬಿ.ಎಂ ಫಾರೂಕ್ ರವರ ಸಂಪೂರ್ಣ ನೆರವಿನಿಂದ ನಿರ್ಮಿಸಿದ್ಧು ಇದರ ಉದ್ಘಾಟನೆ ನವೆಂಬರ್ 5 ರಂದು ನಡೆಯಲಿದೆ. *ಬಿ.ಎಂ ಫಾರೂಕ್ ರವರು ತನ್ನ ಮಾತೃಶ್ರೀ ದಿವಂಗತ ಆಯಿಶಮ್ಮ ಇವರ ಸವಿ ನೆನಪಿಗಾಗಿ ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸ್ಲಂ ಬಾಲಕಿಯರ ಕಲ್ಯಾಣ ಕೇಂದ್ರದಲ್ಲಿ ಮೊದಲ ಹಂತವಾಗಿ ನೂರು ಹೆಣ್ಣುಮಕ್ಕಳನ್ನು ದತ್ತುಪಡೆದು ಅವರನ್ನು ಸಮಾಜದ ಆದರ್ಶ ಮಹಿಳೆಯರಾಗಿ ರೂಪಿಸುವ ಕನಸು ಸ-ಅದಿಯಾ ಸಂಸ್ಥೆಗಿದೆ.ಇದರ ಉದ್ಘಾಟನೆಯನ್ನು ಮಾಜಿ ಮುಖ್ಯಂಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ಮಾಡಲಿದ್ದು ಬಹುಮಾನ್ಯರಾದ ಆಟಕೋಯ ಕುಂಬೋಲ್ ತಂಗಲ್ ದುವಾ ನೆರವೇರಿಸಲಿದ್ದಾರೆ.ಈ ಮಹತ್ವದ ಕಾರ್ಯಕ್ರಮದಲ್ಲಿ ಬನ್ನೇರು ಗಟ್ಟೆ ರಾಷ್ಟ್ರೀಯ ಉಧ್ಯಾನವನದ ಸಮೀಪದ ಸುಮಾರು ಐದು ಎಕರೆ ಜಮೀನಿನಲ್ಲಿ ನಿರ್ಮಿಸಲು ಯೋಜನೆ ಹಾಕಿ ಕೊಂಡಿರುವ ಹದಿನೈದು ಕೋಟಿ ರುಪಾಯಿ ವೆಚ್ಚದ ಹ್ಯಾಪಿ ಲಿವಿಂಗ್ ಝೋನ್ ಅನ್ನು ಮಾಜಿ ಪ್ರದಾನಿ ಎಚ್.ಡಿ ದೇವೇ ಗೌಡರವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.*
ಸ್ಲಂ ನ ನರಕ ಯಾತನಾ ಬದುಕಿನಿಂದ ಮುಸ್ಲಿಮ್ ಮಕ್ಕಳನ್ನು ಹ್ಯಾಪಿ ಲೀವಿಂಗ್ ಝೋನ್ ಮೂಲಕ ಅಭಿವೃದ್ದಿಯ ಸಮಾಜಕ್ಕೆ ಸಮರ್ಪಿಸುವ ಮೌಲಾನ ಶಾಪಿ ಸಹದಿಯವರ ಪ್ರಯತ್ನ ಮತ್ತು ಪಿಝಾ ಗ್ರೂಪ್ ಇದರ ಮಾಲಕರಾದ ಬಿ.ಎಂ ಫಾರೂಕ್ ರವರ ಸಹಕಾರ ಈ ಸಮುದಾಯದ ಉಲೆಮಾ ಮತ್ತು ಉಮರಾಗಳ ಇಚ್ಚಾಶಕ್ತಿಗೆ ಉದಾಹರಣೆಯಾಗಿದೆ.ಇಂತಹ ಪ್ರಯತ್ನಗಳು ರಾಜಕೀಯ ಮತ್ತು ಸ್ವಾರ್ಥ ರಹಿತವಾಗಿ ಪ್ರಾಮಾಣಿಕ ಕೊಡುಗೆಗಳಾಗಿ ಸಮಾಜಕ್ಕೆ ಸಿಕ್ಕಿದಾಗ ಕಲ್ಯಾಣ ಕಾರ್ಯದ ಜೊತೆ ದೇವನ ಸಹಾಯವೂ ಇರುತ್ತದೆ.ಮುಸ್ಲಿಮರನ್ನು ಶೋಷಣೆ ಮಾಡಿದ ಮತ್ತು ಐನೂರು ಇಲ್ಲವೇ ಮುನ್ನೂರು ರುಪಾಯಿಯ ಮತ ಬ್ಯಾಂಕ್ ಮಾಡಿದ ಜನರಿಗೆ ಇದೊಂದು ಎಚ್ಚರಿಕೆಯೂ ಆಗಿದೆ.ಮುಸ್ಲಿಮ್ ಐಕ್ಯತೆಯು ಇಂತಹ ಕಾರ್ಯದಲ್ಲಿ ಹೆಚ್ಚು ಪ್ರಭಾವ ಬೀರಬೇಕು.ರಾಷ್ಟ್ರೀಯ ಚಿಂತನೆ ಮತ್ತು ಸಂವಿಧಾನಿಕ ಬದ್ದತೆ ನಮ್ಮಲ್ಲಿ ಜಾಗೃತವಾಗಬೇಕು.ಒಂದು ಸಮುದಾಯದ ಪ್ರಗತಿ ಇಡೀ ರಾಷ್ಟ್ರದ ಪ್ರಗತಿಯಾಗಿದೆ.ಅದಕ್ಕಾಗಿ ಎಲ್ಲರೂ ಸ-ಅದಿಯಾ ಎಜುಕೇಶನ್ ಪೌಂಡೇಶನ್ ಇದರ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಲ್ಲುವುದು ಅನಿವಾರ್ಯತೆಯಾಗಿದೆ...
*Haneef Puttur*
*ಸುನ್ನೀಟುಡೇ*
*Haneef Puttur*
*ಸುನ್ನೀಟುಡೇ*
No comments:
Post a Comment
thank you