
ರಾಜ್ಯ ಎಸ್ಸೆಸ್ಸೆಫ್ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಅತ್ಯಂತ ದೊಡ್ಡ ಕಲಾ ಸಾಹಿತ್ಯ ಸ್ಪರ್ಧೆ ಪ್ರತಿಭೋತ್ಸವವು ವಿಧ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಅಪೂರ್ವ ಅವಕಾಶವನ್ನು ನೀಡುತ್ತಿದ್ದು, ಈ ಪೈಕಿ ನೌಶಾದ್ಎಂಬ ಸುಭಾಷ್'ನಗರದ ಬಾಲಕನ ಸಾಧನೆ ಪಾಣೆಮಂಗಳೂರ್ ಸೆಕ್ಟರ್ SSFಗೆ ಬಹಳ ಸಂತಸವನ್ನು ತಂದಿದೆ. ಪ್ರತಿಭೋತ್ಸವ-2018 ರ ಸೆಕ್ಟರ್ ಮಟ್ಟದ ಸ್ಪರ್ಧೆಯಲ್ಲಿ ಪಾಣೆಮಂಗಳೂರ್ ಸೆಕ್ಟರ್ ಮೂಲಕ ಸ್ಪರ್ಧಿಸಿ ವಯ್ಯಕ್ತಿಕ ಚಾಂಪಿಯನ್ ಪಡೆದ ಇವನು ನಂತರ ಮುಂದಿನ ಹಂತವಾದ ಡಿವಿಜನ್ ಮಟ್ಟದಲ್ಲೂ ವಯ್ಯಕ್ತಿಕ ಚಾಂಪಿಯನ್ ಪಡೆದು ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದನು. ಇದೀಗ ದ.ಕ ಜಿಲ್ಲಾ ವ್ಯಾಪ್ತಿಯ ಹತ್ತು ಡಿವಿಜನ್'ಗಳ ಪ್ರಬಲ ಪ್ರತಿಸ್ಪರ್ಧಿಗಳ ನಡುವೆಯೂ ಬಂಟ್ವಾಳ ಡಿವಿಜನ್ ಅನ್ನು ಪ್ರತಿನಿಧಿಸಿ ಜಿಲ್ಲಾ ಮಟ್ಟದಲ್ಲೂ ವಯ್ಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದು ಸಾಧನೆ ತೋರಿದ್ದಾನೆ. ಮುಂದೆ ಕೊಡಗಿನಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ 22 ಜಿಲ್ಲೆಗಳ ಅತ್ಯಂತ ಪ್ರಬಲ ಪ್ರತಿಸ್ಪರ್ಧಿಗಳ ನಡುವೆ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಲಿದ್ದಾನೆ. ಇವನ ಸಾಧನೆಗೆ SSF ಪಾಣೆಮಂಗಳೂರ್ ಸೆಕ್ಟರ್ ಸಮಿತಿಯು ತುಂಬು ಹೃದಯದ ಅಭಿನಂದನೆಗಳನ್ನು ಸಮರ್ಪಿಸುತ್ತಾ ಮುಂದಿನ ಹಂತಕ್ಕೆ ಶುಭಾಶಂಸನೆಗಳನ್ನು ಕೋರುತ್ತಿದೆ.
No comments:
Post a Comment
thank you