ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ (ಎಸ್ಸೆಸ್ಸೆಫ್) ಬಂಟ್ವಾಳ ಸೆಕ್ಟರ್ ವತಿಯಿಂದ ರಾಜ್ಯ ಸಮಿತಿಯ ಸುತ್ತೋಲೆಯಂತೆ "CONTRIVE CAMP" ಇತ್ತೀಚೆಗೆ ಮಾವಿನಕಟ್ಟೆಯಲ್ಲಿ ನಡೆಯಿತು. ಸೆಕ್ಟರ್ ಅಧ್ಯಕ್ಷರಾದ ಯೂನುಸ್ ಅಗ್ರಹಾರ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಾವಿನಕಟ್ಟೆ ಜಮಾಅತ್ ಖತೀಬರಾದ ಜಬ್ಬಾರ್ ಸಅದಿ ಉಸ್ತಾದರು ದುವಾಗೈದು ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹಬೀಬ್ ಪೆರಾಳ ಸ್ವಾಗತಿಸಿದರು. ಡಿವಿಷನ್ ಉಪಾಧ್ಯಕ್ಷರಾದ ಸಿದ್ದೀಕ್ ಸಅದಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸಿ, ತರಗತಿ ನಡೆಸಿದರು.
ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ಅಧ್ಯಕ್ಷರಾದ ರಶೀದ್ ವಗ್ಗ ಇವರು ಸಂಘಟನೆಯ ಮಹತ್ವ ತಿಳಿಸಿ ಚರ್ಚೆಯ ನೇತೃತ್ವ ವಹಿಸಿದರು.
ಕಾರ್ಯಕ್ರಮದಲ್ಲಿ ಬಂಟ್ವಾಳ ಸೆಕ್ಟರ್ ಉಸ್ತುವಾರಿ ಮನ್ಸೂರ್ ವಗ್ಗ, ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ, ಮಾಜಿ ಸೆಕ್ಟರ್ ಅಧ್ಯಕ್ಷರಾದ ಜಬ್ಬಾರ್ ಸಅದಿ,ಇಸ್ಮಾಯಿಲ್ ಸಖಾಫಿ,ಅಶ್ರಫ್ ಸಖಾಫಿ ಉಪಸ್ಥಿತರಿದ್ದರು.
✍🏻ಹಾರಿಸ್ ಪೆರಿಯಪಾದೆ
No comments:
Post a Comment
thank you