Tuesday, 19 September 2017

ಪಾಣೆಮಂಗಳೂರು ಮತ್ತು ಬಂಟ್ವಾಳ ಸೆಕ್ಟರ್ ನ ವಿವಿದೆಡೆ ನಡೆದ ಧ್ವಜದಿನ

*S*ಸಹಿದರು ಹಲವನ್ನು
*S*ಸ್ನೇಹದಿಂದ ಎದುರಿಸಿ ಎಲ್ಲವನ್ನು
*F*ಫಲವಾಗಿ *29* ನೇ ಆಚರಣೆ ಯನ್ನು
ಆಚರಿಸುವುದರ
ಮೂಲಕ ಸಂತಸ
ತಂದಿದೆ...
🌹🌹🌹🌹🌹🌹🌹🌹🌹🌹
ನನ್ನ ಆತ್ಮೀಯ
ಸುನ್ನೀ ಕಾರ್ಯ
ಕರ್ತರಿಗೆ ಹಾಗೂ
ಆತ್ಮೀಯ ಸುನ್ನೀ
ಗೆಳೆಯರಿಗೆ ಶುಭ
ಸಂಧರ್ಭ
🌹🌹🌹🌹🌹🌹🌹🌹🌹🌹
ಶುಭ ವರುಷದ ಶುಭಾಶಯ...
🌹🌹🌹🌹🌹🌹🌹🌹🌹🌹
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಸೆಪ್ಟೆಂಬರ್ 19 S S F ಧ್ವಜ ದಿನ* 
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
ಇದರ ಅಂಗವಾಗಿ  ಎಸ್ ಎಸ್ ಎಫ್  *ಕೊಳಕೆ ಯುನಿಟ್*





2.GOLIPADPU UNIT





3.ALADKA UNIT


4.PARIYAPADE UNIT BANTWAL SECTOR



5.TUMBEY UNIT
*"ಬೆಂಕಿಯಲ್ಲರಳಿದ ಬಾಡದ ಪುಷ್ಪವಿದು SSF".*

ಕರ್ನಾಟಕ ರಾಜ್ಯ SSF 28ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ.ಈ ಚೈತ್ರ ಯಾತ್ರೆಯಲ್ಲಿ ಸಂಘಟನೆಗಾಗಿ ದುಡಿದ ಸರ್ವರನ್ನು ಸ್ಮರಿಸುತ್ತಾ....

*ಜಾಗತಿಕ ಮಟ್ಟದ ದಿಗ್ಗಜ ಉಲಮಾಗಳ ನೇತ್ರತ್ವದಲ್ಲಿ ಕೇರಳದ ಮಣ್ಣಿನಲ್ಲಿ ಜನ್ಮತಾಳಿ 48 ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಯಿಸುತ್ತಿರುವ ದೇಶದ ಅತೀ ದೊಡ್ಡ ಸುನ್ನೀ ಸಂಘಟನೇ SSF ಕರ್ನಾಟಕ ರಾಜ್ಯದ ಮಣ್ಣಿನಲ್ಲಿ 28ನೇ ವರ್ಷವನ್ನು ಪೂರೈಸುತ್ತಿರುವ SSF ಧ್ವಜ ದಿನಾಚರಣೆಯ ಅಂಗವಾಗಿ ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳು🌹*

*✍ಇರ್ಫಾಝ್ ತುಂಬೆ*



Technical support by rameez melkar

Monday, 18 September 2017

ಕರುನಾಡ ಮಣ್ಣಿನಲ್ಲಿ ಎಸ್ಸೆಸ್ಸಫ್ ಗಿಂದು ಇಪ್ಪತ್ತೊಂಭತ್ತರ ಜನುಮದಿನದ ಹರುಷ. ಕಳೆದು ಹೋಯಿತು ಸಾರ್ಥಕತೆಯ ಇಪ್ಪತ್ತೆಂಟು ವರುಷ..!!


ಅರ್ಥಶೂನ್ಯವಾದ ಜೀವನಕ್ಕೆ ಅರ್ಥವತ್ತಾದ ಮೌಲ್ಯಗಳನ್ನು ಕಲಿಸಿಕೊಟ್ಟು ಬೆಳೆಸಿದ ಸಂಘಟನೆ. ಅಧರ್ಮದ ಹಾದಿ ಹಿಡಿದ ಯೌವನಕ್ಕೆ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!
ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಸೇವೆ,ಶೈಕ್ಷಣಿಕ ಕ್ರಾಂತಿಯ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಜನ್ಮ ತಾಳಿದ ಎಸ್ಸೆಸ್ಸಫ್, ಕರ್ನಾಟಕದ ಮಣ್ಣಿಗೆ ಕಾಲಿರಿಸಿ ಇಪ್ಪತ್ತೆಂಟು ಸಂವತ್ಸರಗಳು ಕಳೆದು ಹೋದವು.
ಆರೋಪ,ಅಪಪ್ರಚಾರ,ಅಪಹಾಸ್ಯಗಳನ್ನೆಲ್ಲಾ ನಗುಮೊಗದಿಂದಲೇ ಸ್ವೀಕರಿಸಿ ಮುನ್ನೇರಿದ ಸಂಘಟನೆ ಕನ್ನಡ ನಾಡಿನಲ್ಲಿ ಸೃಷ್ಟಿಸಿದ ಕ್ರಾಂತಿಗಳು ಮಾತ್ರ ಅತ್ಯಧ್ಭುತವಾದದ್ದು..!!
"ಕೆಡುಕುಗಳಿಂದ ಒಳಿತಿನೆಡೆಗೆ" ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್ ಯುವ ಸಮೂಹವು ಗಾಂಜಾ,ಮಾದಕ ವಸ್ತುಗಳ ದಾಸರಾಗುತ್ತಿರುವ ಸಂದರ್ಭಗಳೆಲ್ಲಾ ಅವರನ್ನು ಅದರಿಂದ ದೂರವಿರಿಸುವಂತೆ ಮಾಡಿ, ನಿರಂತರವಾಗಿ ಅದರ ಕುರಿತು ಜಾಗೃತಿ ಆಂದೋಲನ ಒಳಿತೆನೆಡಗೆ ಅವರನ್ನು ಕೊಂಡೊಯ್ಯವಲ್ಲಿ ಸಫಲವಾಗಿದೆ.
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.
ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.
ಕಾಲೇಜ್ ಕ್ಯಾಂಪಸ್ ಗಳು ಅನೈತಿಕೆಯ ತಾಣಗಳಾಗುತ್ತಿರುವಂತಹ ಸಂದರ್ಭದಲ್ಲೂ, ಯತೀಂ ಮಕ್ಕಳ ಶೈಕ್ಷಣಿಕ ಶಿಕ್ಷಣಕ್ಕೆ ಅವರ ಬಡತನಗಳು ಕಾರಣಗಳಾಗುತ್ತಿರುವಾಗಲೂ ಶೈಕ್ಷಣಿಕ ಕ್ರಾಂತಿಯ ಮೂಲಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತು, ಸಮುದಾಯದ ನೊಂದ ಮನಸ್ಸುಗಳಿಗೆ ಆಸರೆಯಾದವು.
ಧಾರ್ಮಿಕ ಪ್ರಜ್ಞೆಯ ಅರಿವನ್ನು ಹೊಂದಿರದ ಉತ್ತರ ಕನ್ನಡದ ಹಲವು ಭಾಗಗಳಿಗೆ ಇಹ್ಸಾನ್ ತಂಡವನ್ನು ಕಳುಹಿಸಿ, ಅಲ್ಲಿಯ ಜನತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ, ಹಿಂದುಳಿದ ಸಮುದಾಯದ ಜನರಿಗೆ ಶೈಕ್ಷಣಿಕ ಶಿಕ್ಷಣವನ್ನು ಕೊಡಿಸುವಂತಹ ವ್ಯವಸ್ಥೆಯನ್ನು ಮಾಡಿ ಕೊಡುವಲ್ಲಿ ಸಂಘಟನೆ ಯಶಸ್ವಿಯಾಗಿದೆ.
ಸಮುದಾಯದ ಸಹೋದರಿಯರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿರುವಂತಹ ಸಂದರ್ಭದಲ್ಲೇ ಕಾಲೇಜ್ ಕ್ಯಾಂಪಸ್ ಗಳಲ್ಲಿ ಅನಗತ್ಯ ವಿವಾದಗಳು ತಲೆದೋರುವಾಗ, ಸಮುದಾಯದ ಸಹೋದರಿಯರ ಮುಂದಿನ ಶೈಕ್ಷಣಿಕ ಹಾದಿಗೆ ತೊಡಕಾಗಬಾರದು ಅನ್ನುವ ದೂರದೃಷ್ಟಿಯಿಂದ ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯದ ಸಹೋದರಿಯರ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದವು.
ಕಳೆದ ಇಪ್ಪತ್ತೆಂಟು ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ. ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ಇಪ್ಪತ್ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಎಸ್ಸೆಸ್ಸಫ್ ನ *ಧ್ವಜ ದಿನದ* ಶುಭಾಶಯಗಳನ್ನು ಸಲ್ಲಿಸುತ್ತಾ,
ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ

Friday, 15 September 2017

*ಎಸ್ಸೆಸ್ಸೆಫ್ ಪೆರಿಯಪಾದೆ ಶಾಖಾ ವತಿಯಿಂದ ಮಾಸಿಕ ತರಗತಿ ಹಾಗೂ ಝಿಕ್ರ್ ಮಜ್ಲಿಸ್*

ಬಂಟ್ವಾಳ: ಎಸ್ಎಸ್ಎಫ್ ಪೆರಿಯಪಾದೆ ಶಾಖೆಯ ಮಾಸಿಕ ತರಗತಿ ಹಾಗೂ ಮೆಹಫಿಲೇ ತಯಿಬ ಝಿಕ್ರ್ ಮಜ್ಲಿಸ್ ಇತ್ತೀಚೆಗೆ ಆದಂ ಗಣಪಳಿಕೆಯವರ ಮನೆಯಲ್ಲಿ ನಡೆಯಿತು.
ಕೆ.ಸಿ.ಎಫ್‌ ಕಾರ್ಯಕರ್ತರಾದ ಕಬೀರ್ ಝುಹುರಿ ಉಸ್ತಾದರು ದುವಾಗೈದು, ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
ಎಸ್‌ ವೈ ಎಸ್‌ ಬಂಟ್ವಾಳ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಗ್ರಹಾರ ತರಗತಿ ಮಂಡಿಸಿದರು. ಎಸ್ ವೈ ಎಸ್‌ ಇದರ ಅಗತ್ಯತೆ ಹಾಗೂ ಅದಕ್ಕೆ ನೇತೃತ್ವ ನೀಡುವ ಉಲಮಾಗಳ ಬಗ್ಗೆ ವಿವರಿಸಿ ಅತೀ ಶೀಘ್ರದಲ್ಲಿ ಎಸ್‌ ವೈ ಎಸ್‌ ಪೆರಿಯಪಾದೆ ಬ್ರಾಂಚ್ ರಚಿಸಲು ಕರೆ ನೀಡಿದರು. ಎಸ್‌ ವೈ ಎಸ್‌ ನಲ್ಲಿ ಕಾರ್ಯಾಚರಿಸುವುದು ಮರಣಾನಂತರದ ಲಾಭಕ್ಕಾಗಿ ಮಾತ್ರವಾಗಿದೆ ಎಂದು ಸಾಂಧರ್ಬಿಕವಾಗಿ ಹೇಳಿದರು. ನಂತರ ರಫೀಕ್ ಝುಹುರಿ ಉಸ್ತಾದರು ಮಾತನಾಡಿ ಕೆಸಿಎಫ್ ಸಂಘಟನೆಯ ಬಗ್ಗೆ ವಿವರಿಸಿ ಇತ್ತೀಚೆಗೆ ಹಜ್ಜ್  ವಾಲೆಂಟರ್ ಆಗಿ ಸೇವೆ ಸಲ್ಲಿಸಿದ ಕೆಸಿಎಫ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.
ಕೊನೆಯಲ್ಲಿ ಪೊಸೋಟು ತಂಙಳ್ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಇರ್ಷಾದ್ ಸ್ವಾಬಿರ್ ಮತ್ತು ನಮ್ಮೆಲ್ಲರ  ಕುಟುಂಬಸ್ಥರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಲಾಯಿತು.

*✍🏻ಹಾರಿಸ್ ಪೆರಿಯಪಾದೆ*

Sunday, 3 September 2017

ಕತ್ತಾರ್ ಕೆ ಸಿ ಎಫ್ ಆಶ್ರಯದಲ್ಲಿ ಈದ್ ವಿನೋದ ಯಾತ್ರೆ ಮತ್ತು ಕ್ರೀಡಾ ಕೂಟ...........

ಬಕ್ರೀದ್ ಹಬ್ಬದ ಪ್ರಯುಕ್ತ K.C.F. ಮತ್ತುI.C.F, R.S.C.ಇದರ ಸಂಯುಕ್ತ ಆಶ್ರಯದಲ್ಲಿ ಈದ್ ವಿನೋದ ಯಾತ್ರೆ ಮತ್ತು ಕ್ರೀಡಾ ಕೂಟವನ್ನು ಅಲ್ ಕೋರ್ ಸ್ಟೇಡಿಯಂನಲ್ಲಿ ಎರ್ಪಡಿಸಲಾಗಿತು....

ದಿನಾಂಕ 2/9/2೦17 ರಂದು ಶನಿವಾರ ಬೆಳಿಗ್ಗೆ 8 ಗಂಟೆಗೆ ಮರ್ಕಿಯಾ ಕಂಪೌಂಡಿನ ಮಸೀದಿಯಲ್ಲಿ ಮರ್ಹೊಂ ಪೊಸೋಟ್ ತಂಗಳ್ ರವರ ಅನುಸ್ಮರಣೆ ಮತ್ತು ದುಃಆ ಕಾರ್ಯಕ್ರಮದ ಬಳಿಕ ಕೆ ಸಿ ಫ್ ಕಾರ್ಯಕರ್ತರು ಪ್ರತೇಕ ವಾಹನದಲ್ಲಿ ಅಲ್ ಕೋರಿಗೆ ವಿನೋದ ಯಾತ್ರೆ ತೆರೆಳಿದೆವು ಅದೇ ರೀತಿ ದೊಹಾ ಖತ್ತರಿನ ವಿವಿಧ ಭಾಗಗಳಿಂದ ಪ್ರಸ್ತುತ ಸಂಯುಕ್ತ ಸಮಿತಿಯ ಸದಸ್ಯರುಗಳು ಅಲ್ ಕೋರ್ ಕ್ರೀಡಾಂಗಣಕ್ಕೆ ಆಗಮಿಸಿದರು. ಅಲ್ ಕೋರ್ ಸಮಿತಿಯು ಆಗಮಿಸಿದ ಎಲ್ಲಾ ಅತಿಥಿಗಳಿಗೆ ಭವ್ಯವಾದ ಸ್ವೀಕರಣವನ್ನು ನೀಡಲಾಯಿತು ನಂತರ ಪರವಣ್ಣ ಅಬ್ದುರಝಕ್ ಸಖಾಫಿ ಉಸ್ತಾದಾರ ದುಃಆ ದೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಮನ ಶಾಸ್ತ್ರ ತಜ್ಞರು ವಾಗ್ಮಿಯು ಆದ ಡಾ"ಮುಹಸಿನ್ ರವರು ಕುಟುಂಬ ಮತ್ತು ಪ್ರವಾಸಿ ಎಂಬ ವಿಷಯದಲ್ಲಿ ಚರ್ಚೆಯನ್ನು ನಡೆಸಿದರು. ನಂತರ ವಿವಿಧ ವಿಷಯಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.








ಲುಹ್ರ್ ನಮಾಜಿನ ಬಳಿಕ ನಡೆದ ಕಬಡಿ ಮತ್ತು ಹಗ್ಗಜಗ್ಗಾಟ ಪಂದ್ಯಾಟವು ವಿವಿಧ ತಂಡಗಳ ನಡುವೆ ಆವೇಶ ತುಂಬಿದ ಪೈಪೋಟಿ ನಡೆಯಿತು. ಪ್ರೇಕ್ಷಕರ ಮನಸ್ಸಿಗೆ ಅದ್ಬುತವಾದ ಪ್ರದರ್ಶನ ನೀಡಿ ಮನರಂಜಿಸಿ ಪ್ರಥಮವಾಗಿ ಕೆ ಸಿ ಫ್ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾದರು....











    18 ಅಂಕಗಳನ್ನು ಪಡೆದು ಈದ್ ಟ್ರೋಫಿ K C F ಗೆ ಸ್ವಂತ ಮಾಡಿಕೂಂಡಿತ್ತು

ಕಬಡಿ
 K C F ಪ್ರಥಮ
ಅಲ್ ಕೋರ್ ದ್ವಿತೀಯ

ಹಗ್ಗ ಜಗ್ಗಾಟ
K C F ದ್ವಿತೀಯ
ಅಲ್ ಕೋರ್ ಪ್ರಥಮ

ಚಿತ್ರಕಲೆ
ಅಝೀಝಿಯ. ಪ್ರಥಮ
K C F ದ್ವಿತೀಯ💜❤💛

Popular Posts

Popular Posts

Blog Archive