Tuesday, 19 September 2017

SSF ಬಂಟ್ವಾಳ ಡಿವಿಜನ್ ವತಿಯಿಂದ ಸಂಭ್ರಮದ 'ಧ್ವಜ ದಿನ'.

ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ರಂಗದಲ್ಲಿ ಸರಿಸಾಟಿಯಿಲ್ಲದ ಸೇವೆಯನ್ನು ಸಲ್ಲಿಸುತ್ತಾ 28 ವರ್ಷಗಳನ್ನು ದಾಟಿದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ 28ನೇ ಧ್ವಜ ದಿನವನ್ನು ಬಿ.ಸಿ ರೋಡ್'ನಲ್ಲಿರುವ SSF ಜಿಲ್ಲಾ ಕಛೇರಿಯ ಆವರಣದಲ್ಲಿ ಬಂಟ್ವಾಳ ಡಿವಿಜನ್ ವತಿಯಿಂದ ಆಚರಿಸಲಾಯಿತು.









                                                                                                                                                                                                                                                                                                                                                       










 ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಮೆದು ಮದನಿ ಉದ್ಘಾಟಿಸಿದರು, ಡಿವಿಜನ್ ನಾಯಕರಾದ ಅಕ್ಬರಲಿ ಮದನಿ ಆಲಂಪಾಡಿ, ಅಲೀ ಮದನಿ ಸೆರ್ಕಳ, ರಫೀಕ್ ಝುಹ್ರಿ ಮಂಚಿ ಶುಭ ಹಾರೈಸಿದರು. ಡಿವಿಜನ್ ಅಧ್ಯಕ್ಷರಾದ ರಶೀದ್ ಹಾಜಿ ವಗ್ಗ ಅಧ್ಯಕ್ಷತೆ ವಹಿಸಿ ಸದಸ್ಯರ ಜವಾಬ್ದಾರಿಯನ್ನು ನೆನಪಿಸುತ್ತಾ October 1 ಮತ್ತು 2 ತಾರೀಖುಗಳಲ್ಲಿ  ಜಿಲ್ಲಾ SSF ನಡೆಸುವ 4G Camp ಯಶಸ್ವಿ ಗೊಳಿಸಲು ಕರೆ ನೀಡಿದರು.








October 8 ರಂದು ಬಂಟ್ವಾಳ ಡಿವಿಜನ್ ವತಿಯಿಂದ ಬಿ.ಸಿ ರೋಡ್'ನಲ್ಲಿ ನಡೆಸಲು ಉದ್ದೇಶಿಸಿರುವ ಬೃಹತ್ ರಕ್ತದಾನ ಶಿಬಿರದ ಫಾರ್ಮನ್ನು ಇದೇ ಸಂಧರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.     ದ.ಕ ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷರಾದ ಇಬ್ರಾಹಿಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.

ಸಂಘಟೆನೆಗಾಗಿ ದುಡಿದು ನಮ್ಮಿಂದ ಅಗಳಿದ ಹಲವಾರು ಕಾರ್ಯಕರ್ತರು ಮತ್ತು ನಾಯಕರನ್ನು ಸ್ಮರಿಸುತ್ತಾ ಅವರಿಗೆ ತಹ್ಲೀಲ್ ಸಮರ್ಪಣೆ ಕೂಡಾ ನಡೆಯಿತು. ಸಂಘಟನೆಯ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳಿಗಾಗಿ ವಿಶೇಷ ಪ್ರಾರ್ಥನೆ ನಡೆಸಲಾಯಿತು.

ಡಿವಿಜನ್ ಕಾರ್ಯದರ್ಶಿ ಆಬಿದ್ ನಯೀಮಿ ಸ್ವಾಗತಿಸಿ, ಇರ್ಶಾದ್ ಗೂಡಿನಬಳಿ ವಂದಿಸಿದರು.






ಪಾಣೆಮಂಗಳೂರು ಮತ್ತು ಬಂಟ್ವಾಳ ಸೆಕ್ಟರ್ ನ ವಿವಿದೆಡೆ ನಡೆದ ಧ್ವಜದಿನ

*S*ಸಹಿದರು ಹಲವನ್ನು
*S*ಸ್ನೇಹದಿಂದ ಎದುರಿಸಿ ಎಲ್ಲವನ್ನು
*F*ಫಲವಾಗಿ *29* ನೇ ಆಚರಣೆ ಯನ್ನು
ಆಚರಿಸುವುದರ
ಮೂಲಕ ಸಂತಸ
ತಂದಿದೆ...
🌹🌹🌹🌹🌹🌹🌹🌹🌹🌹
ನನ್ನ ಆತ್ಮೀಯ
ಸುನ್ನೀ ಕಾರ್ಯ
ಕರ್ತರಿಗೆ ಹಾಗೂ
ಆತ್ಮೀಯ ಸುನ್ನೀ
ಗೆಳೆಯರಿಗೆ ಶುಭ
ಸಂಧರ್ಭ
🌹🌹🌹🌹🌹🌹🌹🌹🌹🌹
ಶುಭ ವರುಷದ ಶುಭಾಶಯ...
🌹🌹🌹🌹🌹🌹🌹🌹🌹🌹
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
*ಸೆಪ್ಟೆಂಬರ್ 19 S S F ಧ್ವಜ ದಿನ* 
🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱🇸🇱
ಇದರ ಅಂಗವಾಗಿ  ಎಸ್ ಎಸ್ ಎಫ್  *ಕೊಳಕೆ ಯುನಿಟ್*





2.GOLIPADPU UNIT





3.ALADKA UNIT


4.PARIYAPADE UNIT BANTWAL SECTOR



5.TUMBEY UNIT
*"ಬೆಂಕಿಯಲ್ಲರಳಿದ ಬಾಡದ ಪುಷ್ಪವಿದು SSF".*

ಕರ್ನಾಟಕ ರಾಜ್ಯ SSF 28ನೇ ವರ್ಷಾಚರಣೆಯ ಹೊಸ್ತಿಲಲ್ಲಿದೆ.ಈ ಚೈತ್ರ ಯಾತ್ರೆಯಲ್ಲಿ ಸಂಘಟನೆಗಾಗಿ ದುಡಿದ ಸರ್ವರನ್ನು ಸ್ಮರಿಸುತ್ತಾ....

*ಜಾಗತಿಕ ಮಟ್ಟದ ದಿಗ್ಗಜ ಉಲಮಾಗಳ ನೇತ್ರತ್ವದಲ್ಲಿ ಕೇರಳದ ಮಣ್ಣಿನಲ್ಲಿ ಜನ್ಮತಾಳಿ 48 ವರ್ಷಗಳಲ್ಲಿ ದೇಶ ವಿದೇಶಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಯಿಸುತ್ತಿರುವ ದೇಶದ ಅತೀ ದೊಡ್ಡ ಸುನ್ನೀ ಸಂಘಟನೇ SSF ಕರ್ನಾಟಕ ರಾಜ್ಯದ ಮಣ್ಣಿನಲ್ಲಿ 28ನೇ ವರ್ಷವನ್ನು ಪೂರೈಸುತ್ತಿರುವ SSF ಧ್ವಜ ದಿನಾಚರಣೆಯ ಅಂಗವಾಗಿ ನಿಮಗೆಲ್ಲರಿಗೂ ನನ್ನ ಹೃದಯ ತುಂಬಿದ ಶುಭಾಶಯಗಳು🌹*

*✍ಇರ್ಫಾಝ್ ತುಂಬೆ*



Technical support by rameez melkar

Monday, 18 September 2017

ಕರುನಾಡ ಮಣ್ಣಿನಲ್ಲಿ ಎಸ್ಸೆಸ್ಸಫ್ ಗಿಂದು ಇಪ್ಪತ್ತೊಂಭತ್ತರ ಜನುಮದಿನದ ಹರುಷ. ಕಳೆದು ಹೋಯಿತು ಸಾರ್ಥಕತೆಯ ಇಪ್ಪತ್ತೆಂಟು ವರುಷ..!!


ಅರ್ಥಶೂನ್ಯವಾದ ಜೀವನಕ್ಕೆ ಅರ್ಥವತ್ತಾದ ಮೌಲ್ಯಗಳನ್ನು ಕಲಿಸಿಕೊಟ್ಟು ಬೆಳೆಸಿದ ಸಂಘಟನೆ. ಅಧರ್ಮದ ಹಾದಿ ಹಿಡಿದ ಯೌವನಕ್ಕೆ, ಧಾರ್ಮಿಕ ಪ್ರಜ್ಞೆಯನ್ನು ಮೂಡಿಸಿ ಮುನ್ನೇರುತಿರುವ ಸಂಘಟನೆ.ಅನ್ಯಾಯದ ಮಾರ್ಗದಲ್ಲಿ ಸಂಚರಿಸುವಾಗ, ನ್ಯಾಯಯುತವಾದ ಹಾದಿಯನ್ನು ತೋರಿಸಿಕೊಟ್ಟ ಸಂಘಟನೆ. ಕೆಡುಕುಗಳತ್ತ ಮನಸ್ಸಿನ ಚಿತ್ತ ಬೆಳೆಯುವಾಗ, ಒಳಿತಿನತ್ತ ಕೊಂಡೊಯ್ದ ಸಂಘಟನೆ, ತನ್ನ ಧರ್ಮವನ್ನು ಪ್ರೀತಿಸುತ್ತಿರುವಾಗ, ಅನ್ಯ ಧರ್ಮವನ್ನು ಗೌರವಿಸಲು ಎಚ್ಚರಿಸುತ್ತಾ ಬಂದ ಸಂಘಟನೆ ಅದುವೇ ಎಸ್ಸೆಸ್ಸಫ್..!!
ಧಾರ್ಮಿಕ ಪ್ರಜ್ಞೆ, ಸಾಮಾಜಿಕ ಸೇವೆ,ಶೈಕ್ಷಣಿಕ ಕ್ರಾಂತಿಯ ಮೂಲಕ ಕಳೆದ ನಾಲ್ಕು ದಶಕಗಳ ಹಿಂದೆ ಜನ್ಮ ತಾಳಿದ ಎಸ್ಸೆಸ್ಸಫ್, ಕರ್ನಾಟಕದ ಮಣ್ಣಿಗೆ ಕಾಲಿರಿಸಿ ಇಪ್ಪತ್ತೆಂಟು ಸಂವತ್ಸರಗಳು ಕಳೆದು ಹೋದವು.
ಆರೋಪ,ಅಪಪ್ರಚಾರ,ಅಪಹಾಸ್ಯಗಳನ್ನೆಲ್ಲಾ ನಗುಮೊಗದಿಂದಲೇ ಸ್ವೀಕರಿಸಿ ಮುನ್ನೇರಿದ ಸಂಘಟನೆ ಕನ್ನಡ ನಾಡಿನಲ್ಲಿ ಸೃಷ್ಟಿಸಿದ ಕ್ರಾಂತಿಗಳು ಮಾತ್ರ ಅತ್ಯಧ್ಭುತವಾದದ್ದು..!!
"ಕೆಡುಕುಗಳಿಂದ ಒಳಿತಿನೆಡೆಗೆ" ಅನ್ನುವ ಉದಾತ್ತವಾದ ಘೋಷವಾಕ್ಯಗಳೊಂದಿಗೆ ಮುನ್ನೇರುತ್ತಿರುವ ಎಸ್ಸೆಸ್ಸಫ್ ಯುವ ಸಮೂಹವು ಗಾಂಜಾ,ಮಾದಕ ವಸ್ತುಗಳ ದಾಸರಾಗುತ್ತಿರುವ ಸಂದರ್ಭಗಳೆಲ್ಲಾ ಅವರನ್ನು ಅದರಿಂದ ದೂರವಿರಿಸುವಂತೆ ಮಾಡಿ, ನಿರಂತರವಾಗಿ ಅದರ ಕುರಿತು ಜಾಗೃತಿ ಆಂದೋಲನ ಒಳಿತೆನೆಡಗೆ ಅವರನ್ನು ಕೊಂಡೊಯ್ಯವಲ್ಲಿ ಸಫಲವಾಗಿದೆ.
ಸಮಾಜದಲ್ಲಿ ತಾಂಡವಾಡುವ ವರದಕ್ಷಿಣೆಯ ವಿರುದ್ಧ ಪರಿಣಾಮಕಾರಿಯಾಗುವ ಆಂದೋಲನಕ್ಕೆ ಮುನ್ನುಡಿಯಿರಿಸಿ ಸಂಘಟನೆಯ ಇಪ್ಪತ್ತೈದನೇ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಇಪ್ಪತ್ತೈದು ಸಾವಿರ ಕಾರ್ಯಕರ್ತರಿಂದ ವರದಕ್ಷಿಣೆ ವಿರೋಧಿ ಪ್ರತಿಜ್ಞೆಯನ್ನು ಸ್ವೀಕರಿಸಿ ವರದಕ್ಷಿಣೆಯ ವಿರುದ್ಧ ರಣಕಹಳೆ ಮೊಳಗಿಸುವಂತಾಗಲು ಸಂಘಟನೆ ಯಶಸ್ವಿಯಾಗಿದೆ.ಮುಂದಿನ ದಿನಗಳಲ್ಲಿ ಅದು ಸಮಾಜದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿಯಾಗಲಿ.
ಸಮುದಾಯದ ನಡುವಿನ ಪ್ರತಿಭೆಗಳು, ತಮ್ಮ ಪ್ರತಿಭೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೇ ಇರುವಂತಹ ಸಂದರ್ಭದಲ್ಲಿ ಪ್ರತಿಭೋತ್ಸವವನ್ನು ಸಂಘಟಿಸಿ ಅದೆಷ್ಟೋ ಯುವ ಪ್ರತಿಭೆಗಳ ಪ್ರತಿಭೆಯನ್ನು ಸಮಾಜಕ್ಕೆ ಅರ್ಪಿಸಲು ಸಾಧ್ಯವಾಗಿದೆ.
ಕಾಲೇಜ್ ಕ್ಯಾಂಪಸ್ ಗಳು ಅನೈತಿಕೆಯ ತಾಣಗಳಾಗುತ್ತಿರುವಂತಹ ಸಂದರ್ಭದಲ್ಲೂ, ಯತೀಂ ಮಕ್ಕಳ ಶೈಕ್ಷಣಿಕ ಶಿಕ್ಷಣಕ್ಕೆ ಅವರ ಬಡತನಗಳು ಕಾರಣಗಳಾಗುತ್ತಿರುವಾಗಲೂ ಶೈಕ್ಷಣಿಕ ಕ್ರಾಂತಿಯ ಮೂಲಕ ಅದೆಷ್ಟೋ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತು, ಸಮುದಾಯದ ನೊಂದ ಮನಸ್ಸುಗಳಿಗೆ ಆಸರೆಯಾದವು.
ಧಾರ್ಮಿಕ ಪ್ರಜ್ಞೆಯ ಅರಿವನ್ನು ಹೊಂದಿರದ ಉತ್ತರ ಕನ್ನಡದ ಹಲವು ಭಾಗಗಳಿಗೆ ಇಹ್ಸಾನ್ ತಂಡವನ್ನು ಕಳುಹಿಸಿ, ಅಲ್ಲಿಯ ಜನತೆಗೆ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವುದರ ಜತೆಗೆ, ಹಿಂದುಳಿದ ಸಮುದಾಯದ ಜನರಿಗೆ ಶೈಕ್ಷಣಿಕ ಶಿಕ್ಷಣವನ್ನು ಕೊಡಿಸುವಂತಹ ವ್ಯವಸ್ಥೆಯನ್ನು ಮಾಡಿ ಕೊಡುವಲ್ಲಿ ಸಂಘಟನೆ ಯಶಸ್ವಿಯಾಗಿದೆ.
ಸಮುದಾಯದ ಸಹೋದರಿಯರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸುತ್ತಿರುವಂತಹ ಸಂದರ್ಭದಲ್ಲೇ ಕಾಲೇಜ್ ಕ್ಯಾಂಪಸ್ ಗಳಲ್ಲಿ ಅನಗತ್ಯ ವಿವಾದಗಳು ತಲೆದೋರುವಾಗ, ಸಮುದಾಯದ ಸಹೋದರಿಯರ ಮುಂದಿನ ಶೈಕ್ಷಣಿಕ ಹಾದಿಗೆ ತೊಡಕಾಗಬಾರದು ಅನ್ನುವ ದೂರದೃಷ್ಟಿಯಿಂದ ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಸಮುದಾಯದ ಸಹೋದರಿಯರ ಶೈಕ್ಷಣಿಕ ಸಾಧನೆಗೆ ಮುನ್ನುಡಿ ಬರೆದವು.
ಕಳೆದ ಇಪ್ಪತ್ತೆಂಟು ವರ್ಷಗಳಿಂದ ಕನ್ನಡ ನಾಡಿನಲ್ಲಿ ಸಾರ್ಥಕತೆಯ ಹಾದಿಯನ್ನು ಮುನ್ನಡೆಸುತ್ತಾ ಬಂದ ಎಸ್ಸೆಸ್ಸಫ್ ಗಿಂದ ಜನುಮದಿನದ ಹರುಷ. ಸಂಘಟನೆಯ ಯಶಸ್ಸಿಗಾಗಿ ಹಲವಾರು ನಾಯಕರು ಹಲವು ತ್ಯಾಗ, ಕಷ್ಟಗಳನ್ನು ಸಹಿಸಿಕೊಂಡು ಸಂಘಟನೆಯ ಬಲವರ್ಧನೆಗೆ ಶ್ರಮಿಸಿದ್ದಾರೆ. ಹಲವು ಆರೋಪ,ಅಪಪ್ರಚಾರ, ಅಪಹಾಸ್ಯಗಳನ್ನು ಸಹಿಸಬೇಕಾಗಿ ಬಂದಾಗಲೂ ಧೃತಿಗೆಡದೆ ಮುನ್ನೇರಿದ್ದಾರೆ. ಇಪ್ಪತ್ತೆಂಟು ಸಂವತ್ಸರಗಳನ್ನು ಪೂರೈಸಿಕೊಂಡು ಇಪ್ಪತ್ತೊಂಭತ್ತನೇ ವರ್ಷಕ್ಕೆ ಕಾಲಿಡುತ್ತಿರುವ ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಎಸ್ಸೆಸ್ಸಫ್ ನ *ಧ್ವಜ ದಿನದ* ಶುಭಾಶಯಗಳನ್ನು ಸಲ್ಲಿಸುತ್ತಾ,
ಮುಂದಿನ ದಿನಗಳಲ್ಲೂ ಸಮಾಜ, ಸಮುದಾಯದ ನಡುವೆ ಸಂಘಟನೆಯು ಯಶಸ್ವಿಯಾಗಿ ಮುನ್ನೇರಲಿ ಎಂದು ಹಾರೈಸುತ್ತಿದ್ದೇನೆ.
ಸ್ನೇಹಜೀವಿ ಅಡ್ಕ

Friday, 15 September 2017

*ಎಸ್ಸೆಸ್ಸೆಫ್ ಪೆರಿಯಪಾದೆ ಶಾಖಾ ವತಿಯಿಂದ ಮಾಸಿಕ ತರಗತಿ ಹಾಗೂ ಝಿಕ್ರ್ ಮಜ್ಲಿಸ್*

ಬಂಟ್ವಾಳ: ಎಸ್ಎಸ್ಎಫ್ ಪೆರಿಯಪಾದೆ ಶಾಖೆಯ ಮಾಸಿಕ ತರಗತಿ ಹಾಗೂ ಮೆಹಫಿಲೇ ತಯಿಬ ಝಿಕ್ರ್ ಮಜ್ಲಿಸ್ ಇತ್ತೀಚೆಗೆ ಆದಂ ಗಣಪಳಿಕೆಯವರ ಮನೆಯಲ್ಲಿ ನಡೆಯಿತು.
ಕೆ.ಸಿ.ಎಫ್‌ ಕಾರ್ಯಕರ್ತರಾದ ಕಬೀರ್ ಝುಹುರಿ ಉಸ್ತಾದರು ದುವಾಗೈದು, ಹಾರಿಸ್ ಪೆರಿಯಪಾದೆ ಸ್ವಾಗತಿಸಿದರು.
ಎಸ್‌ ವೈ ಎಸ್‌ ಬಂಟ್ವಾಳ ಸೆಂಟರ್ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಅಗ್ರಹಾರ ತರಗತಿ ಮಂಡಿಸಿದರು. ಎಸ್ ವೈ ಎಸ್‌ ಇದರ ಅಗತ್ಯತೆ ಹಾಗೂ ಅದಕ್ಕೆ ನೇತೃತ್ವ ನೀಡುವ ಉಲಮಾಗಳ ಬಗ್ಗೆ ವಿವರಿಸಿ ಅತೀ ಶೀಘ್ರದಲ್ಲಿ ಎಸ್‌ ವೈ ಎಸ್‌ ಪೆರಿಯಪಾದೆ ಬ್ರಾಂಚ್ ರಚಿಸಲು ಕರೆ ನೀಡಿದರು. ಎಸ್‌ ವೈ ಎಸ್‌ ನಲ್ಲಿ ಕಾರ್ಯಾಚರಿಸುವುದು ಮರಣಾನಂತರದ ಲಾಭಕ್ಕಾಗಿ ಮಾತ್ರವಾಗಿದೆ ಎಂದು ಸಾಂಧರ್ಬಿಕವಾಗಿ ಹೇಳಿದರು. ನಂತರ ರಫೀಕ್ ಝುಹುರಿ ಉಸ್ತಾದರು ಮಾತನಾಡಿ ಕೆಸಿಎಫ್ ಸಂಘಟನೆಯ ಬಗ್ಗೆ ವಿವರಿಸಿ ಇತ್ತೀಚೆಗೆ ಹಜ್ಜ್  ವಾಲೆಂಟರ್ ಆಗಿ ಸೇವೆ ಸಲ್ಲಿಸಿದ ಕೆಸಿಎಫ್ ಕಾರ್ಯಕರ್ತರ ಕೆಲಸ ಕಾರ್ಯಗಳನ್ನು ಶ್ಲಾಘಿಸಿದರು.
ಕೊನೆಯಲ್ಲಿ ಪೊಸೋಟು ತಂಙಳ್ ಹಾಗೂ ಇತ್ತೀಚೆಗೆ ನಮ್ಮನ್ನಗಲಿದ ಇರ್ಷಾದ್ ಸ್ವಾಬಿರ್ ಮತ್ತು ನಮ್ಮೆಲ್ಲರ  ಕುಟುಂಬಸ್ಥರ ಹೆಸರಿನಲ್ಲಿ ತಹ್ಲೀಲ್ ಸಮರ್ಪಿಸಲಾಯಿತು.

*✍🏻ಹಾರಿಸ್ ಪೆರಿಯಪಾದೆ*

Popular Posts

Popular Posts

Blog Archive