ಕೇರಳದಲ್ಲಿ 44 ವರ್ಷಗಳ ಹಿಂದೆ ಹುಟ್ಟಿ ಆದರ್ಶ ವಿಪ್ಲವವನ್ನು ಸೃಷ್ಟಿಸಿದ ಸರಿಸಾಟಿಯಿಲ್ಲದ ವಿಧ್ಯಾರ್ಥಿ ಪ್ರಸ್ಥಾನ ,ಕರ್ನಾಟಕದ ಮಣ್ಣಿನಲ್ಲಿ ಅಧಿಕೃತವಾಗಿ ನೋಂದಣಿಗೊಂಡು ಇಂದಿಗೆ 28 ಸಂವತ್ಸರಗಳು ದಾಟುತ್ತಿದೆ. ಇದರ ಶುಭಸಂದರ್ಭದಲ್ಲಿ SSF ಆಲಡ್ಕ ಶಾಖೆಯ ವತಿಯಿಂದ ನಡೆದ ಧ್ವಜ ದಿನ ಸಂಗಮದಲ್ಲಿ ಧ್ವಜಾರೋಹಣ ಮತ್ತು ದುಆಗೆ ನೇತ್ರತ್ವ ನೀಡಿದ ಸ್ಥಳೀಯ ಮುದರ್ರಿಸ್ ಉಸ್ತಾದ್ ಅಶ್ರಫ್ ಖಾಮಿಲ್ ಸಖಾಫಿ ಧ್ವಜ ದಿನದ ಸಂದೇಶವನ್ನು ನೀಡಿದರು.
ಸಂಘಟನೆಯ ಕಾರ್ಯಕರ್ತರಾಗಳು ಜನರು ಬಯಸುವ ತವಕ ಮತ್ತು ದೇಶ ವಿದೇಶಗಳಲ್ಲಿ ಸಂಘಟನೆಯು ಉತ್ತುಂಗ ಸ್ಥಿತಿಗೆ ತಲುಪಲು ಹಲವಾರು ಕಾರ್ಯಕರ್ತರ, ನಾಯಕರ ನಿಷ್ಕಳಂಕವಾದ ಪರಿಶ್ರಮದ ಫಲವಿದೆ ಎಂದು ನೆನಪಿಸಿದರು. ಯುನಿಟ್ ಅಧ್ಯಕ್ಷ ಯಹ್ಯಾ ಮದನಿ ಸ್ವಾಗತಿಸಿ, ಕಾರ್ಯದರ್ಶಿ ರಹ್ಮತುಲ್ಲಾ ಸಿದ್ದೀಕ್ ವಂದಿಸಿದರು. SYS ಪ್ರಮುಖರು , ಕಾರ್ಯಕರ್ತರು ಉಪಸ್ಥಿತರಿದ್ದರು.
REPORT BY MOUSUF ABDULLA
No comments:
Post a Comment
thank you