Thursday, 12 October 2017

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ

#ವಾರಿಸ್_ಉಸ್ತಾದ್_ಹೇಗೆ_ಆರಂಭಿಸಲೆಂದು_ತಿಳಿಯುತ್ತಿಲ್ಲ....ನಾನೇನೂ ನಿಮ್ಮ ಒಡನಾಡಿಯಲ್ಲ...ಅಣ್ಣನೋ ...ತಮ್ಮನೋ ...ಅಲ್ಲ...ಹೆಚ್ಚೇಕೆ ನನ್ನ ಜೀವನದಲ್ಲಿ ಒಮ್ಮೆಯೂ ತಮ್ಮನ್ನು ನಾನು ಮುಖತ ಕಂಡಿಲ್ಲ....
ಉಸ್ತಾದ್.....ಆದರೂ...ತಮ್ಮ ಮರಣವಾರ್ತೆ ತಿಳಿದಂದಿನಿಂದ ಮನವೇಕೋ ಮಿಡಿಯುತಿದೆ...ಕೇವಲ ಒಬ್ಬನದಲ್ಲ.....ನನ್ನಂತೆಯೇ ಮರಣದ. ಮೂಲಕ ತಮ್ಮಪರಿಚಯವಾದ ಹಲವರದು....
ವ್ಯಕ್ತಿಯೊಬ್ಬನ ಮಹತ್ವ ತಿಳಿಯಬೇಕೆಂದರೆ ಆತ ಮರಣಹೊಂದಬೇಕು ಎಂಬ ಮಹಾತ್ಮರುಗಳ ಮಾತು ತಮ್ಮ ಮರಣದ ಮೂಲಕ ದಿಟವಾಗುತ್ಥಿದೆ. ತನ್ನ ಮುಂದೆ ಹಾದುಹೋದ ಜನಾಝದ ಕುರಿತು ಸ್ವಹಾಬಿಗಳು ಮೆಚ್ಚುಗೆಯ ಮಾತನ್ನಾಡಿದಾಗ ಆತ ಸ್ವರ್ಗಸ್ಥನಾದ ಎಂಬ ಪ್ರವಾದಿಯವರ ಮಾತು ನೆನಪಾಗುತ್ತಿದೆ.ಯಾಕೆಂದರೆ ತಮ್ಮ ಮರಣವಾರ್ತೆ ತಿಳಿದಾಗಲೂ ಜನರ ಒಕ್ಕೊರೊಳಿನ ಮಾತು ತಮ್ಮ ಉತ್ತಮ ವ್ಯಕ್ತಿತ್ವದ ಕುರಿತಾಗಿತ್ತು.
ಕೆಲವರಿಗಷ್ಟೇ ಪರಿಚಿತವಾಗಿದ್ದ ನಿಮ್ಮ ಹೆಸರು ಮರಣದ ಮೂಲಕ ಎಲ್ಲರೂ ತಿಳಿಯುವಂತಾಯಿತು.ರಬ್ಬೇ ....ವಾರಿಸ್ ಉಸ್ತಾದರ ಪಾರತ್ರಿಕ ಜೀವನ ಪ್ರಕಾಶಯಮಗೊಳಿಸು ಎಂಬ ಪ್ರಾರ್ಥನೆ ಎಲ್ಲೆಡೆಯೂ ಅನುರಣಿಸಿತು.ಉಸ್ತಾದ್ ತಮ್ಮಂತಹ ಭಾಗ್ಯವಂತರು ಇನ್ನಾರಿದ್ದಾರೆ..?ತನ್ನ ಶಿಷ್ಯನ ಜನಾಝ ದರ್ಶನಕ್ಕಾಗಿ ಶೈಖುನಾ ಕಾಂತಪುರಂ ಉಸ್ತಾದರು ತನ್ನೆಲ್ಲಾ ಕಾರ್ಯಕ್ರಮಗಳನ್ನು ಬದಿಗೊತ್ತಿ ಸ್ವದೇಶಕ್ಕೆ ಮರಳಬೇಕಾದರೆ.......ತಂಙಳ್ ಉಸ್ತಾದರಿಗೆ ಇನ್ನೂ ಆ ವಾರ್ತೆಯನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದಾದರೆ.....ಹೆತ್ತಬ್ಬೆಯನ್ನು ಕಳೆದುಕೊಂಡಂತೆ ರೋಧಿಸುತ್ತಿರುವ ತಮ್ಮ ಶಿಷ್ಯಂದಿರ ಕಣ್ಣೀರು ಇನ್ನೂ ಬತ್ತಿಲ್ಲವೆಂದಾದರೆ.......ಅವರೆಡೆಯಲ್ಲಿ ತಾವು ಮೂಡಿಸಿದ ಛಾಪು ಅದೆಂತಹುದೋ..
ಉಸ್ತಾದ್ ನಿಮ್ಮಂತಹ ಮರಣ ನಮಗೂ ಬರಬಾರದೇ ಎಂದು ನನ್ನಂತೆಯೇ ಹಲವರು ಚಿಂತಿಸುತ್ತಿದ್ದಾರೆ.ಹಾಗೆ ಭಾವಿಸುವುದರಲ್ಲೇನಾದರೂ ತಪ್ಪಿದೆಯೇ?ನಿಮಗೂ ತಿಳಿದಿದೆಯಲ್ಲವೇ........ಸ್ವಹಾಬಿಯೊಬ್ಬರು ಮರಣಹೊಂದಿದರು..ತನ್ನ ಶಿಷ್ಯನ ಅಂತಿಮ ಯಾತ್ರೆಯಲ್ಲಿ ಪ್ರವಾದಿವರ್ಯರ ಪ್ರಾರ್ಥನೆಯನ್ನು ಕಂಡ ಸ್ವಹಾಬಿಯೊಬ್ಬರು ಉದ್ಘರಿಸಿದ ಮಾತು...."ಆ ಮಯ್ಯಿತ್ ನಾನಾಗಿದ್ದರೇ"....
ನಾಳೆ ಪರಲೋಕದಲ್ಲಿ ಅಲ್ಲಾಹನು ನಮ್ಮನ್ನು ಒಂದುಗೂಡಿಸಲಿ ಆಮೀನ್

Wednesday, 11 October 2017

ಸಮಸ್ತ ಮುಶಾವರ ಪಂಡಿತ ಸಭೆಯ ಮುತ್ತೊಂದು ಅಸ್ತಮಿಸಿತ್ತು..

ಸಮಸ್ತ ಮುಶಾವರ ಎಂಬ ಮಹಾ ಪಂಡಿತ ಸಭೆಯ ಸದಸ್ಯರು,ಪಾಲಕ್ಕಾಡ್ ಜಿಲ್ಲಾ ಸಂಯುಕ್ತ ಖಾಝಿಯಾದ ಶೈಖುನ ಕುಮರಂಪುತ್ತೂರು ಅಲಿ ಉಸ್ತಾದ್ ವಫಾತದ ವಾರ್ತೆ ಇಡೀ ಸುನ್ನೀ ಸಂಘ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ.

ವಫಾತಿನ ಐದು ನಿಮಿಷದ ಮುಂಚೆ ಅಶಿಕ್ಕುರ್ರಸೂಲ್  ಡಾ.ಫಾರೂಕ್ ನಹೀಮಿ ಉಸ್ತಾದರ ಏಕದಿನ ಮತ ಪ್ರಭಾಷಣದ ಅಧ್ಯಕ್ಷತೆಯ ನೇತೃತ್ವವನ್ನು ವಹಿಸಿದ ಕುಮರಂಪುತ್ತೂರ್ ಅಲಿ ಉಸ್ತಾದರು ಡಾ.ಫಾರೂಕ್ ನಹೀಮಿ ಉಸ್ತಾದರು ಲೋಕ ನಾಯಕ ಪ್ರವಾದಿ ಮುಹಮ್ಮದ್ ಮುಸ್ತಾಫ(ಸ.ಅ)ರ ಹೆಸರನ್ನು ಹೇಳುವಾಗ ಉಸ್ತಾದ್ ತನ್ನ ಎರಡು ಕೈಯನ್ನು ಅಕಾಶದತ್ತ ಎತ್ತಿ ಪ್ರವಾದಿಯ ಹೆಸರಿಗೆ ಸ್ವಲಾತ್ ಹೇಳಿ ಅರ್ಧದಲ್ಲಿ ವೇದಿಕೆಯಿಂದ ಮನೆ ಕಡೆಗೆ ನಿರ್ಗಮಿಸಿದ ಉಸ್ತಾದರು ತಕ್ಷಣ ವಫತಾದರು.

ಸರ್ವ ಶಕ್ತನಾದ ಅಲ್ಲಾಹನೇ ಉಸ್ತಾದರ ಖಬುರನ್ನು ವಿಶಾಲಗೊಳಿಸು,ಉಸ್ತಾದರೊಡನೆ ನಮ್ಮನ್ನು ಸ್ವರ್ಗಿಯ ಲೋಕದಲ್ಲಿ ಒಂದುಗೂಡಿಸುವ ಸೌಭಾಗ್ಯವನ್ನು ಕರುಣಿಸು(ಅಮೀನ್)

✍ಇರ್ಫಾಝ್ ತುಂಬೆ

GRAND ULAMA CONFERENCE CLOSING CEREMONY

GRAND ULAMA CONFERENCE CLOSING CEREMONY @ UPPINANGADY ON 10-10-2017

ULAMA CONFERENCE @ UPPINANGADY ON 09-10-2017

*SELFIE-21 CAMP*

*ಎಸ್ಎಸ್ಎಫ್ ಬಂಟ್ವಾಳ ಡಿವಿಷನ್ ವತಿಯಿಂದ* 

*SELFIE-21 CAMP*

_ದಿನಾಂಕ :ಅಕ್ಟೋಬರ್ 22 ಆದಿತ್ಯವಾರ_

*ಸ್ಥಳ : ಎಸ್ಎಸ್ಎಫ್ ದಕ್ಷಿಣ ಕನ್ನಡ ಜಿಲ್ಲಾ ಸಭಾಂಗಣ ಬಿಸಿರೋಡ್*

*ಸಮಯ: 1pm to 6pm*

*GUEST*
*ಹಂಝ ಮದನಿ ಮಿತ್ತೂರು*
*ಕೆ.ಪಿ ಸಿರಾಜುದ್ದೀನ್ ಸಖಾಫಿ ಕನ್ಯಾನ*
*ಮುಹಮ್ಮದ್ ಅಲಿ ತುರ್ಕಳಿಕೆ*

*✍🏻 ಹಾರಿಸ್ ಪೆರಿಯಪಾದೆ*

ತುಂಬೆ ನಾಡನ್ನು ಧನ್ಯಗೊಳಿಸಿದ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಭೇಟಿ.



ವಿಶ್ರಾಂತಿಯಿಲ್ಲದೇ ದೇಶದಿಂದ ದೇಶಕ್ಕೆ,ಪ್ರದೇಶದಿಂದ ಪ್ರದೇಶಕ್ಕೆ,ರಾಜ್ಯದಿಂದ ರಾಜ್ಯಕ್ಕೆ,ಸಮ್ಮೇಳನದಿಂದ ಸಮ್ಮೇಳನಕ್ಕೆ ಮುಂತಾದ ಹಲವಾರು ರೀತಿಯ ಧೀನಿ ಪ್ರಭೋದನೆಯ ಕಾರ್ಯಕ್ಕೆ ಒಂದು ನಿಮಿಷವು ವಿಶ್ರಾಂತಿಯಿಲ್ಲದೇ ಓಡಾಡುವ ಜಗತ್ತು ಕಂಡ ಓರ್ವ ಅದ್ಬುತ ವಿದ್ವಾಂಸ,ಜಾಗತಿಕ ಸುನ್ನೀ ಮುಸಲ್ಮಾನರ ಅನಿಷೇಧ್ಯ ನಾಯಕ,ಸಮಸ್ತದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದರ ತುಂಬೆ ಸುನ್ನೀ ಮಕ್ಕಳ ಅಸ್ಥಾನ ಕೇಂದ್ರವಾದ ಸುನ್ನೀ ಕಲ್ಚರಲ್ ಸೆಂಟರಿನ ಭೇಟಿಯು ಇತಿಹಾಸದ ಇನ್ನೊಂದು ಪುಟ ಸೇರಿದರೆ ತುಂಬೆಯ ಮಣ್ಣು ಉಸ್ತಾದರ ಪಾವನ ಪುಣ್ಯ ಕಾಲಿನ ಸ್ಪರ್ಶದಿಂದ ಪುಣಿಯುತಗೊಂಡು ಧನ್ಯಗೊಂಡವು,ತುಂಬೆಯ ಸುನ್ನೀ ಮಕ್ಕಳ ಪಾಲಿಗೆ ಎರಡನೇ ಪೆರ್ನಾಲ್ ಎಂದೇ ಸಂಭ್ರಮಪಟ್ಟುಗೊಂಡರೆ "ಮರುಭೂಮಿಯು ಬಿಸಿಲಿನ ತಾಪಕ್ಕೆ ಮರುಭೂಮಿಯ ಮಣ್ಣು ಒಂದು ಹನಿ ನೀರಿಗಾಗಿ ಚಟಪಡಿಸುವಾ ದ್ರಶ್ಯವಾದರೆ ತುಂಬೆಯ ಮಣ್ಣು ಉಸ್ತಾದರ ಪುಣ್ಯ ಕಾಲಿನ ಸ್ಪರ್ಷಕ್ಕಾಗಿ ದಾಹದಲ್ಲಿ ಮುಳುಗಿದಾಗ ಶೈಖುನ ಎ.ಪಿ ಉಸ್ತಾದರ ಕಾಲಿನ ಸ್ಪರ್ಷದಿಂದ ತುಂಬೆಯ ಮಣ್ಣಿನ ದಾಹ ಹಾಗು ಸುನ್ನೀ ಮಕ್ಕಳ ದಾಹವು ನೀಗಿದಾಗ ಸುನ್ನೀ ಮಕ್ಕಳು ತಕ್ಬೀರ್ ಮೊಳಗಿಸಿದರು".

ಉಪ್ಪಿನಂಗಡಿಯ ಐತಿಹಾಸಿಕ ಮೂರು ದಿನಗಳ ಬ್ರಹತ್ ಉಲಮಾ ಕಾನ್ಫರನ್ಸ್ ಕಾರ್ಯಕ್ರಮದ ಮೂರನೇ ದಿನದ ಸಮರೂಪ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಯಿಸಲು ಮಂಗಳೂರಿನಿಂದ ಉಪ್ಪಿನಂಗಡಿಗೆ ಹಾದುಹೋಗಬೇಕಾದರೆ ತುಂಬೆ ರಾಷ್ಟ್ರೀಯ ಹೆದ್ದಾರಿಯ ಮೂಲಕ ಧಾಟಿಹೋಗುವ ಸನ್ನಿಹಿತವನ್ನು ಅರಿತ ಜಾತಕ ಪಕ್ಷಿಯಂತೆ ಕಾದುಕುಳಿತ ತುಂಬೆಯ ಸುನ್ನೀ ಮಕ್ಕಳು ಒಂದುಕಡೆಯಾದರೆ ಇನ್ನೊಂದು ಕಡೆ ಎ.ಪಿ ಉಸ್ತಾದ್ ಪ್ರಸ್ತುತ ತುಂಬೆಯಲ್ಲಿ ವಾಸವಾಗಿರುವ ಉಮಾರ ನಾಯಕ ಕಣ್ಣೂರಿನ ಗೋಲ್ಡನ್ ಪುತ್ತಾಕರವರ ಮನೆಯಲ್ಲಿ ಮುಂಜಾನೆಯ ಉಪಹಾರವನ್ನು ಸೇವಿಸಿ ಬರುವ ಸಂದರ್ಭವನ್ನು ಮೊದಲೇ ಅರಿತ ತುಂಬೆಯ ಸುನ್ನೀ ಕಾರ್ಯಕರ್ತರ ಕಠಿಣ ಶ್ರಮದ ಫಲವಾಗಿ ಉಸ್ತಾದರು ಕೊನೆಗೂ ಪುಣ್ಯ ಕಾಲಿನ ಭಾಗವನ್ನು ತುಂಬೆಯ ಮಣ್ಣನ್ನು ಸ್ಪರ್ಶಿಸಿ ಕೆಲವೇ ಕೆಲವು ನಿಮಿಷದಲ್ಲಿ ದುವಾ: ನಡೆಸಿ ಉಸ್ತಾದರು ಹಿಂದುರಿಗಿ ಹೋದರೆ ಸುನ್ನೀ ಮಕ್ಕಳ ಆವೇಶವು ಸಂತೋಸದ ಸಂಭ್ರಮ ಮುಗಿಲುಮುಟ್ಟುತ್ತಿದವು ಹಾಗು ತುಂಬೆಯ ಚರಿತ್ರೆಯಲ್ಲಿ ಮಾಯದ ದಿನವಾಗಿ ಐತಿಹಾಸಿಕ ದಿನವಾಗಿ ಮಾರ್ಪಟ್ಟಿತು(ಅಲ್-ಅಮ್ದುಲಿಲ್ಲಾ)

ಎರಡನೇ ವರ್ಷ ಪೂರ್ತಿಗೊಳಿಸುವ ಸಂಭ್ರಮದಲ್ಲಿರುವ ತುಂಬೆಯ ಸುನ್ನೀ ಕಲ್ಚರಲ್ ಸೆಂಟರ್ ಎಂಬ ಹದಿಹರೆಯಾದ ಕೂಸು ನಿಜಕ್ಕೂ ಇಪ್ಪತ್ತು ವರ್ಷದ ಯುವಕನಂತೆ ಹೆಮ್ಮರವಾಗಿ ತುಂಬೆಯ ನಾಡಿನಲ್ಲಿ ಸುನ್ನಿಗಳ ಆಸ್ಥಾನವಾಗಿ ಬೆಳೆದು ನಿಂತಿದೆ(ಮಾಷ ಅಲ್ಲಾ).
ಶೈಖುನ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರನ್ನು ತುಂಬೆಗೆ ಕರೆಸಿಕೊಳ್ಳಬೇಕೆಂದು SSF ತುಂಬೆ ಕಾರ್ಯಕರ್ತರು ಕಾಣುತ್ತಿದ ಕನಸು ನಿಜಕ್ಕೂ ಅರ್ಧದಷ್ಟು ಪೂರ್ತಿಯಾಯಿತು.

ಉಸ್ತಾದರನ್ನು ಒಂದು ಯಾವುದೇ ಕಾರ್ಯಕ್ರಮಕ್ಕೂ ಕರೆಸಿಕೊಳ್ಳುವುದು ಸುಲಭದ ಮಾತಲ್ಲ ಅದು ಅದೆಷ್ಟೋ ವರ್ಷಗಳ ಹಿಂದೆಯೇ ಉಸ್ತಾದರ ಬರುಯುವಿಕೆಯನ್ನು ಖಾಯಂಗೊಳಿಸಬೇಕು ಅದರಲ್ಲೂ ಉಸ್ತಾದ್ ವಿದೇಶದಲ್ಲಿ ಅಥವಾ ಯಾವುದೇ ಅಂತಾರಾಷ್ಟ್ರೀಯ ಕಾರ್ಯಕ್ರಮದಲ್ಲಿ ಭಾಗವಯಿಸಿದರೆ ಉಸ್ತಾದರಿಗೆ ಇನ್ನಿತರ ಖಾಯಂಗೊಳಿಸಿದ ಕಾರ್ಯಕ್ರಮಕ್ಕೆ ಭಾಗವಯಿಸಲು ಸಾದ್ಯವಾಗುವುದ್ದಿಲ್ಲ ವಯಸ್ಸು 80 ದಾಟಿದರು ಸರ್ವ ಶಕ್ತನಾದ ಅಲ್ಲಾಹನ ದಿವ್ಯ ಅನುಗ್ರಹದಿಂದ ಒಂದು ನಿಮಿಸವು ವಿಶ್ರಾಂತಿಯಿಲ್ಲದೇ ಓಡಾಡುವ ಓರ್ವ ಮಹಾ ಚೇತನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಅಲ್ಲದೇ ಜಗತ್ತಿನಲ್ಲಿ ಇನ್ಯಾರನ್ನು ಕಾಣಲು ಸಾದ್ಯವಾಗುವುದಿಲ್ಲ.

ಅಕಸ್ಮಿಕ ಉಸ್ತಾದರ ತುಂಬೆಯ ಭೇಟಿಯಿಂದ ತುಂಬೆ ನಾಡು ಧನ್ಯಗೊಂಡಿತು ಇನ್ಶ ಅಲ್ಲಾ ಒಂದು ಸುನ್ನೀ ಮಹಾ ಸಮ್ಮೇಲ್ಲನದ ಮೂಲಕ ತುಂಬೆಯಲ್ಲಿ ಜನಸಾಗರದ ನಡುವೆ ಉಸ್ತಾದರ ಮುಖ್ಯ ಪ್ರಭಾಷಣ ಸರ್ವಶಕ್ತನಾದ ಅಲ್ಲಾಹಾನ ದಿವ್ಯ ಅನುಗ್ರಹದೊಂದಿಗೆ ನಡೆಯಬೇಕೆಂಬ ಅಭಿಲಾಸೆಯೂ ನಮ್ಮಲ್ಲಿದೆ ಅಲ್ಲಾಹಾನು ಪೂರ್ತಿಗೊಳಿಸಲಿ (ಅಮೀನ್).

ಸರ್ವ ಶಕ್ತನಾದ ಅಲ್ಲಾಹನು ಶೈಖುನ ಸುಲ್ತಾನುಲ್ ಉಲಮಾರಿಗೆ ದೀರ್ಘ ಅರೋಗ್ಯ ಅಯುಷ್ಯವನ್ನು ದಯಪಾಲಿಸಲಿ,ಉಸ್ತಾದರ ನೆರಳಿನಲ್ಲಿ ಜೀವಿಸಲು ಸರ್ವಶಕ್ತನಾದ ಅಲ್ಲಾಹನು ನಮಗೆಲ್ಲರಿಗೂ ಸೌಭಾಗ್ಯ ನೀಡಿ ದಯಾಪಾಲಿಸಲಿ(ಅಮೀನ್ ಯಾರಬ್ಬಲ್ ಅಲಾಮೀನ್)

====================
✍ಇರ್ಫಾಝ್ ತುಂಬೆ
====================

Popular Posts

Popular Posts

Blog Archive